ಮನಸ್ಸು ಚಂಚಲ - ಹೃದಯ ವಿಲವಿಲ

                                            ಮನಸ್ಸು ಚಂಚಲ
                                                            ಹೃದಯ ವಿಲವಿಲ
ಎಷ್ಟು ವಿಚಿತ್ರ ಅಲ್ವಾ ಜೀವನ!.. ಕಣ್ಣಿಗೆ ಕಾಣುವ ಚಿತ್ರಣಕ್ಕಿಂತ ಕಾಣದೇ ಇರುವುದರ ಮೇಲೆ ಹಂಬಲ ಜಾಸ್ತಿ.
ಪ್ರಥಮ ವರ್ಷದ ಬಿ.ಎ ವಿದ್ಯಾಭ್ಯಾಸಕ್ಕೆಂದು ಅಡ್‍ಮಿಶನ್‍ಗೆ ಹೋದೆ, ಅಲ್ಲಿ ಎಲ್ಲ ಮುಖಗಳು ಅಪರಿಚಿತ ಎನಿಸಿದವು, ಅಷ್ಟು ಜನಜಂಗುಳಿ ನಡುವೆ ನಾನು ಒಂದು ಬದಿ ಬಂದು ಕೂತುಬಿಟ್ಟೆ. ಆ ಸಂದರ್ಭದಲ್ಲಿ ದಿಢೀರನೆ ಒಬ್ಬ ಅಪರಿಚಿತ ಹುಡುಗನು ನನ್ನ ಕಾಲು ಮೆಟ್ಟಿ ನಡೆದು ಹೋದ, ಇನ್ನೇನು ನಾನು ಎದ್ದು ಅವನನ್ನು ಬೈದುಬಿಡಬೇಕು ಅನ್ನೊವಷ್ಟರಲ್ಲಿ ಆ ಹುಡುಗ ನನ್ನ ಕಣ್ಣೆದುರು ಪಾಸಾಗಿಬಿಟ್ಟ. ಆದ್ರೂ ನನ್ನ ಮನಸ್ಸು ಅವನಿಗೆ ಬೈದುಬಿಡಬೇಕು ಅನಿಸಿರಲ್ಲಿ, ಅವನ ಮುಖ ಸರಿಯಾಗಿ ಗುರುತಿಸದ ಬದಲು ಅವನ ತಲೆ ಕೂದಲಿನ ವರ್ಣಕ್ಕೆ ಮರುಳಾದೆ. ವಾವ್ ಎಷ್ಟು ಚಂದ ಇದೆ ಹೇರ್ ಸ್ಟೈಲ್ ...ಅನ್ನೂವಷ್ಟರಲ್ಲಿ ಮಾಯಾ ಜಿಂಕೆಯನ್ನು ಮಾಯಾಗಿ ಹೋದ...
ಕಾಲೇಜು ಜೀವನದಲ್ಲಿ ಪ್ರೀತಿ, ವಿಶ್ವಾಸ, ಆಕರ್ಷಣೆ, ಇವೆಲ್ಲವು ಸಹಜ. ಆದರೆ ನನ್ನ ಜೀವನದಲ್ಲಿ ಮೊದಲ ಭಾರಿ ಹೇರ್ ಸ್ಟೈಲ್‍ನ ಸೆಳತಕ್ಕೆ ನನ್ನೀ ಈ ಮನಸ್ಸುಗಳು ಮರುಳಾಗಿ ಹೋಯಿತು. ಮೊದಲ ವರ್ಷದ ಡಿಗ್ರಿ ವ್ಯಾಸಂಗಕ್ಕೆ ಕಾಲಿಟ್ಟಾಗ ಕಣ್ತುಂಬ ನೂರಾರು ಕನಸು, ನಿರ್ಧರಿಸಿದ ಗುರಿ ಸೇರಲೇಬೇಕೆಂಬ ಹುಮ್ಮಸ್ಸು ಒಂದು ಕಡೆ ಆದರೆ.. ಮತ್ತಷ್ಟೂ ಕಾಡುವ ಆ ಅಪರಿಚಿತ ಹುಡುಗನ ಹೇರ್ಸ್ಟೈಲ್ ಆಕೃತಿ.. ನನ್ನ ಪ್ರಥಮ ವರ್ಷದ ಡ್ರಿಗಿ ಮುಗಿಯುತ್ತ ಬಂದ್ರು, ಈಡೀ ಕಾಲೇಜುಲ್ಲಿ ಅವನ ಸುಳಿವೇ ಇಲ್ಲವಾಯಿತು.
ಕೊನೆಗೊಂದು ದಿನ ನನ್ನ ಫ್ರೇಂಡ್ಸ್ ಜೊತೆ ಮಧಾಹ್ನ ಊಟಕೆಂದು ಕ್ಯಾಂಟೀನ್ಗೆ ಹೋದೆವು. ಅಲ್ಲಿ ನಾನು ಇಷ್ಟು ದಿನಗಳ ಕಾಲ ಯಾರಿಗಾಗಿ ಕಾತುರದಿಂದ ಹುಡುಕಾಡಿದೆನೋ ಅವನೇ ನನ್ನ ಕಣ್ಣೆದುರು ಪ್ರತ್ಯಕ್ಷನಾದ.... ಅಂದೇ ನಮ್ಮಿಬ್ಬರ ಮೊದಲು ಭೇಟಿ. ಎದೆಬಡಿತ ಜೋರಾಗಿ ನನ್ನ ಮನಸ್ಸಲ್ಲಿ ಭಯವು, ಖುಷಿಯು ಒಂದಾಗಿಬಿಟ್ಟಿತು. ಅದೇ  ಹೇರ್ಸೈಲ್, ಅವನೇ ಇವನು....ಹೌದು ನಾನು ಇಷ್ಟು ದಿನದಿಂದ ಇವನಿಗಾಗಿ ಹುಡುಕಾಡಿದ ಕ್ಯಾರಿಡಾರ್ ಇಲ್ಲ... ಇವತ್ತು ನನ್ನ ಕಣ್ಣೆದುರು....ನಂಬಲು ಅಸಾಧ್ಯವಾಯಿತು..ಹೋಗಿ ಅವನ ಜೊತೆ ನಿಂತು ಮಾತಾನಾಡಿಸಲು ಆ ಧೈರ್ಯ ನನ್ನಲ್ಲಿ ಇಲ್ಲ. ಯಾಕೆಂದರೆ ಅವನು ಸೀನಿಯರ್ ಬೇರೆ....
ಎರಡು ಜೀವಗಳನ್ನು ಒಂದು ಮಾಡುವ ಶಕ್ತಿ ಇರುವುದೇ ಪ್ರೀತಿ ಎಂಬ ಎರಡಕ್ಷರಕ್ಕೆ ಮಾತ್ರ ಸಾಧ್ಯ. ಆದ್ರೆ ನನ್ನ ಜೀವನದಲ್ಲಿ ಪ್ರೀತಿ ಪಡೆಯುವಲ್ಲಿ ನಾನು ಸೋತು ಹೋದೆ ಅನಿಸಿತ್ತು. ಇದೇನೋ ಕನಸ್ಸು ಅಥವಾ ನನಸ್ಸು ಅಂತನೋ ನನಗೆ ಒಂದು ಗೊತ್ತಿಲ್ಲ. ಆದ್ರೆ ನನ್ನ ದುರದೃಷ್ಟಾದ ಮಟ್ಟಿಗೆ ಪ್ರೀತಿ ಅನ್ನೋ ಹೆಸರೇ ಬರೀ ಸುಳ್ಳಾಗಿ ಹೋಯಿತೆ. ಪ್ರೀತಿ ಪಡೆಯೋಕೋ ಯೋಗ್ಯರಾಗಿರಬೇಕು ಅಂತ ನೀನೆ ತಿಳಿಸಿ ಬಿಟ್ಟೇ. ಎಂದೆಂದಿಗೂ ನಾ ಕೂಗಿ ಹೇಳುವೆ ನನ್ನ ಜೀವನದ ಮೊದಲ "ಕ್ರಷ್" ಗೆಳೆಯನೇ ನೀನು...
ನನ್ನಂತಹ ಮನಸ್ಸುಗಳು ಎಂದಿಗೂ ಕಾಣದ ಕಡಲಿನ ಕಡೆ ಹಂಬಲಿಸಬಾರದು. ನಾನು ಕೊನೆಗೂ ಕಾಣದ ಪ್ರೀತಿ ಮೇಲೆ ತುಂಬಾ ನಂಬಿಕೆ ಇಡಬಾರದು ಅನಿಸಿತ್ತು. ಇದೇ ಅಲ್ಲವೇ ಯೌವನದ ಯಾವುದೇ ಪರಧಿಯನ್ನು ಅರಿಯದ, ಕೇವಲ ಮನಸಿನ ಭಾವನೆಗಳನ್ನಷ್ಟೇ ಹಂಚಿಕೊಳ್ಳುವ ಆ ಪ್ರೀತಿ. ತುಂಬಾ ದಿನ ಉಳಿಯಲಿಲ್ಲವಾದರೂ, ನನ್ನ ಮೊದಲ ಪ್ರೀತಿಯ ಆ ಮಧುರ ಭಾವ ಇಂದಿಗೂ ಮನಸಲಿ ಹಸಿರಾಗೇ ಉಳಿದಿದೆ....
                             ಸೌಮ್ಯ ಕಾರ್ಕಳ.
                       ಆಳ್ವಾಸ್ ಕಾಲೇಜು ಮೂಡುಬಿದಿರೆ...
                         




Comments