ಮಧುರ ಭಾವ

ಮಧುರ ಭಾವ

ಎಲ್ಲರೂ ಭೇಟಿ ಆಗೋಕೆ ಸಮಯ ನಿರ್ಧಾರ ಮಾಡಿದ್ರೆ, ನಮ್ಮಿಬ್ಬರ ಭೇಟಿನಾ ಆ ಸಮಯವೇ ನಿರ್ಧಾರ ಮಾಡಿಬಿಟ್ಟಿತ್ತು. ಮೊದಲ ಪ್ರೇಮ ಪತ್ರ, ಮೊದಲ ಕಿರು-ನಗೆ, ನೀನು ಕೊಟ್ಟ ಆ ಕೆಂಪು ಗುಲಾಬಿ. ವಾವ್ ಅ ನೆನಪುಗಳು ಇಂದು ನನ್ನ ಮನಸ್ಸಲ್ಲಿ ಹಸಿಯಾಗಿ ಉಳಿದಿವೆ. ಎಲ್ಲ ಪ್ರೇಮಿಗಳು ನನ್ನ ಪ್ರೀಯತಮೆ ಬೆಳದಿಂಗಳಂತೆ ಹೊಳೆಯುತ್ತಿರಬೇಕು ಎಂದು ಕನಸು ಕಂಡರೆ, ನೀನು ಮಾತ್ರ ನನ್ನ ಸೌಂದರ್ಯಕ್ಕೆ ಮರುಳಾಗದೆ, ನನ್ನ ಕಿರುನಗೆಗೆ ಮನಸೋತು ಕೈಜೋಡಿಯಾದೆ. ಪ್ರೇಮಿಗಳ ದಿನದಂದು ನಿನ್ನ ನೆನಪುಗಳು ಮತ್ತೆ ಮತ್ತೆ ಕಾಡುತ್ತಿದೆ. ಮೊದಲ ಪ್ರೀತಿಯ ಆ ಮಧುರ ಭಾವ ಇಂದಿಗೂ ಮನಸಲಿ ಹಸಿರಾಗೇ ಉಳಿದಿದೆ.
     
    ಸೌಮ್ಯ ಕಾರ್ಕಳ
ಆಳ್ವಾಸ್ ಕಾಲೇಜು ಮೂಡುಬಿದಿರೆ.

Comments