ಗತ ವೈಭವ ನೆನಪಿಸುವ ಶಿಲಾಶಾಸನ


                                            ಗತ ವೈಭವ ನೆನಪಿಸುವ ಶಿಲಾಶಾಸನ

ಇತಿಹಾಸ ಎಂದರೆ ಅದು ಕೇವಲ ಕಥೆಯಲ್ಲ, ಗತಿಸಿ ಹೋದ ನಮ್ಮ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ, ನಮ್ಮ ಪುರಾತನ ವೈಭವ ಮತ್ತು ದಿಗ್ವಿವಿಜಯಗಳ ಸಾಕ್ಷಿರೂಪ. ನಮಹಿಂದಿನ ಅಸ್ತಿತ್ವದ ಸಂಕೇತ, ಅದರಂತೆ ಪ್ರಾಚೀನ ಗತವೈಭವನ್ನು ಸಾರೀ ಹೇಳುವ, ಇತಿಹಾಸದ ಪುಟಗಳ ವಿವರಣೆಗೆ ಸಾಕ್ಷಿಯನ್ನು ಒದಗಿಸಬಲ್ಲ, ಇತಿಹಾಸವನ್ನೂ ನೆನಪಿಸಬಲ್ಲ ಅದೆಷ್ಟೊ ಬಸದಿಗಳು, ದೇವಾಲಯಗಳು ಈ ನೆಲದಲ್ಲಿ ನೆಲೆ ಕಂಡು ಕೊಂಡಿವೆ.

ಕಾರ್ಕಳ ತಾಲ್ಲೂಕಿನಲ್ಲಿ ಇಮತಹದ್ದೆ ಹಾಗೂ ಇದಕ್ಕೆ ಪೂರಕವಾದ ಶಿಲಾ ಶಾಸನಗಳು ಈ ಮಣ್ಣಿನಿಂದ ಉತ್ಕನನಗೊಂಡಿವೆ. ಹೀಗೆ ಒಂದಕ್ಕೊಂದು  ಜಂಟಿಯಾಗಿ ಹಲವಾರು ವಿಷಯಗಳನ್ನು ಕೆದಕುತ್ತ ಹೋದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಶಿಲಾ ಶಾಸನಗಳು ಹಲವಾರು ಕಡೆಗಳಲ್ಲಿ ಈಗಾಗಲೇ ಪತ್ತೆಯಾಗಿವೆ.

ಕಾರ್ಕಳವನ್ನು ಆಳುತ್ತಿದ್ದ ಭೈರವ ಅರಸು ಮನೆತನಕ್ಕೆ ಸಂಬಂಧಪಟ್ಟ ಕೆಲವೊಂದು ಕುರುಹುಗಳು ಈ ಭಾಗದಲ್ಲಿ ಪತ್ತೆಯಾಗಿವೆ. ಅವರ ಅರಮನೆಯ ಕುರುಹುಗಳಲ್ಲದೆ, ಇನ್ನಿತ್ತರ ಅಂಶಗಳು ಇಲ್ಲಿ ನೋಡಲು ಲಭ್ಯವಿದೆ. ಭೈರವರಸರು ಆ ಊರಿನಲ್ಲಿ ನೆಲೆಸಿದ್ದಲ್ಲದೇ ಆ ಊರಿನ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಗೇಣಿ ನೀಡುವುದು, ಕೊಡುವುದು ಗ್ರಾಮದ ರೈತರು ವ್ಯವಸಾಯದಲ್ಲಿ ಅರ್ಧದಷ್ಟು ಅರಸರಿಗೆ ನೀಡಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಅರಸ ಆಳ್ವಿಕೆಯ ಕಾಲದಲ್ಲಿ ರಾಜಿ ಪಂಚಾಯಿತಿಯ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿತ್ತು. ಈ ಬಗ್ಗೆ  ಭೈರವರಸರೇ ಸ್ವತಃ ಒಂದು ಕಲ್ಲಿನ ಮೇಲೆ ಶಾಸನವನ್ನು ಕೆತ್ತಿದ್ದರು. ಅದನ್ನು ಯಾರು ಓದಬಾರದು ಎಂಬ ವಾಡಿಕೆಯು ಅರಸರ ಆಳ್ವಿಕೆಯ ಕಾಲದಲ್ಲಿತ್ತು. ಆ ಕಲ್ಲಿಗೆ ಪ್ರತಿನಿತ್ಯ ಪೂಜೆ ನೆರೆವೆರಿಸಬೇಕಿತ್ತು. ಏನೇ ಶುಭ ಕಾರ್ಯ ಕ್ರಮವಿದ್ದರೂ ಅ ಕಲ್ಲಿಗೊಂದು ಮೊದಲ ಪೂಜೆ ಸಲ್ಲಿಸಬೇಕಿತ್ತು. ಅದನ್ನು ನಂಬದೇ ತಿರಸ್ಕರಿಸಿ ಮುಂದೆ ಸಾಗಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬ ಮಾತು ಅಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿದೆ.

ಇಂದು ಇಂತಹ ಶಿಲಾಶಾಸನವು ಕಂಡು ಬಂದಿದ್ದು, ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿ ಗ್ರಾಮದ "ಬೆಳ್ಯಾರ್ಬೆಟ್ಟು" ಎಂಬ ಮನೆಯ ಬಾಕಿಮರ್ ಗದ್ದೆಯ ದಡದಲ್ಲಿ. ಭೈರವರಸರ ಕಾಲದ ಅಂದರೆ ಸಾವಿರಾರು ವರ್ಷಕ್ಕಿಂತಲೂ ಹಳೆಯದೆನ್ನಲಾದ ಈ ಶಿಲಾಶಾಸನÀ ಆಕಾರದ ಹಾಗೂ ಅದರಲ್ಲಿರುವ ಕೆತ್ತನೆಯ ಬರಹವನ್ನು ನೋಡಿದಾಕ್ಷಣ  ಮೈ ರೋಮಂಚನಗೊಳ್ಳುತ್ತದೆ. ಶಿಲಾ ಶಾಸನದಲ್ಲಿ ಕಲ್ಲಿನ ಕೆತ್ತನೆಯಿಂದ ಸುಂದರವಾಗಿರುವ ರಥ, ಎರಡು ದೀಪದ ಹಣತೆ ಹಾಗೂ ಸೂರ್ಯ ಚಂದ್ರರನ್ನು ನಿರ್ಮಿಸಲಾಗಿದ್ದು ಹಾಗೆಯೇ ಕೆತ್ತನೆಯ ಲಿಪಿ ನೋಡಲು ತುಳು ಲಿಪಿಯನ್ನು ಹೋಲುತ್ತದೆ.
ಹಿರಿಯರೂ ಕೂಡ ಭೈರವ ಅರಸರೂ ಕೆತ್ತಲಾದ ಶಿಲಾ ಶಾಸನವನ್ನು ಇಂದಿಗೂ ಭಕ್ತಿಯಿಂದ ಪೂಜಿಸುತ್ತ, ಅದಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ಕಾಪಾಡಿಕೊಂಡು ಬಂದಿದ್ದಾರೆ.ಅದರೆ ಇಂದು ಅರಮನೆ ಸಂಪೂರ್ಣವಾಗಿ ನೆಲಸಮಗೊಂಡಿದ್ದು ಸಾವಿರಾರು ವರ್ಷಗಳ ಹಳೆಯ ಶಿಲಾಶಾಸನ ಕಾರ್ಕಳ ಭೈರವರಸರಿಗೆ ಸಂಬಂಧಪಟ್ಟಂತಹ ಎರಡನೇ ಅತ್ಯಂತ ಪ್ರಮುಖವಾದ ಪ್ರಾಚೀನ ಶಿಲಾಶಾಸನವಾಗಿದೆ ಎನ್ನುತ್ತಾರೆ ಖ್ಯಾತ ಇತಿಹಾಸ ತಜ್ಞ ಪ್ರೊ. ಟಿ. ಮುರುಗೇಶ್

ನಾನು ಹುಟ್ಟಿ ಬೆಳೆದ ಮನೆಯಿದು, ಬಾಲ್ಯದಲ್ಲಿರುವಾಗ ನಮ್ಮ ಹಿರಿಯರು ನಮ್ಮನ್ನು ಆ ಕಲ್ಲಿನ ಹತ್ತಿರ ಹೋಗದಂತೆ ತಡೆಯುತ್ತಿದ್ದರು. ಅದಕ್ಕೆ ಅವರು ಹೇಳುತ್ತಿದ್ದ ಕಾರಣ ವಿಚಿತ್ರ ಮತ್ತು ಪ್ರಶ್ನಾರ್ಥಕವಾಗಿತ್ತು. ಶಾಸನದಲ್ಲಿ ಬರೆದಿರುವ ಲಿಪಿಯನ್ನು ಓದಲು ಪ್ರಯತ್ನಿಸಿದರೆ ಅವರಿಗೆ ಹುಚ್ಚು ಹಿಡಿಯುತ್ತದೆ ಎಂಬ ನಮ್ಮ ಹಿರಿಯರ ಮಾತು ನಮ್ಮನ್ನು ತಡೆಹಿಡಿದಿತ್ತು. ಅದರೆ ನಾವು ಇಂದಿಗೂ ಅದನ್ನು ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲವೆಂಬುದೇ ಬೇಸರ ವಿಷಯ ಎನ್ನುತ್ತಾರೆ ಸ್ಥಳೀಯರಾದ ನಿತಿನ್ ಪೂಜಾರಿ.
                             
-ಸೌಮ್ಯ.ಜಾರ್ಕಳಮುಂಡ್ಲಿ

Comments