ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ಸಾಧಕಿ

                                   ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ಸಾಧಕಿ
                                                  ಯೋಗ ಸಾಧನೆಯ
[ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಸ್ವಪ್ನ ಪೂಜಾರಿ ಯೋಗದ ಮುಖಾಂತರ ಗಮನಸೆಳೆದಿದ್ದಾರೆ. ಡಿಪ್ಲೋಮಾ ಇನ್ ಫ್ಯಾಷನ್ ಡಿಸೈನರ್ ವಿದ್ಯಾರ್ಥಿಯಾಗಿರುವ ಅವರು ಇತ್ತೀಚಿಗೆ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಚಾಂಪಿಯನ್ ಷಿಷ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.]

ಇವರು ಮಾಡೋ ಯೋಗ ನೋಡಿದರೆ ಮೈಯಲ್ಲಿ ಮೂಳೆಗಳು ಇವೆಯೋ ಇಲ್ಲವೋ ಎಂಬ ಸಂಶಯ ಬರುವುದು ಸಹಜ. ಉನ್ನತ ಶಿಕ್ಷಣಕ್ಕಾಗಿ ಆಯ್ದುಕೊಂಡ ಡಿಪ್ಲೋಮ ಇನ್ ಫ್ಯಾಷನ್ ಡಿಸೈನರ್ ಆದರೂ, ಯೋಗದ ಮುಖಾಂತರ ಎಲ್ಲರನ್ನೂ ಗಮನಸೆಳೆದಾಕೆ. ಯೋಗವನ್ನು ಜೀವನ ಶೈಲಿಯಾಗಿಸಿಕೊಳ್ಳುವುದರ ಜೊತೆಗೆ, ಸತತ ಪರಿಶ್ರಮ, ಉತ್ಸಾಹ ಹಾಗೂ ಪ್ರೀತಿಯಿಂದ ಯೋಗದಲ್ಲಿ ಪಳಗಿದ್ದಾರೆ.

ಇವರೇ ಕಾರ್ಕಳ ತಾಲ್ಲೂಕಿನ ಹೆರ್ಮುಂಡೆ ಗ್ರಾಮದ ಸ್ವಪ್ನ ಪೂಜಾರಿ. ಅವರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿದವರು ಹೆರ್ಮುಂಡೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ನರೇಂದ್ರ ಕಾಮತ್. ಅವರ ತರಬೇತಿಯಿಂದ ಸ್ವಪ್ನ 9 ವರ್ಷಗಳ ಕಾಲ ನಿರಂತರ ಯೋಗಾಸನದಲ್ಲಿ ತೊಡಗಿಸಿಕೊಂಡರು. ತಮ್ಮದೇ ತಂಡವನ್ನು ರಚಿಸಿಕೊಂಡು, ತಾವೇ ಸ್ವತಃ ಅಭ್ಯಾಸ ನಡೆಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುತ್ತಿದ್ದಾರು.

ಸ್ವಪ್ನ ಹೆರ್ಮುಂಡೆಯ ಸುಗಂಧಿ ಹಾಗೂ ಶೇಖರ ಪೂಜಾರಿ ದಂಪತಿ ಪುತ್ರಿ. ತ್ರೀರ ಬಡತನದ ಕುಟುಂಬದಲ್ಲಿ ಬೆಳೆದ ಇವರಿಗೆ 3 ಬಾರಿ ಅಂತರ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕರೂ, ಆರ್ಥಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ಊರವರು, ಯೂತ್ ಬಿಲ್ಲವ ಸಂಘಟನೆ ಹಾಗೂ ದಾನಿಗಳ ನೆರೆವಿನಿಂದ ವಿಶ್ವಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸುವಂತಾಯಿತು. ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಕಾಂತಾವರಾ, ಮಂಗಳೂರಿನ ತಾಲ್ಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಮೂಲಕ ಅವರ ಯಶೋಗಾಥೆ ಆರಂಭವಾಗಿತ್ತು. ಮುಂದೆ ಬೆಂಗಳೂರು, ಬೀದರ್, ಬಳ್ಳಾರಿ, ಹಾಸನ ಮತ್ತಿತರ ಕಡೆಗಳಲ್ಲಿ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಟ್ಟು 6 ಬಾರಿ ರಾಜ್ಯ ಮಟ್ಟದ ಯೋಗಸಾನ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾದ 5ನೇ ಅಂತರ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ  ಮಲೇಷ್ಯಾದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು. 7 ದೇಶಗಳ ಸ್ಪರ್ಧಿಗಳು ಕಣದಲ್ಲಿದ್ದ ಈ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹನುಮಾಸನ, ಅರ್ಧಚಂದ್ರಾಸನ, ಧನುರ್ಸಾಸನÀ ಆಸನಗಳನ್ನು ಮಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.ಪ್ರಾಥಮಿಕ ಶಿಕ್ಷಣದಿಂದಲೇ ಯೋಗಾಸನ ಮಾಡಲು ಪ್ರಾರಂಭಿಸಿದ ಸ್ವಪ್ನಾಳ ಪರಿಶ್ರಮವು ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿಚಿನ್ನದ ಪದಕ ಗಿಟ್ಟಿಸುವರೆಗೆ ಸಾಗಿ ಬಂದಿದೆ. ಯೋಗಾಸನದಲ್ಲಿ ಏನಾದರೂ ಸಾಧಿಸಬೇಕೆಂಬುದನ್ನು ಬಲವಾಗಿ ಅರಿತ ಸ್ವಪ್ನ. ಮುಂದೆ ಹಲವಾರು ಕಡೆಗಳಲ್ಲಿ ಯೋಗಾಸನಾ ಸ್ಫರ್ಧೆಯಲ್ಲಿ ಭಾಗವಹಿಸುವುದರ ಜತೆಗೆ ಬಹುಮಾನವನ್ನೂ ಪಡೆದು ಎಲ್ಲರಿಗೂ ಮಾದರಿಯಾಗುತ್ತಾಳೆ ಎಂಬ ಅಚಲ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ
-ನಿವೃತ್ತ ದೈಹಿಕ ಶಿಕ್ಷಕರಾದ ನರೇಂದ್ರ ಕಾಮತ್.
                                                                                           
                                                                                   - ಸೌಮ್ಯ ಕಾರ್ಕಳ 
"ಪ್ರತಿಭೆಗಳನ್ನು ಪ್ರೋತ್ಸಾಹಿಸಿ"
ಹಳ್ಳಿಗಳಲ್ಲಿ ಹಲವಾರು ಪ್ರತಿಭೆಗಳಿವೆ. ಆದರೆ, ಮುಂದೆ ಬರಲು ಆರ್ಥಿಕ ಸಮಸ್ಯೆಗಳು ಅಡ್ಡಿಯಾಗುತ್ತವೆ. ಇಂತಹ ಪ್ರತಿಭೆಗಳನ್ನು ಗುರುತಿಸಿ, ಅವರಿಗೂ ಉತ್ತಮ ವೇದಿಕೆ ಕಲ್ಪಿಸುಬೇಕು. ಆಗ ಮಾತ್ರ ಪ್ರತಿಭೆಗಳು ಬೆಳಗಲು ಸಾಧ್ಯ. ಆ ಮೂಲಕ ತವರಿಗೂ ಹೆಸರು ತರಲು ಸಾಧ್ಯ ಎನ್ನುತ್ತಾರೆ- ಸ್ವಪ್ನ ಪೂಜಾರಿ.





Comments