ಬಸ್ ಸಂಚಾರ ಆರಂಭಿಸಿ

ಬಸ್ ಸಂಚಾರ ಆರಂಭಿಸಿ
ಒಂದು ಗ್ರಾಮದ ಅಬಿವೃದ್ದಿಯಲ್ಲಿ ಆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರವನ್ನು ವಹಿಸಿರುತ್ತದೆ. ಆದರೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಬಸ್‍ಗಳು ಬರುವುದಿಲ್ಲ ಎಂದು ಹೇಳುವುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಉದಾಹರಣೆ ಎಂದರೆ ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿ ಮಾರ್ಗವಾಗಿ ಅರ್ಧ ಗಂಟೆಗೆ ಒಂದರಂತೆ  ಸಂಚರಿಸುತ್ತಿದ್ದ ಬಸ್‍ಗಳು ಇಂದು ಪವಾಡ ರೀತಿಯಲ್ಲಿ ಕಣ್ಮರೆಯಾಗಿವೆ! ಇದರಿಂದಾಗಿ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಉನ್ನತ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗೆ ಮತ್ತು ಅಗತ್ಯ ವಸ್ತುಗಳ ಖರೀದಿಗೆ  ಕಾರ್ಕಳದಂಥ ನಗರವನ್ನು ಈ ಗ್ರಾಮದ ಗ್ರಾಮಸ್ಥರು ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಹಾಗಾಗಿ ಈ ಗ್ರಾಮಸ್ಥರಿಗೆ ಬಸ್ ಸೇವೆ ಬಹಳ ಅಗತ್ಯವಾಗಿದೆ. ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚಾರವನ್ನು ಸಂಬಂಧಿಸಿದ ಅಧಿಕಾರಿಗಳು ಆರಂಭಿಸಬೇಕು. ಹಾಗೆಯೇ ಹೆದಗಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು.
-ಸೌಮ್ಯ ಮೂಡುಬಿದಿರೆ.

Comments