ಮೊದಲ ವರ್ಷ ಬೆರಗು... ಎರಡನೇ ವರ್ಷ ಬೆಚ್ಚಗೆ... ಅಂತಿಮ ವರ್ಷ ವಿದಾಯದ ಬೇಸರ
ಮೊದಲ ವರ್ಷ ಬೆರಗು, ಎರಡನೇ ವರ್ಷ ಬೆಚ್ಚಗೆ...
ಅಂತಿಮ ವರ್ಷ ವಿದಾಯದ ಬೇಸರ
ಲೈಟ್ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫಸ್ಟ್ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫಸ್ಟ್ ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ ಒಬ್ಬರನ್ನು ಬಿಟ್ಟು ಅಲ್ಲಿರುವ ಎಲ್ಲರೂ ಏಲಿಯನ್ಸ್ ಅಂತ ಅನಿಸುತ್ತದೆ. ಒಂದು ಅಂತೂ ಸತ್ಯ. ಫಸ್ಟ್ ಡೇ ಕಾಲೇಜಲ್ಲಿ ಒಬ್ಬ ಬೆಸ್ಟ್ ಫ್ರೇಂಡ್, ಒಬ್ಬ ಬೆಸ್ಟ್ ಕ್ರಷ್, ಯಾವತ್ತೂ ಮರೆಯಲಾಗದಿರೊ ಬೆಸ್ಟ್ ಲೆಕ್ಚರ್ಸ್ ಸಿಗುತ್ತಾರೆ. ಹಾಗೇ ಮುಂದೆ ದೊಡ್ಡ ಗ್ಯಾಂಗ್ ಕೂಡ ರಚನೆಯಾಗಿಯೇ ಆಗುತ್ತದೆ. ದಿನಗಳೇನೂ ಮುಂದೆ ಹೋಗುತ್ತ ಇರುತ್ತದೆ. ಕಣ್ಣು ಬಿಡುವಷ್ಟರಲ್ಲಿ ಫಸ್ಟ್ ಇಂಟರ್ನಲ್ ಬಂದೇ ಬಿಡುತ್ತದೆ. ಅಬ್ಬಾಬ್ಬಾ ಇಂಟರ್ನಲ್ ಅಂದರೆ ಏನು ಅಂತಾನೆ ಗೊತ್ತಿರಲ್ಲ, ಅದನ್ನು ಹೇಗೋ ಕಷ್ಟಪಟ್ಟು ಫಾಸ್ ಆಗುತ್ತೀವಿ...
ಫಸ್ಟ್ ಇಯರ್ ಅಲ್ಲಿ ಚೈಲ್ಡಗಳಾಗಿ ಇರುವ ನಾವು ಎರಡನೇ ವರ್ಷಕ್ಕೆ ಕಾಲಿಡುವಾಗ ಕಾಲೇಜಿನ ಅನೇಕ ವಿಚಾರಗಳನ್ನು ತಿಳಿದಿರುತ್ತೇವೆ. ಫ್ರೇಂಡ್ಸ್‍ಗೆ ನೋಟ್ಸ್ ಬರೆದು ಕೋಡುವುದೇನು, ಊಟ ಮಾಡುವಾಗ ‘ಬಿಲ್ ನಾನೇ ಕೊಡುತ್ತೇನೆ ಅನ್ನುವುದೇನು’ ಎರಡನೇ ವರ್ಷ ಒಂಥರಾ ಬೆಚ್ಚನೆ ವರ್ಷ. ಆದರೆ ಕ್ಲಾಸ್ ಬಂಕ್ ಹೊಡೆಯುವಾಗ ಮಾತ್ರ ಹಿಂದೇಟು ಹಾಕುತ್ತೀವಿ.
ಎಲ್ಲ ತರ್ರಲೆ ಮಾಡಿಯಾದರೂ ಒಬ್ಬ ಹೇಳುತ್ತಾನೆ ‘ಲೋ..ಮಗ ಫಸ್ಟ್ ಇಯರ್ ಆಯಿತು ಕಣೋ ನಾವು ಇನ್ನೂ ಏನೂ ಕಿತಾಪತಿ ಮಾಡೇ ಇಲ್ಲ’ ಅಂತ. ಅದಕ್ಕೆ ಇನ್ನೊಬ್ಬ ಹೇಳುತ್ತಾನೆ-’ ಮಗ ಇನ್ನು ಎರಡು ವರ್ಷ ಇದೆ. ಏನಾದರೂ ಮಾಡೋಣ ಸುಮ್ಮನೆ ಇರೋ’.
ತರಗತಿಯ ಫ್ರೇಂಡ್ಸ್ ಜೊತೆ ಸೇರಿ ಬೀಚ್, ಪಾರ್ಕ್, ಫಾಲ್ಸ್, ಫೋಟೋ-ಶೂಟ್ ಅನ್ನೋ ತಿರುಗಾಟದಲ್ಲೇ ಕಾಲೇಜು ರಜಾ ದಿನಗಳು ಮುಗಿದಿರುತ್ತವೆ. ಇನ್ನೂ ನಾವು ಸೆಕೆಂಡ್ ಇಯರ್ ಅಂತ ಬಟರ್ ಫ್ಲೈಲ್ಸ್ ತರ ಆಕಾಶದೆತ್ತರ ಹಾರಾಡುವುದೇ ಸರಿ. ಅದರಲ್ಲೂ ಸೆಕೆಂಡ್ ಇಯರ್ ಅಲ್ಲಿ ‘ಲವ್ ಗಿವ್’ ಅನ್ನೊ ಗೊಂದಲಕ್ಕೆ ಬಿದ್ದು ಓದು ಹಾಳು ಮಾಡಿಕೊಳ್ಳುವುದೂ ಇದೆ. ಪಾರ್ಕ್ ಸುತ್ತಾಡುವುದೇನು, ಕೈ-ಕೈ ಹಿಡಿದುಕೊಂಡು ದಾರಿಯಲ್ಲಿ ನಡೆಯುವುದೇನು. ಈ ಲವ್ ಫ್ರೇಂಡ್ಸ್ ಶಿಫ್‍ಗಳ ನಡುವೇಯೂ ಸೆಕೆಂಡ್ ಇಯರ್‍ನ ಪರೀಕ್ಷೆಗಳು ಮುಗಿದು ಹೋಗಿರುತ್ತೆವೆ.
ದಿನಗಳು ಉರುಳಿದ ಹಾಗೇ ಫೈನಾಲ್ ಇಯರ್ ನಮ್ಮ ಕಣ್ಣ ಮುಂದೆ ಕೂತಿರುತ್ತದೆ. ಏಕಾಗ್ರತೆಯನ್ನು ತಂದುಕೊಳ್ಳುವುದು ಹೇಗೆ ಎಂಬುದೇ ಆಗ ನಮ್ಮ ಮುಂದಿನ ಸವಾಲು.
ಫೈನಲ್ ಇಯರ್‍ನಲ್ಲಿ ಮಳೆಗಾಲನೂ ಇಲ್ಲ, ಚಳಿಗಾಲನೂ ಇಲ್ಲ ಯಾವಾಗಲೂ ಪರೀಕ್ಷೆ ಕಾಲವೆ. ಜೊತೆಗೆ ಸೀನಿಯರ್ ಎಂಬ ಹವಾ ಅಂತೂ ಬೇಜಾನ್ ಜೋರಾಗಿರುತ್ತದೆ. ಎಂಟು ಗಂಟೆ ಕ್ಲಾಸ್ ಅಂದರೆ ಆರಾಮಾಗಿ ಹತ್ತು ಗಂಟೆಗೆ ಕ್ಲಾಸ್ಗೆ ಬರುವುದು. ಫಸ್ಟ್ ಇಯರ್‍ನಲ್ಲಿದ್ದ ಫ್ರೇಂಡ್ಸ ಗ್ಯಾಂಗ್ ಅಬ್ಬಾಬ್ಬಾ ಅಂದರೆ ಮೂರು ಪ್ರತ್ಯೇಕ ಪಕ್ಷವಾಗಿರುತ್ತದೆ. ಚಿಂದಿ ಚಿತ್ರಾನ್ನ ಆಗಿದ್ದರೂ ವಿಶೇಷವೇನೂ ಇಲ್ಲ. ಮುನಿಸುಗಳ ನಡುವೆಯೂ ಆ ಫೆಸ್ಟ್, ಸೆಮಿನಾರ್, ಟ್ರಿಪ್, ಕ್ಯಾಂಪ್-ಅನ್ನೊ ಜಂಜಾಟದಲ್ಲಿ ಫೈನಾಲ್ ಇಯರ್ ಪರೀಕ್ಷೆ ಬೇರೆ ಹತ್ತಿರ ಬಂದಿರುತ್ತದೆ. ಲವ್ ಅನ್ನೋ ಹಳ್ಳಕ್ಕೆ ಬಿದ್ದವರ ಜೀವನದಲ್ಲಿ ಎಷ್ಟೋ ಸಲ ಆ ಪುಟ್ಟ ಹೃದಯಗಳು ನಡುವೆ ಮನಸ್ತಾಪ, ಬೇಕ್ರಪ್, ಪ್ಯಾಚಾಪ್-ಇದೆಲ್ಲದರ ನಡುವೆಯೂ ಮನಸ್ಸು ಹೊಡೆದು ಚೂರಾಗುವುದುಂಟು.
ನಾವು ತುಂಬಾ ಇಷ್ಟ ಪಡುವ ‘ಕಾಲೇಜು ಡೇ’ ಬಂದಿರುತ್ತದೆ. ಫೈನಾಲ್ ಇಯರ್ ಕಾಲೇಜು ಡೇ ದಿನ ಮಾತ್ರ ಎಲ್ಲರೂ ತಪ್ಪದೇ ಹಾಜರ್. ಎಲ್ಲದಕ್ಕೂ ‘ಕೊನೆಯದಾಗಿ’ ಎಂಬ ವಿಶೇಷಣ ಬೇರೆ. ಲಾಸ್ಟ್ ಡಾನ್ಸ್, ಡೆಡಿಕೇಶನ್‍ಸಾಂಗ್, ಲಾಸ್ಟ್ ಎಂಜಾಯ್‍ಮೆಂಟ್.
ಅಬ್ಬಾ...ಇದನ್ನೆಲ್ಲ ನೆನಪಿಸಿಕೊಳ್ಳಲು ಬೇಜಾರುಗುತ್ತದೆ. ಬೇಜಾರು ಮುಗಿಯುವಾಗಲೇ ‘ಬೀಳ್ಕೊಡುಗೆ’ಯ ದಿನವೂ ಬಂದಿರುತ್ತದೆ. ಆ ದಿನ ವಾಚ್‍ಮಾನ್‍ನಿಂದ ಹಿಡಿದು ಪ್ರಿನ್ಸಿಪಾಲ್‍ರವರೆಗೂ ಎಲ್ಲರ ಹತ್ರನೂ ಫೋಟೋ ಗಿಟ್ಟಿಸಿಕೊಳ್ಳುತ್ತೀವಿ. ಈ ಫೈನಾಲ್ ಇಯರ್ ಮುಗಿಯುವಷ್ಟರಲ್ಲಿ ಬ್ರೇಕಪ್ಪ ಆಗಿರುವ ಫ್ರೇಂಡ್ಸ್ ಗ್ಯಾಂಗ್, ಅಹಂ-ಜಗಳಗಳ ನಡುವೆಯೂ ಮತ್ತೆ ಒಂದಾಗುವುದುಂಟು.
ವಿದಾಯದ ದಿನ ಹಿಂದೆ ತಿರುಗಿ ನೋಡಿದ್ರೆ ‘ಇಷ್ಟೆಲ್ಲ ಮಾಡಿದ್ದು ನಾವೇನಾ’ ಅನಿಸುತ್ತದೆ. ಪದವಿಯ ದಿನಗಳು ಬೇಗ ಬೇಗನೇ ಮುಗಿಯುತ್ತವೆ. ಮೊದಲ ವರ್ಷದ ಮೊದಲ ದಿನದ ಬೆಪ್ಪುತಕ್ಕಡಿಯಂತಹ ನೋಟವು, ಅಂತಿಮ ವರ್ಷಕ್ಕೆ ಬರುವಾಗ ಎಷ್ಟೊಂದು ಬದಲಾಗಿರುತ್ತದೆ. ಬದುಕೂ ಹಾಗೆಯೇ ಇರಬಹುದು.
#ಚಿತ್ತಾರ

Nice Sowmya .keep it up ,,,👏👏
ReplyDelete