ಆಲಿಯ ಕೈಯಲ್ಲಿ ಮೂಡಿದ “ಲೈವ್ ಚಿತ್ರ”

                ಆಲಿಯ ಕೈಯಲ್ಲಿ ಮೂಡಿದ “ಲೈವ್ ಚಿತ್ರ”


ಪ್ರತಿಯೊಬ್ಬ ವ್ಯಕ್ತಿಯು ತನ್ನಗುರಿ ಸಾಧಿಸಲು ಹಲವಾರು ಸವಾಲುಗಳನ್ನು ಎದುರಿಸುತ್ತಾನೆ. ತನ್ನೆಲ್ಲ ಸವಾಲುಗಳನ್ನು ಎದುರಿಸಿಕೊಂಡು ಉನ್ನತವಾದ ಗುರಿ ಮುಟ್ಟುವಾತನೇ ಒಬ್ಬ ಯಶಸ್ವೀ ಕಲಾವಿದ. ತಾಳೆ, ಸಹನೆ, ಇಲ್ಲದೆ ಕಲಾವಿದನಾಗಲು ಅಸಾಧ್ಯ, ಈ ಕ್ಷೇತ್ರದಲ್ಲಿ ಕಲಾವಿದನಿಗೆ ತುಂಬಾ ಸೂಕ್ಷ್ಮತೆ ಅನ್ನವುದು ಬಹಳ ಮುಖ್ಯ ಪ್ರಪಂಚದಲ್ಲಿ ಒಂದು ಕಲೆಯನ್ನು ಕಲಾವಿದ ನೋಡುವ ದೃಷ್ಟಿಯೇ ಬೇರೆಯಾಗಿರುತ್ತೆ. ಆತನಿಗೆ ಕಲೆಯನ್ನು ಆಸ್ವಾದಿಸುವ ಸಾಮಥ್ರ್ಯ ಇರುತ್ತದೆ. ಅಷ್ಟೇಲ್ಲದೆ ಗಿಡ, ಮರಗಳ ಬಗ್ಗೆನೂ ಗ್ರಹಿಸುವ ಸೂಕ್ಷ್ಮ ಶಕ್ತಿಯನ್ನು ಹೊಂದಿರುತ್ತಾನೆ. ಚಿತ್ರಕಲೆ ಎಂಬುದು ಮನಸ್ಸಿನ ಭಾವನೆಗಳನ್ನು ಕುಂಚದ ಮೂಲಕ ಸೆರೆಹಿಡಿಯುವ ಅದ್ಭುತ ಕಲಾಪ್ರಕಾರ. ಈ ಕಲಾಶೈಲಿಯಲ್ಲಿ ಹಲವಾರು ಕಲಾಪ್ರಕಾರವಿದ್ದು, ಅದರಲ್ಲಿ ಲೈವ್ ಭಾವಚಿತ್ರ ಕೂಡ ಒಂದು.





ಈ ಕ್ಷೇತ್ರದಲ್ಲೇ ಸಾಧನೆ ಮಾಡಿದ ಸೈಯದ್ ಆಸಿಫ್ ಅಲಿ ಕೂಡ ಒಬ್ಬರು. ಅವರು ರಾಷ್ಟ್ರ ಮಟ್ಟದ ವರ್ಣಚಿತ್ರಕಲೆಗಾರನಾಗಿ ಮಿನುಗುತ್ತಿದ್ದಾರೆ. ಜೊತೆಗೆ ಚಿತ್ರಕಲೆಯನ್ನೆ ಬದುಕಾಗಿಸಿಕೊಂಡ ಇವರು, ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಲಕಾಲ್ಮುರವರು. ಇದೀಗ 15 ವರ್ಷUಳಿಂದÀ ಮಂಗಳೂರಿನಲ್ಲಿ  ನೆಲೆಯುರಿದ್ದಾರೆ.  ತುಮಕೂರು ಜಿಲ್ಲೆಯ ಕಲಾ ಶಾಲೆಯಲ್ಲಿ ಡಿಪ್ಲೊಮ ಪಡೆದ ನಂತರ, ಉನ್ನತ ಶಿಕ್ಷಣಾಕ್ಕಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ವಿಷುಯಲ್ ಆಟ್ರ್ಸ್ ಪೂರ್ಣಗೊಳಿಸಿ, ಪ್ರಸುತ್ತ ಇದೀಗ ಮಂಗಳೂರಿನ ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆಟ್ರ್ಸ್‍ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




ಎಣ್ಣೆ ಮತ್ತು ಅಕ್ರಿಲಿಕ್ ಬಣ್ಣಗಳನ್ನು ಬಳಸಿಕೊಂಡು ವರ್ಣಚಿತ್ರವನ್ನು ರೂಪಿಸುವ ಇವರು ಭೂದೃಶ್ಯ ವರ್ಣಚಿತ್ರಗಳಿಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲಿಯವರು ಸತತ ಒಂಭತ್ತು ವರ್ಷಗಳ ಕಾಲ ಮೈಸೂರು ದಸರಾ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಶಸ್ತಿಗೆ ಪಾತ್ರರಾಗಿರುವುದು ಹೆಮ್ಮೆಯ ವಿಷಯ. ಕಲಾಭಿವ್ಯಕ್ತಿಯ ಮಾಧ್ಯಮವಾಗಿ ವರ್ಣಚಿತ್ರಕಲೆ ತುಂಬಾನೇ ಯಶಸ್ವೀ ಕ್ಷೇತ್ರವಾಗಿದೆ. ವರ್ಣ ಚಿತ್ರಗಳು ದೃಶ್ಯಕಲೆಗೆ ಸಂಬಂಧಪಟ್ಟದು. ಕಣ್ಣಿನಲ್ಲಿ ನೋಡಿ ಅರ್ಥಮಾಡಿಕೊಂಡು ಆಸ್ವಾದಿಸುವಂತಹದು, ದೃಶ್ಯಕಲೆಗೆ ದೃಷ್ಟಿ ಒಂದು ಇದ್ದರೆ ಸಾಕು. ಹಾಗಾಗಿ ಈ ಕ್ಷೇತ್ರವು ಮಾಧ್ಯಮದಿಂದಾಗಿ ತುಂಬಾನೇ ಅಭಿವೃದ್ಧಿ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಅಂತÀರ್ ಜಾಲ ಹಾಗೂ ಮಾಧ್ಯಮದ ಸಹಾಯದಿಂದ ಇನಷ್ಟು ಈ ಕ್ಷೇತ್ರವು ಬೆಳವಣಿಗೆಯಾಗಲಿದೆ. ಈಯೊಂದು ಕ್ಷೇತ್ರಕ್ಕೆ ಸಣ್ಣ ವಯಸ್ಸಿನಿಂದಲೇ ತಾನೊಬ್ಬ ದೊಡ್ಡ ಕಲೆಗಾರನಾಗಿ ಬೆಳೆಯಬೇಕೆಂಬುದು ಅವರ ಅಭಿಲಾಶೆ. ಹೈಸ್ಕೂಲ್ ಶಿಕ್ಷಣದ ಸಂದರ್ಭದಲ್ಲಿ ಮತ್ತಷ್ಟು ಚಿತ್ರಕಲೆಗೆ  ಪ್ರೋತ್ಸಾಹ ದೊರಕಿತು. ಉನ್ನತ ಶಿಕ್ಷಣವನ್ನು ಕೂಡ ವರ್ಣಚಿತ್ರದ ಮುಖಾಂತರ ಪಡೆದರು. ಹಾಗಾಗಿ ಪ್ರಾರಂಭದಲ್ಲಿ ಇವರು ನೈಸರ್ಗಿಕತೆಯುಳ್ಳ ಚಿತ್ರಗಳನ್ನು ತನ್ನಲ್ಲಿ ರೂಢಿಸಿಕೊಂಡರು.

ಇವರ ಸತತ ಪ್ರಯತ್ನದಿಂದಾಗಿ ವರ್ಣಚಿತ್ರ ಕಲೆಯ ಕಡೆ ಹೆಚ್ಚು ಆಸಕ್ತಿ ಬೆಳೆಸಿದ್ದಲ್ಲದೇ, ಮನೆಯವರ ಹಾಗೂ ನೆರೆಹೊರೆಯ ಜನರ ಸಹಕಾರದಿಂದಾಗಿ ವರ್ಣಚಿತ್ರ ಕಲೆಗಾರನಾಗಿ ಸಮಾಜದಲ್ಲಿ ಮಿನುಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದರು. ಮುಸ್ಲಿಂ ಧರ್ಮದಲ್ಲಿ ತಮ್ಮ ಸಾಧನೆಯನ್ನು ಯಾರು  ಬೆಂಬಲಿಸುವುದಿಲ್ಲ, ಅವರ ಧರ್ಮದ ಪ್ರಕಾರ ಜೀವ ಇರುವ ಪ್ರಾಣಿ, ಪಕ್ಷಿ, ಮನುಷ್ಯನ, ಚಿತ್ರ ಬರೆಯುವಾಗೆ ಇಲ್ಲ. ಇದರ ಬದಲು ನೈಸರ್ಗಿಕವಾಗಿ ಚಿತ್ರ ಬಿಡಿಸಲು ಶುರು ಮಾಡಿದರು. ಯಾವುದೇ ಕಾರಣದಿಂದ್ದಾಗಿ ಧರ್ಮದ ವಿರುದ್ಧ ಹೋರಾಡಲಿಲ್ಲ. ಅಲಿಯವರು ಒಬ್ಬ ಸಾಮಾನ್ಯ ಕುಟುಂಬದಿದ್ದ ಬೆಳೆದವರು, ತಂದೆಯು ಸಣ್ಣ ಸರಕಾರಿ ನೌಕರಿ ಕೆಲಸದಲ್ಲೇ ಕುಟುಂಬವನ್ನು ಮುನ್ನಡೆಸುತ್ತಿದ್ದಾರು. ಎಂಟು ಜನ ಮಕ್ಕಳ ಜೀವನ, ವಿದ್ಯಾಭ್ಯಾಸ, ಇವೆಲ್ಲವು ತಂದೆಯ ಜವಾಬ್ದಾರಿಯಾಗಿತ್ತು. ಇದರಿಂದಾಗಿ ಅಲಿಯವರ ವಿದ್ಯಾಭ್ಯಾಸದ ಕಡೆ ಗಮನ ಕೊಡಲು ಅಸಾಧ್ಯವಾದ ಕಾರಣದಿಂದಗಿ, ಅವರ ಆಸಕ್ತಿಯು ವರ್ಣಚಿತ್ರಕಲೆಯಲ್ಲಿ ಬೆಳೆಸಿದರು. ಹಣಕಾಸಿನ ಸಮಸ್ಯೆಯಿಂದಾಗಿ ಬೇರೆ ಕ್ಷೇತ್ರವನ್ನು ಆಯ್ದುಕೊಳ್ಳುವಲ್ಲಿ ವಿಫಲರಾದರು.




ಬೇರೆಯವರ ಚಿತ್ರಕಲೆಯ ಅನುಕರಣದಿಂದಾಗಿ ಚಿತ್ರಗಳನ್ನು ಬಿಡಿಸುವ ಮುಖಾಂತರ, ನಮ್ಮ ಜೀವನದಲ್ಲಿ ಒಬ್ಬ ಆದರ್ಶವ್ಯಕ್ತಿಯನ್ನಾಗಿ ಆಯ್ದುಕೊಳ್ಳತ್ತೀವಿ, ಅದರಲ್ಲೂ ಅಲಿಯವರ ನೆಚ್ಚಿನ ಆದರ್ಶವ್ಯಕ್ತಿಯೇ ಗಾಗಿನ್ ಹಾಗೂ ವೆಂಕಟಪ್ಪ. ಚಿತ್ರಕಲೆಯಲ್ಲಿ ಹೊಸ ವಿಚಾರಗಳು, ವಿಭಿನ್ನತೆಗಳು ಸೇರಿಕೊಳ್ಳಬೇಕು ಆಗ ಮಾತ್ರ ಬದಲಾವಣೆ ಸಾಧ್ಯ. ಮ್ಯೂಸಿಕ್,ಡ್ಯಾನ್ಸ್, ಸಂಗೀತ, ಇನ್ನಿತ್ತರ ಕ್ಷೇತ್ರದಲ್ಲೂ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೆ ಇದೆ. ಹಾಗಾಗೀ ಅವುಗಳಿಗೆ ಹೋಲಿಸಿದರೆ ಚಿತ್ರಕಲೆಯು ಸಾಧಾರಣ ಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಇನ್ನಿತ್ತರ ಕ್ಷೇತ್ರಕ್ಕಿಂತ ವರ್ಣಚಿತ್ರಕಲೆಯು ಮತ್ತಷ್ಟು ಬೆಳವಣಿಗೆಯಾಗಬೇಕು. ಬೆಳವಣಿಗೆ ಎಂಬುದು ಹರಿಯುವ ನೀರಾಗಬೇಕೆ ಹೊರತು ಅದು ಎಂದಿಗೂ ನಿಂತ ನೀರಾಗಿರಬಾರದು.                 
                        -ಸೌಮ್ಯ ಕಾರ್ಕಳ

                                        

Comments