ಬಹುಮುಖ ಪ್ರತಿಭೆಯ ಸಂಕಲನ ಆಚಾರ್ಯ


                              ಬಹುಮುಖ ಪ್ರತಿಭೆಯ ಸಂಕಲನ ಆಚಾರ್ಯ

[ಬರವಣಿಗೆಗೆ ಸಿದ್ಧ, ನಟನೆಗೆ ಬದ್ಧ, ನಿರೂಪಣೆಯಲ್ಲೂ ಗೆದ್ದ ಉಡುಪಿಯ ಪ್ರತಿಭೆ]

ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಯುವ ಜನಾಂಗಕ್ಕೆ ಸಾಹಿತ್ಯದ ಕಡೆ ಒಲವು ಕಡಿಮೆಯಾಗುತ್ತದೆ ಎಂಬ ಅಪವಾದಗಳಿವೆ. ಆದರೆ ಇಲ್ಲೊಬ್ಬ ಯುವ ಸಾಹಿತಿ ಆ ಮಾತನ್ನು ಸುಳ್ಳು ಮಾಡುವ ರೀತಿಯಲ್ಲಿ, ಅನೇಕ ಕಲೆಗಳಲ್ಲಿ ತಾನು ತೊಡಗಿಸಿಕೊಂಡು ಯುವ-ಜನಾಂಗಕ್ಕೆ ಮಾದರಿ ಆಗಿದ್ದಾರೆ. ಅವರೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಶ್ರೀರಾಜ್ ಆಚಾರ್ಯ.


ಗ್ರಾಮೀಣ ಪ್ರದೇಶದ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಎಚ್.ಆರ್. ಶ್ರೀನಿವಾಸ ಆಚಾರ್ಯ ಮತ್ತು ಭವಾನಿ ಎಸ್ ಆಚಾರ್ಯ ದಂಪತಿಯ ಏಕಮಾತ್ರ ಪುತ್ರನಾಗಿ ಜನಿಸಿದ ಶ್ರೀರಾಜ್ ಆಚಾರ್ಯ, ಬಹುಮುಖ ಪ್ರತಿಭೆಗಳ ಸಂಗಮ. ಚಿಕ್ಕ ಮಯಸ್ಸಿನಿಂದಲೇ ಕಲೆ ಸಾಹಿತ್ಯ, ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಶ್ರೀರಾಜ್ ಬರವಣಿಗೆ, ನಿರೂಪಣೆ, ಯಕ್ಷಗಾನ, ನಾಟಕ, ಮೊದಲಾದ ಕಲೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶಾಲಾ ಮಟ್ಟದಿಂದಲೇ ಎಲ್ಲರ ಗಮನ ಸೆಳೆದವರು.

ಮೂರನೇ ತರಗತಿಯಿಂದಲೇ ಯಕ್ಷಗಾನ ತರಬೇತಿ ಪಡೆದು ಅನೇಕ ಬಾಲ ಪಾತ್ರ, ಪುಂಡು ವೇಷ, ಖಳ ಪಾತ್ರವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವೀರಮಣಿ ಕಾಳಗದ ಶುಭಾಂಗನಾಗಿ, ರುಕ್ಮಾಂಗನಾಗಿ, ಕಂಸ ದಿಗ್ವಿಜಯದ ಬಾಲ ಕಂಸನಾಗಿ , ಜರಾಸಂಧನಾಗಿ, ಶಶಿಪ್ರಭಾ ಪರಿಣಯದ ಮಾರ್ತಾಂಡ ತೇಜನಾಗಿ, ರುಕ್ಷಿಣಿ ಸ್ವಯಂವರದ ಶಿಶುಪಾಲನಾಗಿ, ಕಾಳಿಂಗ ಮರ್ದನದ ಕಾಳಿಂಗನಾಗಿ ಹೀಗೆ ಅನೇಕ ಪಾತ್ರಗಳಲ್ಲಿ ಅಭಿನಯಿಸಿ ಯಕ್ಷಗಾನ ಲೋಕದಲ್ಲೂ ಪ್ರಭಾವಿತರಾಗಿದ್ದಾರೆ.



 ರಾಜ್ಯ, ರಾಷ್ಟ್ರಮಟ್ಟದ  ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದಲ್ಲದೆ. ಕಥೆ, ಕವನಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಸಂಕೀರ್ಣ ಕಾರ್ಯಗಾರಗಳನ್ನು  ನೀಡುತ್ತ ಬಂದಿರುವುದು ಹೆಮ್ಮೆಯ ಸಂಗತಿ. ಇದೀಗ ಪ್ರಸುತ್ತ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಉಡುಪಿಯ ಸ್ಥಳೀಯ ಮಾಧ್ಯಮ ಪ್ರೈಮ್ ಟಿವಿಯಲ್ಲಿ ಸುದ್ದಿ ವಿಶ್ಲೇಷಕರಾಗಿ, ನಿರೂಪಕರಾಗಿ, ಸಂದರ್ಶಕನಾಗಿ ಮೂರು ವರ್ಷ ಕಾರ್ಯ ನಿರ್ವಹಿಸುವ ಅವಕಾಶಗಳು ಶ್ರೀರಾಜ್‍ರವರಿಗೆ ಲಭಿಸಿದೆ. ಇಂತಹ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.



ಸಮಾಜಮುಖಿ ಚಿಂತನೆಗಳ ಆಶಾವಾದಗಳನ್ನು ಒಳಗೊಂಡಿರುವ ಎರಡು ಸ್ವರಚಿತ ಕವನಗಳಾದ “ರಿಕ್ತ ನಕ್ಷತ್ರ” ಹಾಗೂ “ಚಲಿಸುವ ಮೋಡಗಳು ಮಧ್ಯದಿ” ಬಿಡುಗಡೆಗೊಂಡಿವೆ. ಇವರ ಮೊದಲ ಕವನ ಸಂಕಲನ "ರಿಕ್ತ ನಕ್ಷತ್ರ'ಕ್ಕೆ "ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ" ಹಾಗೂ "ಕರ್ನಾಟಕ ಬಾಲ ವಿಕಾಸ ಅಕಾಡೆಮಿ" ಧಾರವಾಡ, ಇವರ ಸಹಯೋಗದೊಂದಿಗೆ "ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ)" ಬೆಂಗಳೂರು. ಕಡೆಯಿಂದ ಇವರು ಬರೆದ ಕವನಕ್ಕೆ "ಕರುನಾಡ ಕಣ್ಮಣಿ ಕವಿರತ್ನ ಪ್ರಶಸ್ತಿ"ಲಭಿಸಿದೆ. ಕಾವ್ಯ ಲೋಕದಲ್ಲಿ ಒಂದು ಒಳ್ಳೆಯ ಸ್ಥಾನ ಗಳಿಸುವಲ್ಲಿ ಇವರ ಪ್ರಯತ್ನವೂ ಶ್ಲಾಘನೀಯವಾದುದು. ಬರೆಯುವ  ಆಸಕ್ತಿಯೊಂದಿಗೆ ಮುಂದಿನ ದಿನದಲ್ಲಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಬೇಕೆಂಬುದು ಬಹುದೊಡ್ಡ ಕನಸು ಇವರದಾಗಿದೆ.






ಶ್ರೀರಾಜ್ ಎಸ್, ಆಚಾರ್ಯ ಅವರ ಇತ್ತೀಚಿಗೆ ಅಷ್ಟೇ ಬಿಡುಗಡೆಯಾದ "ಕತ್ತಲೆಯ ಬೆತ್ತಲು" ಕಥಾ ಸಂಕಲನ ಸ್ತ್ರೀ ಸಂವೇದನೆಯ ಕೃತಿಯಾಗಿದ್ದು. ಮಹಿಳೆಯ ಬದುಕು, ಅವಳ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕೈಕನ್ನಡಿ ಹಿಡಿಯುವಂತಹ ಕಥೆ ಒಳಗೊಂಡಿರುವುದು ಇನ್ನೊಂದು ವಿಶೇಷ. ಸದಾ ಒಂದಲ್ಲ ಒಂದು ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ವಿಶಿಷ್ಟ ಬರವಣಿಗೆ ಶೈಲಿಯ ಕವನಗಳು, ಲೇಖನಗಳು, ಹಾಗೂ ಇನ್ನಿತ್ತರ ಕ್ಷೇತ್ರದಲ್ಲೂ ತಮ್ಮ ಛಾಪನ್ನ ಮೂಡಿಸಿದ್ದಾರೆ.ಹೀಗೆ ಮತ್ತಷ್ಟು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಲಿ ಎಂದು ಹಾರೈಸೋಣ.

                                                     
                                                                                                                              -ಸೌಮ್ಯ ಕಾರ್ಕಳ

ಬಾಕ್ಸ್:
"ಕಾವ್ಯ ಅಥವಾ ಕವಿತೆ ಅಭಿವ್ಯಕ್ತಿ ಅಲ್ಲ.ಅದು ಬದುಕು ಮತ್ತು ಭಾವನೆಗಳ ಸಂಕಲನ. ಬರೆಯುವವರೆಲ್ಲಾ ಕವಿಗಳಾಗುವುದಿಲ್ಲ, ಬರೆದದ್ದೆಲ್ಲಾ ಕವಿತೆಯಾಗುವುದಿಲ್ಲ. ಯಾವುದು ಅನುಭವಕ್ಕೆ ಬಂದು ಭಾಷೆ ಮತ್ತು ಭಾವಗಳ ಜೊತೆಗೆ ಬೆರೆಯುವುದೋ ಅದೇ ಕಾವ್ಯ"
 -ಕಾವ್ಯ ಬೈರಾಗಿ, ಶ್ರೀರಾಜ್ ಎಸ್. ಆಚಾರ್ಯ


















Comments