ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ....
ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ....
ಬೆಲೆ ಕಟ್ಟಲಾಗದ ಸಂಬಂಧ ಅಂದ್ರೆ ಅದು ಅಣ್ಣ-ತಂಗಿಯ ಸಂಬಂಧ. ಅಣ್ಣ ಯಾವತ್ತೂ ತಂಗಿನ ನಾ ನಿನ್ನ ಪ್ರೀತಿಸುವೆ ಎಂದೂ ಹೇಳುವುದಿಲ್ಲ, ಆದರೆ ಖಂಡಿತ ತಂಗಿಗೆ ಅಣ್ಣನಷ್ಟು ಪ್ರೀತಿಸುವ ಜೀವ ಇನ್ನೊಂದು ಸಿಗೋದಿಲ್ಲ. ಅಣ್ಣ ಮತ್ತು ತಂಗಿಯ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯಂತೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತೆ. ರಕ್ಷಾಬಂಧನದಲ್ಲಿ ಎರಡು ಪದಗಳಿವೆ ಅದೇ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಂಡು ಕೊನೆಗೊಳ್ಳದ ಪ್ರೀತಿಯೆಂದರೆ ಅದೇ ರಕ್ಷಾಬಂಧನ. ಅಣ್ಣ- ತಂಗಿಯಯರ ನಡುವಿನ ಭಾಂದವ್ಯ ಗಟ್ಟಿತನ ಹೊಂದಲಿ ಅನ್ನುವ ಕಾರಣಕ್ಕಾಗಿ ರಕ್ಷಾಬಂಧನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತೆ.
ಭೂಮಿ ಮೇಲಿನ ಹಲವಾರು ಸಂಬಂಧಗಳಿಗೆ ಬೆಲೆ ಕಟ್ಟಲಾಗುದು. ಅದರಲ್ಲೂ ಅಣ್ಣ-ತಂಗಿಯ ಸಂಬಂಧವು ಪ್ರಮುಖವಾಗಿರುತ್ತದೆ. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಹಾಗೂ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು, ಅದೇ ರೀತಿಯಲ್ಲಿ ಅಣ್ಣನಾದವನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿದ್ದರು ಸ್ವತಃ ತನ್ನ ತಂಗಿಯು ಜವ್ದಾಬಾರಿಯನ್ನ ತಾನೊಬ್ಬನೇ ಹೊತ್ತುಕೊಳ್ಳುವತಾನೇ ಅಣ್ಣನಾದವನ ಕರ್ತವ್ಯ. ಅಣ್ಣ ತಂಗಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು ಹೆಚ್ಚಾಗಿ ಆಚರಿಸಿಕೊಳ್ಳುವರು. ರಕ್ಷಾ ಬಂಧನವನ್ನು ರಾಷ್ಟ್ರದೆಲ್ಲೆಡೆಯಲ್ಲಿ ತುಂಬಾ ಸಂಭ್ರಮದಿಂದ ಆಚರಿಸುತ್ತಾರೆ. ಇದು ಹಿಂದೂಗಳ ಹಬ್ಬವಾದರೂ ಹೆಚ್ಚಿನ ಧರ್ಮಗಳಲ್ಲಿ ರಕ್ಷಾಬಂಧನ ಸಂಭ್ರಮದ ಆಚರಣೆಯು ಇಂದಿಗೂ ರೂಢಿಯಲ್ಲಿದೆ. |
ಪ್ರತಿ ವರ್ಷ ನಾನು ನನ್ನ ಸೋದರರಿಗೆ ಪ್ರೀತಿಯಿಂದ ರಕ್ಷಣೆಯುಳ್ಳ ರಕ್ಷಾಬಂಧನವನ್ನು ಅಣ್ಣನ ಕೈಗೆ ಕಟ್ಟುವೆ. ರಾಖಿ ಎಂದು ಕರೆಯಲ್ಪಡುವಂತಹ ಸಣ್ಣ ದಾರ ಆದರೂ ಅದರ ಮಹತ್ವ ಎರಡುಪಟ್ಟು ದೊಡ್ಡದು. ರಾಖಿ ಕಟ್ಟುವ ವೇಳೆ ತನ್ನ ಸೋದರನಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯವು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆÉ. ಇದಕ್ಕೆ ಪ್ರತಿಯಾಗಿ ನನ್ನ ಅಣ್ಣ ತನ್ನ ತಂಗಿಗೆ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ರಕ್ಷಿಸುವ ಭರವಸೆ ನೀಡುತ್ತಾನೆ, ನನ್ನ ಮೇಲೆ ಇಡುವ ಸಂಪೂರ್ಣ ಕಾಳಜಿ, ಅಣ್ಣ ಮೇಲಿರುವ ಅಕ್ಕರೆ, ನವಿರಾದ ಬಾಂಧವ್ಯ ಅಂತಾನೇ ಹೇಳಬಹುದು. ಇದು ಅಣ್ಣ-ತಂಗಿಯ ಸಂಬಂಧ, ಏಳು ಜನ್ಮಗಳ ಅನುಬಂಧ. ನಮ್ಮಿಬ್ಬರ ನಡುವಿನ ಬಂಧವು ಯಾರು ಬಿಡಿಸಲಾಗದ ಕಗ್ಗಂಟು. ಅಷ್ಟೂ ಜೋಪಾನವಾಗಿ ಭದ್ರವಾಗಿ ಕಾಪಾಡಬೇಕು.
ಇತ್ತೀಚಿನ ದಿನಗಳಲ್ಲಿ ರಾಖಿಯಲ್ಲೂ ನಮ್ಮನೆಲ್ಲ ಆಕರ್ಷಿಸುವಂತಹ ನವಿರಾವಾದ ಹಲವಾರು ತರಹ ಶೈಲಿಯ, ವಿವಿಧ ಬಣ್ಣಗಳ ರಾಖಿಯು ಸಿದ್ದಗೊಂಡು. ರಾಖಿ ಹಬ್ಬದ ಮುಂಚಿತ ದಿನಗಳಲ್ಲೇ ಮಾರೂ ಕಟ್ಟೆಗೆ ಲಗ್ಗೆ ಇಟ್ಟಿದೆ. ತನ್ನ ಪ್ರೀತಿಯ ಒಡಹುಟ್ಟಿದ ಸೋದರನಿಗೆ ಯಾವ ರೀತಿಯ ರಾಖಿಯನ್ನ ಕೊಂಡುಕೊಳ್ಳಲಿ ಅನ್ನೊ ಯೋಚನೆಯಲ್ಲಿರುತ್ತಾರೆ.
ಫ್ರೈಮರಿ ಶಾಲೆ ದಿನಗಳಲ್ಲಿ ರಾಖಿ ಹಬ್ಬ ಅಂತೂ ಬಲು ಗಮ್ಮತ್ತು. ಯಾಕೆಂದರೆ ಚಿಕ್ಕವರಿದ್ದಾಗ ರಾಖಿ ಹಬ್ಬದ ಮಹತ್ವ ತಿಳಿದಿರಲಿಲ್ಲ ಅಣ್ಣ,ಅಕ್ಕ, ತಂಗಿ, ಅಪ್ಪ-ಅಮ್ಮ ಹೀಗೆ ಸಿಕ್ಕವರಿಗೆಲ್ಲ ರಾಖಿ ಕಟ್ಟುವುದು-ತಾನು ಕಟ್ಟಿಸುವುದಕ್ಕೂ ಲೆಕ್ಕನೇ ಇರುತ್ತಿರಲಿಲ್ಲ. ಅ ದಿನದ ರಾಖಿ ಸಂಭ್ರಮ ಅಂತೂ ಬಲು ಜೋರು.. ಹಿಂದಿನ ದಿನಗಳಲ್ಲಿ ಸಾಮೂಹಿಕವಾಗಿ ಆರ್.ಎಸ್.ಎಸ್‍ನ ತಂಡದವರು ಬಂದು ಶಾಲೆಗಳಲ್ಲಿ ರಕ್ಷಾಬಂಧನವನ್ನು ಆಚರಿಸುತ್ತಿದ್ದರು. ಹದಿಹರೆಯದ ಮುದ್ದು ಜೀವಿಗಳಿಗೆ ರಾಖಿ ಹಬ್ಬ ಬಂತಂದೆರೆ ತುಂಬಾ ಖುಷಿ...
ಭಾರತೀಯ ಸಂಸ್ಕøತಿಯಲ್ಲಿ ಒಂದಾದ ರಾಖಿ ಹಬ್ಬವು ವಿಶಿಷ್ಟ ರೀತಿಯ ಆಚರಣೆಯಲ್ಲಿತ್ತು, ಆದರೆ ಇವಾಗ ರಾಖಿ ಹಬ್ಬವು ಹುಡುಗಾಟಿಕೆ ಕಾರಣವಾಗಿದೆ. ಎಲ್ಲಿ ಅಣ್ಣ ತಂಗಿನ ಪ್ರತಿಬಿಂಬಿಸುವಂತಹ ರಾಖಿ ಹಬ್ಬ. ಇಂದು ರಾಖಿ ಹಬ್ಬದ ಸಂಪೂರ್ಣ ಮಹತ್ವವನ್ನು ಕಳೆದುಕೊಂಡಿದೆ. ಎಂದಿಗೂ ರಾಖಿಗೆ ಇರುವ ಮಹತ್ವರವದ ಸ್ಥಾನಮಾನವನ್ನು ಕಳೆದುಕೊಳ್ಳಬಾರದು. ಮೊಗೆದಷ್ಟು ಬರಿದಾಗದ ನಿಷ್ಕಲ್ಮಶ ಪ್ರೀತಿಯ ದ್ಯೋತಕವೇ ಈ ರಾಖಿ. ಸೋದರಿಯ ಬಗ್ಗೆ ಸದಾ ಕಾಳಜಿ ವಹಿಸುವ ಸೋದರನ ಬಾಳು ಸುಖ, ಸಮೃದ್ಧವಾಗಿರಲಿ. ಆತನಿಗೆ ಶ್ರೇಯಸ್ಸನ್ನು ಕೋರಿ. ನೈತಿಕ ಬೆಂಬಲ ಸೂಚಕವಾಗಿ ರಾಖಿ ಕಟ್ಟುವುದೇ ಒಂದು ಹಬ್ಬದ ಆಶ್ರಯ.
#ಚಿತ್ತಾರ
Comments
Post a Comment