ಸ್ತ್ರೀ ಪಾತ್ರಗಳಿಗೆ ಮಹೇಶ್ ಜೀವಕಳೆ

                                                   ಸ್ತ್ರೀ ಪಾತ್ರಗಳಿಗೆ ಮಹೇಶ್ ಜೀವಕಳೆ
       
 ಕರಾವಳಿಗರ ಮನೆ ಮನಗಳಲ್ಲಿ ಯಕ್ಷಗಾನವೆಂಬ ಕಲೆ ಬೆರೆತಿದೆ. ಕಿರಿಯ ವಯಸ್ಸಿನಿಂದಲೇ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡು, ಇದೀಗ ಈ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿದ್ದಾರೆ ಯುವ ಯಕ್ಷಗಾನ ಕಲಾವಿದ ಮಹೇಶ್ ಕುಮಾರ್

ಮಹಾಬಲ ಪೂಜಾರಿ ಹಾಗೂ ವಿಶಾಲ ಪೂಜಾರಿ ದಂಪತಿಗಳ ಹಿರಿಯ ಮಗನಾದ ಮಹೇಶ್ ಕುಮಾರ್. ಕಾರ್ಕಳ ತಾಲೂಕಿನ ಸಾಣೂರು ಗ್ರಾಮದದವರು, ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರಾದ ಇವರು, ವೃತ್ತಿಯಲ್ಲಿ ಉಪನ್ಯಾಸಕರು ಪವೃತ್ತಿಯಲ್ಲಿ ಯಕ್ಷಗಾನ ಕಲಾವಿದ.

ಚಿಕ್ಕ ಮಯಸ್ಸಿನಿಂದಲೇ ಯಕ್ಷಗಾನದ ಗತ್ತು ಗಾಂಭೀರ್ಯಕ್ಕೆ ಮನಸೋತು ಈ ಕ್ಷೇತ್ರದಲ್ಲಿ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡರು. 17 ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಮಾಡಿರುವ ಇವರು ಹಲವಾರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಯಕ್ಷಗಾನದಲ್ಲಿ ಏನಾದರೂ ಸಾಧಿಸಬೇಕು ಎಂಬ ಮಹತ್ವದ ಕನಸು ಕಟ್ಟಿಕೊಂಡವರು ಮಹೇಶ್ ಕುಮಾರ್. ಆರಂಭಿಕ ಹಂತದಲ್ಲಿ ತೆಂಕು ತಿಟ್ಟು ನಾಟ್ಯ ಅಭ್ಯಾಸವನ್ನು ಬನ್ನಂಜೆ ಸಂಜೀವ ಸುವರ್ಣ ಮತ್ತ್ತು ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಅವರಿಂದ ಪಡೆದರು.
ಆರಂಭದ ದಿನಗಳಲ್ಲಿ ಯಕ್ಷಗಾನ ಸಂಘ ಸಂಸ್ಥೆಗಳಲ್ಲಿ ಹಾಗೂ ಶಾಲಾ ರಜಾದಿನಗಳಲ್ಲಿ ಕಟೀಲು ಮೇಳದವರೊಂದಿಗೆ ಯಕ್ಷಗಾನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.ಇವರ ಸಾಧನೆಗೆ ಯಕ್ಷಕನ್ಯೆ, ಯಕ್ಷಕುವರ, ಯಕ್ಷಸಿಂಚನ, ಯಕ್ಷರಾಣಿ, ಹಾಗೂ ಯಕ್ಷಮೇನಕೇ, ಅಭಿನಯ ಶಾರದೆ ಪ್ರಶಸ್ತಿಗಳು ಕೈಗನ್ನಡಿ.

ರಂಗದಲ್ಲಿ ಶುಂಭ, ನಿಶುಂಭ, ಮಧು, ಕೈಟಭರು, ಮಹಿಷ, ವೀರಭದ್ರ, ಲವಣಾಸುರ, ನರಕಾಸುರ,ಚಂಡಮುಂಡ, ಅರ್ಜುನ, ಭದ್ರಸೇನ ಮುಂತಾದ ಕಟ್ಟು ವೇಷಗಳಿಗೆ ಪಾತ್ರರಾಗಿ, ಅಲ್ಲದೆ  ಸ್ರೀ ಪಾತ್ರಗಳಾದ ಶ್ರೀದೇವಿ, ಚಂದ್ರಮತಿ, ದಮಯಂತಿ, ದ್ರೌಪದಿ, ಮೋಹಿನಿ ತಿಲೋತ್ತಮೆ, ಲಕ್ಷ್ಮೀ, ಸತ್ಯಭಾಮೆ, ರುಕ್ಮುಣಿ, ಮಾಲಿನಿ, ಕನಕಾಂಗಿ, ಮುಂತಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪ್ರತಿಯೊಂದು ಪಾತ್ರವನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸಿಕೊಂಡು ಬಂದಿರುವ ಮಹೇಶ್, ಕಟೀಲು ಯಕ್ಷಗಾನ ಮೇಳದಲ್ಲಿ 5ನೇ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಶ್ರೀದೇವಿ ಪಾತ್ರವನ್ನು ನಿಭಾಯಿಸಿದ ಗರಿಮೆ ಇವರಿಗೆ ಸಲ್ಲುತ್ತದೆ.  ಸ್ತ್ರೀ ವೇಷಧಾರಣೆಯಲ್ಲಿ ಹೆಣ್ಣೆನ್ನೆ ನಾಚಿಸಬಲ್ಲ ಮನಮೋಹಕ ಯಕ್ಷ ಕನ್ಯೆಯ ಆಕರ್ಷಣೆಗೆ ಯಕ್ಷ ರಾಣಿ ಪ್ರಶಸ್ತಿ ಲಭಿಸಿದೆ. ಸುಣ್ಣಂಬಳ ಹಾಗೂ ಕೋಳ್ಮೂರರ ಮಾರ್ಗದರ್ಶನವನ್ನು ಸದಾ ಅನುಸರಿಕೊಂಡು ಬಂದಿದ್ದಾರೆ ಮಹೇಶ್.




{ನಮ್ಮ ಪುರಾಣ ಸಂಸ್ಕøತಿಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ ಪರಿಪೂರ್ಣ ಏಕಮಾತ್ರ ಕಲೆಯೇ ಯಕ್ಷಗಾನ. ನಮ್ಮಲ್ಲಿ ಸನಾತನ ಸಂಸ್ಕ್ರತಿಯ ಬಗ್ಗೆ ಅರಿವು ಮೂಡಿಸಿ, ಜೀವನದ ಒಳಿತು ಕೆಡುಕುಗಳನ್ನು ತಿಳಿಸಿ ಕೊಡುತ್ತದೆ. ಸಂಬಂಧಗಳ ಬೆಲೆ ಬಗ್ಗೆ ಅರಿವು ಮೂಡಿಸುತ್ತದೆ.ಎನುತ್ತಾರೆ ಯಕ್ಷಗಾನ ಕಲಾವಿದ ಮಹೇಶ್ ಕುಮಾರ್]

                                                                                                                   -ಸೌಮ್ಯ ಕಾರ್ಕಳ                         






Comments