ದೇಸೀ ಖಾದ್ಯಗಳ ಪೈಕಿ ಗೋಲ್‍ಗಪ್ಪಕ್ಕಿದೆ ಸ್ಪೆಷ್ಯಲ್ ರೋಲ್....
ದೇಸೀ ಖಾದ್ಯಗಳ ಪೈಕಿ ಗೋಲ್‍ಗಪ್ಪಕ್ಕಿದೆ
ಸ್ಪೆಷ್ಯಲ್ ರೋಲ್....
ಭಾರತವು ಸಾಂಸ್ಕøತಿಕವಾಗಿ ಶ್ರೀಮಂತವಾದ ದೇಶ. ಈ ಸಂಸ್ಕøತಿ ಕೇವಲ ನಮ್ಮ ಆಚಾರ ವಿಚಾರಗಳಲ್ಲಿ ಮಾತ್ರವಲ್ಲ ಆಹಾರ ಶೈಲಿಯಲ್ಲಿಯೂ ಪ್ರತಿಬಿಂಬಿತವಾಗುತ್ತೆ. ನಮ್ಮ ಭಾರತೀಯ ಆಹಾರ ರುಚಿಕಟ್ಟಾಗಿರುವುದು ಮಾತ್ರವಲ್ಲ ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಹೀಗೆ ಭಾರತದ ಪಕ್ಕಾ ಜನಪದ ಸಂಸ್ಕøತಿಯನ್ನು, ಸ್ವಾದವನ್ನು ತನ್ನೊಳಗೆ ಇಟ್ಟುಕೊಂಡ ಖಾದ್ಯವೇ ಗೋಲ್‍ಗಪ್ಪಾ.ಈ ಗೋಲ್‍ಗಪ್ಪಾ ಯಾರಿಗ್ ತಾನೆ ಇಷ್ಟ ಇಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದಿ ಅಜ್ಜಿ ತಾತಂದಿರವರೆಗೂ ಗೋಲ್‍ಗಪ್ಪಾಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಮೂಲತಃ ಉತ್ತರಭಾರತದ ತಿನಿಸಾದ ಗೋಲ್‍ಗಪ್ಪಾ ಇಂದು ತನ್ನೆಲ್ಲ ಭಾಷೆ-ಸಂಸ್ಕøತಿಗಳ ಗಡಿಯನ್ನು ದಾಟಿ ನಿಂತಿದೆ, ಜನರ ರುಚಿಯ ಬಯಕೆಯನ್ನು ಪೂರೈಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಈ ಖಾದ್ಯ ಆಯಾ ರಾಜ್ಯಗಳಿಗೆ ತಕ್ಕಂತೆ ರುಚಿಯಲ್ಲಿ ಸ್ವಲ್ಪ ಸ್ವಲ್ಪ ಮಾರ್ಪಾಡು ಹೊಂದುತ್ತ ಸಾಗುತ್ತದೆ. ದಿನ ಸಂಜೆಯಾಗುತ್ತಿದ್ದಂತೆ ಉತ್ತರ ಭಾರತದ ಭಯ್ಯಾಗಳು ರಸ್ತೆಬದಿಯಲ್ಲಿ ತಮ್ಮ ಗೋಲ್‍ಗಪ್ಪ ವ್ಯಾಪಾರವನ್ನು ಆರಂಭಿಸುತ್ತಾರೆ. ಅವರ ಬಿಡಾರ ತೆರೆದುಕೊಳ್ಳುತ್ತಿದ್ದಂತೆ ವಯಸ್ಸಿನ ಭೇದವಿಲ್ಲದೆ ಗೋಲ್‍ಗಪ್ಪ ಅಭಿಮಾನಿಗಳು ಅದನ್ನು ಕೊಳ್ಳಲು ಮುಗಿಬೀಳುತ್ತಾರೆ.
ಇಂತಿಪ್ಪ ಗೋಲ್‍ಗಪ್ಪಕ್ಕೆ ತನ್ನದೇ ಆದ ಕಥೆಯಿದೆ. ಈ ರುಚಿಕರ ತಿನಿಸಿನ ಮೂಲ ಇರುವುದು ಮಹಾಭಾರತದಲ್ಲಿ. ಹೊಸದಾಗಿ ಮದುವೆಯಾಗಿ ಬಂದ ದ್ರೌಪದಿಗಾಗಿ ಪಾಂಡವರ ತಾಯಿ ಕುಂತಿ ಒಂದು ಪರೀಕ್ಷೆಯನ್ನಿಡುತ್ತಾಳೆ. ಒಂದಿಷ್ಟು ಗೋಧಿಹಿಟ್ಟಿನ ಜೊತೆಗೆ ಇನ್ನಿತರ ಸಾಮ್ರಾಗಿಗಳನ್ನು ನೀಡಿ ಅಡಿಗೆ ಮಾಡಲು ಹೇಳುತ್ತಾಳೆ. ಆಗ ದ್ರೌಪದಿ ತನ್ನ ಐವರು ಗಂಡಂದಿರ ಹಸಿವನ್ನು ನೀಗಿಸುವ ಸಲುವಾಗಿ ಅತ್ಯಂತ ರುಚಿಯಾದ ಖಾದ್ಯವನ್ನು ಸಿದ್ದಪಡಿಸುತ್ತಾಳೆ. ಹೀಗೆ ಆಕೆ ತಯಾರಿಸಿದ ಆಹಾರವೇ ಗೋಲ್‍ಗಪ್ಪ. ದ್ರೌಪದಿಯಿಂದ ಆರಂಭವಾದ ಗೋಲ್‍ಗಪ್ಪ ಇದೀಗ ಜನರ ಅತ್ಯಂತ ಪ್ರಿಯ ಖಾದ್ಯವಾಗಿದೆ.
ಗೋಲ್‍ಗಪ್ಪ ತಯಾರಾಗುವುದೇ ಅತ್ಯಂತ ಆಕರ್ಷಕ ರೀತಿಯಲ್ಲಿ. ಟೊಳ್ಳಾದ ಚಿಕ್ಕ ಪೂರಿಯಲ್ಲಿ ಮಸಾಲೆ ಹಾಕಿದ ಆಲೂಗೆಡ್ಡೆ, ಈರುಳ್ಳಿ, ಕೊತ್ತುಂಬರಿ, ಬಟಾಣಿ ಹಾಕಿ ಅದಕ್ಕೆ ಹುಣೆಸೆ ಹಣ್ಣಿನ ನೀರು,ಉಪ್ಪು, ಖಾರ, ಪುದೀನಎಲೆ ಸೇರಿಸಿದ ಸ್ವಾದಿಷ್ಟ ಪಾನಿಯನ್ನು ಬೆರೆಸಿ ಕೊಟ್ಟರೆ ಆ ರುಚಿಗೆ ಎಂತವರೂ ಬಾಯಿ ಚಪ್ಪರಿಸಲೇಬೇಕು. ಈ ಮಸಾಲೆ ಮಿಶ್ರಿತ ರಸಪೂರಿತ ತಿನಿಸು ವಿದ್ಯಾರ್ಥಿಗಳನ್ನು, ಯುವಜನತೆಯನ್ನು ವಿಶೇಷವಾಗಿ ಸೆಳೆಯುತ್ತದೆ.
ಇದು ಕಾಲೇಜು ವಿದ್ಯಾರ್ಥಿಗಳ, ಸ್ನೇಹಿತರ ಅಡ್ಡಾ ಕೂಡ ಹೌದು.. ಪ್ರೇಮಿಗಳ ಪಾಲಿನ ಮೀಟಿಂಗ್ ಸ್ಪಾಟೂ ಹೌದು. ಹೀಗೆ ಕೇವಲ ನಾಲಿಗೆಯ ಚಾಪಲ್ಯ ತಣಿಸುವುದು ಮಾತ್ರವಲ್ಲ, ಅದರ ಜೊತೆಗೆ ಸ್ನೇಹ ಬಾಂಧವ್ಯವನ್ನು ಬೆಳೆಸುವ-ಸಂಬಂಧಗಳನ್ನು ಗಟ್ಟಿಗೊಳಿಸುವ ತಾಕತ್ತೂ ಈ ಗೋಲ್‍ಗಪ್ಪಾಕ್ಕಿದೆ. ಮೊದಲು ಕೆಲವೇ ಸಂದರ್ಭಗಳಿಗೆ ಮೀಸಲಾಗಿದ್ದ ಗೋಲ್ಗಪ್ಪವನ್ನು ಇದೀಗ ಮದುವೆ, ಹಾಗೂ ಇನ್ನಿತ್ತರ ಶುಭ ಸಮಾರಂಭಗಳಲ್ಲೂ ವಿಶಿಷ್ಠ ತಿನಿಸಾಗಿ ಬಳಕೆ ಮಾಡುತ್ತಿದ್ದಾರೆ. ಆಹಾರ ಪದ್ಧತಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾದರೂ ಬೀದಿ ಬದಿಯಿರುವ ಸಣ್ಣ ಅಂಗಡಿಯ ರುಚಿಯನ್ನಯ ಯಾರು ಬದಲಾಯಿಸಲು ಸಾಧ್ಯವಿಲ್ಲ.. ಆದ್ರಿಂದ ಗೋಲ್‍ಗಪ್ಪನೆ ಬೇರೆ ಅದರ ಟೇಸ್ಟೇ ಬೇರೆ ಎಂಬ ಮಾತು ಯಾವತ್ತೂ ಸುಳ್ಳಲ್ಲ.
- ಸೌಮ್ಯ ಆಳ್ವಾಸ್ ಕಾಲೇಜು ಮೂಡುಬಿದಿರೆ
Comments
Post a Comment