ಪ್ರತಿಕಾರಂಗದಲ್ಲಿ 98 ವರ್ಷಗಳ ಕಾಲ ಸೇವೆಗೈದ-ಹೆಗಡೆಕಟ್ಟೆ
ಪ್ರತಿಕಾರಂಗದಲ್ಲಿ 98 ವರ್ಷಗಳ ಕಾಲ ಸೇವೆಗೈದ- ಹೆಗಡೆಕಟ್ಟೆ
ಸದಾ ಮುಖದಲ್ಲಿ ಆನಂದ ಸೂಸುತ್ತಿರುವವರೊಬ್ಬರು ಮೂಡುಬಿದಿರೆಯ ರಸ್ತೆಗಳಲ್ಲಿ ದಿನಾ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಹೊರಟರೆಂದರೆ, ಊರಜನರಲ್ಲಿ ಯಾರನ್ನೂ ಕೇಳಿದರೂ,"ಅವರೇ ನೋಡಿ, ಸದಾನಂದ ಹೆಗಡೆಕಟ್ಟೆ..." ಎಂದು ಹೇಳುವಷ್ಟು ಜನ ಪರಿಚಿತರು. "ಅಗತ್ಯವುಳ್ಳವರಿಗೆ ಕೈಲಾದ ಸಹಾಯ, ಪ್ರತಿಭೆಗಳನ್ನೂ ಬೆಳಕಿಗೆ ತರುವದು..."ಇದೇ ನನ್ನ ಧ್ಯೇಯ ಎನ್ನುವ ಹೆಗಡೆಕಟ್ಟೆಯವರ ಪ್ರಾಮಾಣಿಕ ಬದುಕು ಸಾಗಿಸುತ್ತಿರುವ ಹಂತದಲ್ಲಿ ಇಂದು 98 ವರ್ಷ ಪ್ರತಿಕೋದ್ಯಮದಲ್ಲಿ ಸೇವೆಗೈಯುದು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇಂದು ವಿಶ್ರಾಂತಿ ಪತ್ರಕರ್ತರಾಗಿ ಮೂಡುಬಿದ್ರೆಯಲ್ಲಿ ಮಿನುಗುತ್ತಿದ್ದಾರೆ.
ವಿಠಲ ಹೆಗಡೆಕಟ್ಟೆ ಹಾಗೂ ಶಾರದಾ ಹೆಗಡೆಕಟ್ಟೆಯವರ ಪುತ್ರನಾಗಿ ಸದಾನಂದ ಹೆಗಡೆಕಟ್ಟೆಯವರು ಮುಂಬಯಿಯಲ್ಲಿ ಜನಿಸಿದರು, ಟೆಲಿಪೋನ್ ಆಪರೇಟರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಸುಮಾರು 43 ವರ್ಷಗಳಿಂದ ಮೂಡುಬಿದ್ರೆಯಲ್ಲಿ ವಾಸವಾಗಿದ್ದಾರೆ.
ಪ್ರತಿಕೋದ್ಯಮದ ಮೂಲಕ ಜನರ ಸಮಸ್ಯೆ ಸ್ಪಂದಿಸುವ ಸಲುವಾಗಿ ಜನಬಿಂಬ ಪ್ರತಿಕೆಗೆ ಅಂಕಣ ಬರೆಯುವ ಮೂಲಕ ಅವರಿಗೆ ಅವಕಾಶ ದೊರಕಿತು, ಇದರ ಜೊತೆಗೆ ಪ್ರಜಾವಾಣಿಯ ಪ್ರತಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನರ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ಮಾಧ್ಯಮವು ಪ್ರಮುಖ ಹಸ್ತ್ರವಾಗಿರುವ ಕಾರಣ ಪ್ರತಿಕೋದ್ಯವನ್ನು ಅರೆಕಾಲಿಕ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.
ಮಹಾವೀರ ಕಾಲೇಜನಲ್ಲಿ ರಾಜಕೀಯಶಾಸ್ತ್ರ ಉಪನ್ಯಾಸಕನಾಗಿ ಹಾಗೂ ಗ್ರಂಥಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಲೇಖನ, ಕೃತಿಗಳನ್ನು ಓದುದರ ಜೊತೆಗೆ ವಿವಿಧ ಪ್ರತಿಕೆಗಳಿಗೆ ಲೇಖನಗಳನ್ನು ಬರೆಯುವ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದರು. ಇದರ ಪರಿಣಾಮವಾಗಿ ಪ್ರತಿಕೋದ್ಯಮದ ಮೇಲೆ ಅಪಾರ ಆಸ್ತಕಿ ಕೂಡ ಬೆಳೆಯಿತು. ಪ್ರತಿಕೋದ್ಯಮ ವೃತ್ತಿಯನ್ನು ಆರಂಭಿಸಿದ ಸಂದರ್ಭದಲ್ಲಿ ಅನೇಕ ಸವಾಲು ಸಮ್ಯಸೆಗಳನ್ನು ಎದುರುಸುತ್ತಿದ್ದರು. ಈಗೀನ ರೀತಿಯ ಮೋಬೈಲ್,ಇಂಟರ್ನೆಟ್ ಇತರೆ ಸಾಮಾಜಿಕ ಜಾಲತಾಣಗಳ ಸೌಲಭ್ಯ ಇರಲಿಲ್ಲ. ಹಾಗೆನೇ ಘಟನಾಸುದ್ದಿ, ನಡೆದ ಪ್ರದೇಶಗಳಲ್ಲಿ ಕೂಡ ತಕ್ಷಣ ತಲುಪುದು ಕೂಡ ಕಷ್ಟಕರ ಪರಿಸ್ಥಿತಿ.
ಇಂತಹ ಸಂದರ್ಭದಲ್ಲಿ ಸುದ್ದಿಗಳನ್ನು ಫಾಕ್ಸ್ ಮೂಲಕ ಮುಖ್ಯ ಕಛೇರಿಗೆ ಕಳುಹಿಸಬೇಕಾಗಿತ್ತು. ಹಾಗಾಗೀ ಸುದ್ದಿಗಳನ್ನು ಮತ್ತು ಪೋಟೋಗಳನ್ನು ಫಾಕ್ಸ್ ಮೂಲಕ ಕಳುಹಿಸುತ್ತಿದ್ದರು. ಜನರ ಸಮ್ಯಸೆಗಳಿಗೂ ಸ್ಪಂದಿಸುತ್ತಿದ್ದರು. ಇಷ್ಟೇಲ್ಲದೆ ಅನೇಕ ಸರಕಾರಿ ಯೋಜನೆಗಳು ಕೇವಲ ಘೋಷಣೆಗಳಾಗಿ ಮಾತ್ರ ಪ್ರಚಾರ ಮಾಡುತ್ತಿತ್ತು. ಇದರಿಂದಾಗಿ ಫಲಾನುಭವಿಗಳಿಗೆ ಯಾವುದೇ ಪ್ರಯೋಜನ ಆಗುತ್ತಿರಲ್ಲಿ ಅದ್ದರಿಂದ ಸರಕಾರಿ ವಿವಿಧ ಯೋಜನೆಗಳನ್ನು ಹೇಗೆ ಪಡೆಯಬೇಕು ಅದಕ್ಕೆ ಇರುವ ಕ್ರಮಗಳೇನು, ಇಂತಹ ವಿಷಯಗಳ ಕುರಿತು ಅನೇಕ ಲೇಖನಗಳನ್ನು ಪ್ರತಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದಾಗಿ ಅನೇಕ ಜನರಿಗೆ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಅವರ ಲೇಖನಗಳು ಸಹಾಯಕವಾಗಿತ್ತು.
ವಿಶೇಷಚೇತನ ಮಕ್ಕಳ ಕುರಿತು ಹೆಗ್ಡೆಯವರು ಲೇಖನಗಳನ್ನು ಬರೆದು, ವಿಶೇಷಚೇತನ ಮಕ್ಕಳ ಬೇಡಿಕೆಗಳನ್ನು ಪೂರೈಸುವಲ್ಲಿ ಸಫ¯ರಾದರು. ಇದರ ಪರಿಣಾಮವಾಗಿ ಜನಬಿಂಬ ಪ್ರತಿಕೆಯು ಇವರಿಗೆ ಅಂಕಣ ಬರೆಯಲು ಅವಕಾಶ ಮಾಡಿಕೊಟ್ಟಿತ್ತು. 2 ವರ್ಷಗಳ ಕಾಲ ಪ್ರತಿಕೆಯಲ್ಲಿ ಅಂಕಣವನ್ನು ಬರೆಯುತ್ತಿದ್ದಾರು. ಜೊತೆಗೆ ಸಂತಸ್ಥತ್ರರ ಧ್ವನಿಯಾಗಿ ಇಂತಹ ಮಾಧ್ಯಮಗಳು ಕಾರ್ಯ ನಿರ್ವಹಿಸುಬೇಕೆಂಬ ಅವರ ಮನದಸೆ.
ಸಮಾಜದ ಹಾಗೂ-ಹೋಗುಗಳ ಮೇಲೆ ಸುಮಾರು 800 ಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಪ್ರತಿಕೆಗಳಲ್ಲಿ ಪ್ರಕಟಿಸುತ್ತಿದ್ದಾರು. ಇಗಾಗಲೇ ಅವರ 7ಕೃತಿಗಳು ಪ್ರಕಟಿತಕೊಂಡಿದೆ. ಪ್ರಸುತ್ತ ಸುಧಾ, ಮೈಯೂರ ಹಾಗೂ ಮಕ್ಕಳ ಕಥೆ, ಸಣ್ಣಕಥೆ ಮೊದಲಾದವುಗಳನ್ನು ಪ್ರಸುತ್ತ ದಿನಗಳಲ್ಲೂ ಬರೆಯುತ್ತಿದ್ದಾರೆ. ಇವರ ಮೊದಲ ಲೇಖನ "ಹುಲಿ ಶ್ಯಾಮಣ್ಣ ಮತ್ತು ಇತರೆ ಕಥೆಗಳು" 1957ರಲ್ಲಿ ಪ್ರಕಟವಾಯಿತು. ಅಂಕಣ ಬರಹಕ್ಕಗಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2011)ನೇ ಸಾಲಿನ ಹಾಸ್ಯ ಚಕ್ರವರ್ತಿ ನಾಡಿಗೇರೆ ಕೃಷ್ಣರಾವ್ ಸ್ಮಾರಕ ಪ್ರಶಸ್ತಿಗಳು ಲಭಿಸಿದೆ.
ವಿಶ್ರಾಂತಿ ಹಿರಿಯ ಪತ್ರಕರ್ತರಾದ ಸದಾನಂದಹೆಗ್ಡೆ ಕಟ್ಟೆಯವರು ಇದೇ ವರ್ಷ ಪ್ರತಿಕೋದ್ಯಮದಲ್ಲಿ ನಿವೃತ್ತ ಹೊಂದಿ ಸೇವೆಗೈದುದನ್ನು ಗುರುತಿಸಿದ, ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ ಹಾಗೂ ಆಳ್ವಾಸ್ ಕಾಲೇಜು ಮೂಡುಬಿದಿರೆ, ಪತ್ರಕರ್ತರ ಸಂಘ ಕಾರ್ಕಳ ತಾಲೂಕು, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು...ಇತರೆ ಸಂಘ ಸಂಸ್ಥೆಗಳು ಸೇರಿ ಇವರನ್ನು ಸನ್ಮಾನಿಸಲ್ಪಟಿದೆ. ಅದರಲ್ಲೂ ಸದಾನಂದ ಹೆಗ್ಡೆ ಕಟ್ಟೆಯವರ ಯುವ ಪತ್ರಕರ್ತರಿಗೊಂದು ಕಿವಿಮಾತು ಅದೇನೆಂದರೆ ಪ್ರತಿಕೆಗಳಲ್ಲಿ ಪ್ರಕಟವಾಗುವ ವಿವಿಧ ಲೇಖನಗಳನ್ನು ಹಾಗೂ ಉತ್ತಮ ಗ್ರಂಥಗಳನ್ನು ಓದುವ ಹವ್ಯಾಸಗಳನ್ನು ಒಳಸಿಕೊಳ್ಳಬೇಕು ಹಾಗೇಯೇ ಯುವಜನತೆ ಸಮಯದ ಸದುಪಯೋಗವನ್ನು ಪಡೆಯುವುದರ ಮೂಲಕ ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಬೇಕೆಂಬುದು ಅವರ ಅಭಿಲಾಶೆ.
- ಸೌಮ್ಯ ಕಾರ್ಕಳ
Comments
Post a Comment