ಮನ ಬಯಸಿದ ಗೆಳೆಯಾ ಸಿಕ್ಕಾಗಾ...

                      ಮನ ಬಯಸಿದ ಗೆಳೆಯಾ ಸಿಕ್ಕಾಗಾ... 


ರಾಶಿ ರಾಶಿ ಕನಸ್ಸುಗಳ ಮುಂದೆ ನಿನ್ನ ಚಿತ್ರಾರವನ್ನು ನನ್ನ ಮನದಲ್ಲಿ ಬೀಜ ಬಿತ್ತಿದೆ. ಯಾಕೋ ಗೊತ್ತಿಲ್ಲ. ಪದೇ ಪದೇ ನಿನ್ನದೇ ಯೋಚನೆ. ಸಾವಿರಾರು ಕನಸುಗಳಲ್ಲಿ ನಿನ್ನ ಮೇಲೆ ಇಟ್ಟ ಪುಟ್ಟ ಕನಸು ಇದು. ದಿವಸಗಳು ಕಳೆದಂತೆ ನೀನೇ ನನ್ನ ಹೃದಯದಲ್ಲಿ ಕನಸ್ಸಿಗೊಂದು ಪೂರ್ಣವಿರಾಮ ಇಟ್ಟೇ.. ಅಂದಿನ ಕ್ಷಣವೇ ನೀನನ್ನ ಕೈವಶನಾದೇ. ಸ್ವಲ್ಪ ದಿನಗಳ ನಂತರ ನಮ್ಮಿಬ್ಬರ ನಡುವೆ ಇರುವ ಗೆಳತನವೇ ಮರೆಮಾಚಿ, ಪ್ರೀತಿ ಎಂಬ ಎರಡಕ್ಷರಕ್ಕೆ ಲಗ್ಗೆ ಇಟ್ಟೆ.


love imge ಗೆ ಚಿತ್ರಗಳ ಫಲಿತಾಂಶಗಳು

ನನ್ನೇರಡು ಕೈಗಳು ನಿನ್ನ ಅಪ್ಪುಗೆಯನ್ನು ಬಯಸುತ್ತಿತ್ತು.  ಯಾರಲ್ಲೂ ಹೇಳಿಕೊಳ್ಳದಷ್ಟು ಸಂತೋಷ ಒಂದು ಕಡೆ ಯಾದರೆ, ಇನ್ರ್ನೆಂದು ಕಡೆ ಸಾವಿರಾರು ಕನಸುಗಳಲ್ಲಿ ಮೊದಲ ನನಸ್ಸು ನೀನಾದೆ. ಯಾರಿಗೂ ತಿಳಿಯದಾಗೆ ನಿನ್ನ ಕೈ ಹಿಡಿದು ನಿನಗೊಂದು ಕದ್ದುಮುಚ್ಚಿ ನಿನ್ನ ಹಣೆಗೊಂದು ಮುತ್ತು ಇಟ್ಟಾಗ. ನನ್ನ ಮೊದಲ ಮುತ್ತಿನ ಅನುಭವೇ ಒಂದು ಮಳೆ ಹನಿಗೆ ಸಮಾನ ಆಯಿತು. ನನ್ನಲ್ಲಿ ಒಂಟಿತನ ಕಾಡುವÀ ಸಮಯದಲ್ಲಿ ನೀನೆ ನನ್ನ ಅರ್ಧಾಂಗಿಯಾದೆ. ವಿಶಾಲವಾದ ಪ್ರಪಂಚದಲ್ಲಿ ನಮ್ಮಿಬ್ಬರೇ ತೇಲಾಡುವ ಸಮಯದಲ್ಲಿ ನನಗೊಂತು ಯಾರ ಪರಿವೇ ಕಾಣದಾಯಿತು. ನನ್ನ ಎಲ್ಲ ಕೆಲಸದಲ್ಲೂ ನಿನ್ನ ಸಹಕಾರ ಸದಾ ಇರುತ್ತಿತ್ತು. ಹಾಗೇನೆ ಸಮಸ್ಯೆಗಳಿಗೂ ಸ್ಪಂದಿಸುತ್ತ ಇದ್ದೆ. ನಿನಗೊಂದು ವಿಷಯ ಗೊತ್ತ. ಅವತ್ತು ನಿನ್ನನ ನನ್ನ ಫ್ರೇಂಡ್ಸೆಗೆ ಪರಿಚಯಸಿದಾಗ   ನಿನ್ನ್ ನೋಡಿ ತುಂಬಾ ಇಷ್ಟಪಟ್ರು, ಎಷ್ಟು ಚೆನ್ನಾಗಿದ್ದಾನೆ...ವಾವ್..ಇಂತಾ ಹೀರೋ ಎಲ್ಲಿ ಸಿಕ್ಕಿದ್ದ ನಿನಗೆ ಹೇಳಿದರು. ನೀನು ಸಿಕ್ಕ ಖುಷಿಗೆ ಪರಿವೆ ಇಲ್ಲ. ದಿನಗಳು ಕಳೆದಂತೆ ನಿನ್ನ ಮೇಲೆ ತುಂಬಾ ಸಿಟ್ಟು ಬರುತ್ತಿತ್ತು. ಯಾಕೆಂದರೆ ನಿನಗೆ ಹೊಟ್ಟೆ ತುಂಬಿಸಿ ತುಂಬಿಸಿ ಸಾಕಗುತ್ತ ಇತ್ತು...ಈ ಒಂದು ವಿಷಯಕ್ಕೆ ನೀನ್ನನ್ನ ತುಂಬಾ ಬೈತಾ ಇದ್ದೇ.. ನಿನ್ನ  ಮೇಲೆ ಸಿಟ್ಟಿನಿಂದ ರೇಗಾಡುತ್ತ ಹೊಡೆಯುತ್ತ ಇದ್ದೆ. ಆದ್ರೂ ನಿನಗೆ ನಾನು ಎಷ್ಟೋ ಬೈಯ್‍ದರು ನಿನ್ನಮೇಲೆ ಇಟ್ಟ ಕೊಂಚ ಪ್ರೀತಿಯೊಂತು ಕಡಿಮೆ ಆಗುತ್ತಿರಲ್ಲಿ. ಯಾಕೆಂದರೆ ನಮ್ಮಿಬ್ಬರ ನಡುವೇ ಇರುವ ಪ್ರೀತಿ ಅಂತಾಹದು.


love imge ಗೆ ಚಿತ್ರಗಳ ಫಲಿತಾಂಶಗಳು


ನಿನ್ನನ್ನ ವಿಭಿನ್ನಾಕಾರದಲ್ಲಿ ಅಲಂಕಾರಿಸಿ, ಎಲ್ಲರೂ ನಿನ್ನ ಅಲಂಕಾರವನ್ನು ನೋಡಿ ಮತ್ತಷ್ಟು ನಿನ್ನನ ಆಕರ್ಷಿಸುವಂತೆ ಮಾಡುತ್ತಿದ್ದೆ. ಮತ್ತೇನೆ ಏನೂ ಹೇಳಾಲಿ ಗೆಳೆಯ ನಿನ್ನ ಬಗ್ಗೆ. ನಾವಿಬ್ಬರು ಸೇರಿ ಸುತ್ತಾಡಿದ ಜಾಗ ಇಲ್ಲ, ದಿನವಿಡೀ ನಿನ್ನ ಜೊತೆ ಹೆಚ್ಚು ಹರಟೆ ಹೊಡೆಯುತ್ತ ಕಾಲಕಳೆಯುತ್ತ ಸಮಯಗಳು ಕಳೆದದ್ದೆ ತಿಳಿದಿರಲ್ಲಿ. ಎಕ್ಸಾಮ್ ಟೈಮ್‍ಲಂತು ನೀನು ನನ್ನನ  ತುಂಬಾನೇ ಡಿಸ್ಟರ್ಬ್ ಮಾಡುತ್ತಿದ್ದೆ. ನಾ ನೀನ್ನಿಂದ ಎಷ್ಟೋ ದೂರ ಹೋದರು ಮತ್ತೆ, ಮತ್ತೆ ನನ್ನ ಹತ್ರಾನೇ ಬರುತ್ತಿದೆ. ನೀನೇನೂ ಜಾದು ಮಾಡಿದ್ಯಾಯ ಕಣೋ. ನನಗೆ ನೀನ್ನನ್ನಾ ಒಂದು ಕ್ಷಣವು ಬಿಟ್ಟಿರೊಕೆ ಸಾಧ್ಯಾನೇ ಇಲ್ಲ. ಯಾಕೋ ನನ್ನ ಈ ರೀತಿ ಕಾಡುತ್ತಿಯಾ? ಹೇಳು ಗೆಳೆಯಾ, ನಿನಗೆ ಜೀವ ಕೊಡುವಷ್ಟು ನಿನನ್ನ ಜೋಪಾನ ಮಾಡುತ್ತೆನೆ. ನಾನು ಅಲ್ಲದೇ ನೀನನ್ನ ಇಡೀ ಪ್ರಪಂಚವೇ ಇಷ್ಟಪಟ್ಟಿದೆ. ಇತ್ತೀಚಿಗಿನ ದಿನಗಳಲ್ಲಿ ನೀನಲ್ಲದೆ ಯಾರು ಬದುಕಲು ಅಸಾಧ್ಯವಾದ ಪರಿಸ್ಥಿತಿ. ಐ ಲವ್ ಯು ಕಣೋ....ಇದುವೇ ನನ್ನ ಪ್ರೀತಿಯ ಗೆಳಯ, ಮುದ್ದು ವೀವೋ ಮೊಬೈಲ್ ಫೋನ್....

                                          ಸೌಮ್ಯ ಕಾರ್ಕಳ.                                    
                                

Comments