ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ....
ಏಳು ಜನ್ಮಗಳ ಅನುಬಂಧ...ಈ ರಕ್ಷಾಬಂಧ.... ಬೆಲೆ ಕಟ್ಟಲಾಗದ ಸಂಬಂಧ ಅಂದ್ರೆ ಅದು ಅಣ್ಣ-ತಂಗಿಯ ಸಂಬಂಧ. ಅಣ್ಣ ಯಾವತ್ತೂ ತಂಗಿನ ನಾ ನಿನ್ನ ಪ್ರೀತಿಸುವೆ ಎಂದೂ ಹೇಳುವುದಿಲ್ಲ, ಆದರೆ ಖಂಡಿತ ತಂಗಿಗೆ ಅಣ್ಣನಷ್ಟು ಪ್ರೀತಿಸುವ ಜೀವ ಇನ್ನೊಂದು ಸಿಗೋದಿಲ್ಲ. ಅಣ್ಣ ಮತ್ತು ತಂಗಿಯ ನಡುವಿನ ಪ್ರೀತಿ ಹಾಗೂ ನೆನಪುಗಳು ಅಚ್ಚಳಿಯಂತೆ ಉಳಿಯಲು ಪ್ರತೀ ವರ್ಷ ರಕ್ಷಾ ಬಂಧನವನ್ನು ಆಚರಿಸಲಾಗುತ್ತೆ. ರಕ್ಷಾಬಂಧನದಲ್ಲಿ ಎರಡು ಪದಗಳಿವೆ ಅದೇ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಂಡು ಕೊನೆಗೊಳ್ಳದ ಪ್ರೀತಿಯೆಂದರೆ ಅದೇ ರಕ್ಷಾಬಂಧನ. ಅಣ್ಣ- ತಂಗಿಯಯರ ನಡುವಿನ ಭಾಂದವ್ಯ ಗಟ್ಟಿತನ ಹೊಂದಲಿ ಅನ್ನುವ ಕಾರಣಕ್ಕಾಗಿ ರಕ್ಷಾಬಂಧನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಭೂಮಿ ಮೇಲಿನ ಹಲವಾರು ಸಂಬಂಧಗಳಿಗೆ ಬೆಲೆ ಕಟ್ಟಲಾಗುದು. ಅದರಲ್ಲೂ ಅಣ್ಣ-ತಂಗಿಯ ಸಂಬಂಧವು ಪ್ರಮುಖವಾಗಿರುತ್ತದೆ. ಮನೆಯಲ್ಲಿ ಅಣ್ಣ ಅಥವಾ ತಮ್ಮನಿಗೆ ತಂಗಿ ಹಾಗೂ ಅಕ್ಕ ಯಾವಾಗಲೂ ಬೆಂಬಲವಾಗಿ ನಿಲ್ಲುವರು, ಅದೇ ರೀತಿಯಲ್ಲಿ ಅಣ್ಣನಾದವನು ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿದ್ದರು ಸ್ವತಃ ತನ್ನ ತಂಗಿಯು ಜವ್ದಾಬಾರಿಯನ್ನ ತಾನೊಬ್ಬನೇ ಹೊತ್ತುಕೊಳ್ಳುವತಾನೇ ಅಣ್ಣನಾದವನ ಕರ್ತವ್ಯ. ಅಣ್ಣ ತಂಗಿಯ ಸಂಬಂಧದ ಮಹತ್ವವನ್ನು ಸಾರುವಂತಹ ರಕ್ಷಾ ಬಂಧನವು ಪ್ರಮುಖವಾಗಿ ಭಾರತೀಯರು