ಹಣದಾಸೆ
ಹಣದಾಸೆ
ಸಂಪಿಗೆಪುರ ಎಂಬ ಸಣ್ಣ ಊರು. ಆ ಊರಿನಲ್ಲಿ ರಾಮಣ್ಣ ಎಂಬ ಕೂಲಿ ಕೆಲಸದವನು. ರಾಮಣ್ಣ ಒಬ್ಬನೇ ಕೂಲಿ ಕೆಲಸ ಮಾಡಿ ದುಡಿದು ದುಡ್ಡಿನಿಂದ ಆತನ ಹೆಂಡತಿ ಸೀತಮ್ಮ ಮತ್ತು ಒಬ್ಬನೇ ಮಗ ಮಹೇಶ ಜೀವನ ಸಾಗಿಸುತ್ತಿದ್ದರು. ಹೇಗೋ ಮಹೇಶ ಈ ಬಡತನದಲ್ಲಿಯೇ ಡಿಗ್ರಿಯವರೆಗೆ ವಿದ್ಯಾಭ್ಯಾಸ ಮುಗಿಸಿದನು. ಆದರೆ ಮಹೇಶನಿಗೆ ಹೆಚ್ಚು ಕಲಿಯುವ ಆಸೆ ಇದ್ದರೂ ಹೋಗಲು ದುಡ್ಡು ಇರಲಿಲ್ಲ. ಬಡತನವು ಕಿತ್ತು ತಿನ್ನುತ್ತಿತ್ತು. ಇಂತಹ ಬಡತನದಲ್ಲಿ ಬೆಳೆದ ಮಹೇಶನಿಗೆ ತಾನು ಹಣಗಳಿಸಬೇಕು. ಶ್ರೀಮಂತನಾಗಬೇಕು ಎಂಬ ಆಸೆ ಕೂಡ ಇತ್ತು. ಆದ್ದರಿಂದ ಮಹೇಶನಿಗೆ ಒಳ್ಳೆಯ ಸಂಬಳ ಬರುವ ಕೆಲಸ ಅನಿವಾರ್ಯವಾಗಿತ್ತು. ಅದಕ್ಕಾಗಿ ಕೆಲಸ ಹುಡುಕಾಡಿದನು. ಹಲವು ಕಡೆ ಇಂಟರ್‍ವ್ಯೂಗಳನ್ನು ಕೊಟ್ಟನು. ಮಹೇಶ ಇಷ್ಟ ಪಡುವಂತಹ ಕೆಲಸ ಸಿಗಲೇ ಇಲ್ಲ. ಸಿಕ್ಕಿದರೂ ಅದರ ಸಂಬಳ ಕಡಿಮೆ. ಅದಕ್ಕಾಗಿ ಮಹೇಶ ಒಳ್ಳೆಯ ಸಂಬಳ ಬರುವ ಕೆಲಸ ಹುಡುಕುವ ಪ್ರಯತ್ನ ಮುಂದುವರಿಸುತ್ತಾನೆ.ಎಲ್ಲಿಯೂ ಕೆಲಸ ಸಿಗದ್ದು ಒಂದು ಕಡೆ, ಇನ್ನೊಂದು ಕಡೆ ಊರಿನ ಜನರು ಕೊಂಕು ಮಾತುಗಳಿಂದ ಮಹೇಶನ ತಲೆಯೇ ಕೆಟ್ಟು ಹೋಗಿತ್ತು. ಮಹೇಶನಿಗೆ ಏನು ಮಾಡುವುದೆಂದು ತಿಳಿಯುವುದಿಲ್ಲ. ಒಂದು ದಿನ ಹೀಗೆ ಕೆಲಸ ಹುಡುಕಿ ಸುಸ್ತಾಗಿ ರಾತ್ರಿ ಮನೆಗೆ ಬಂದ ಮಹೇಶ ತನ್ನಷ್ಟಕ್ಕೆ ಕುಳಿತು ಕಣ್ಣೀರುಡುತ್ತಾನೆ. ಇದನ್ನು ಕಂಡ ತಂದೆ ರಾಮಣ್ಣ ಸಮಾಧಾನಪಡಿಸಿ ಮಲಗುವಂತೆ ಹೇಳಿ ಅಲ್ಲಿಂದ ಹೋಗುತ್ತಾರೆ. ಇತ್ತ ತಂದೆಯ ಎದುರು ಮಲಗಿದಂತೆ ನಾಟಕವಾಡುತ್ತಾನೆ.
ಅಲ್ಲದೇ ಮಹೇಶನು ಮಲಗಿದ್ದಲ್ಲಿಯೇ ತಾನು ಹೇಗಾದರೂ ಮಾಡಿ ಹಣಗಳಿಸಿ ಶ್ರೀಮಂತನಾಗಬೇಕು ಎಂದು ತನ್ನಷ್ಟೇ ಅಂದುಕೊಳ್ಳುತ್ತಾ ಆ ಯೋಚನೆಯಲ್ಲಿಯೇ ಮಲಗುತ್ತಾನೆ.
ರಾತ್ರಿ ಕಳೆದು ಬೆಳಕು ಹರಿದು ತುಂಬಾ ಹೊತ್ತಾದರೂ ಮಹೇಶನ ಪತ್ತೆ ಇಲ್ಲ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿ ತಯಾರಾಗುತ್ತಿದ್ದ ಆದರೆ ಈ ದಿನ ಮಹೇಶನ ಸುದ್ದಿಯೇ ಇಲ್ಲ. ಏನಾಗಿದೇ ಎಂದು ತಾಯಿ ಆತನ ಕೋಣೆಯಲ್ಲಿ ನೋಡಿದರೆ ಮಲಗಿದ್ದ ಚಾಪೆ ಮಡಚಿತ್ತು, ಮಹೇಶನ ಬಟ್ಟೆ ಬರೆಗಳು ಆತನ ಕೋಣೆಯಲ್ಲಿ ಇರಲಿಲ್ಲ. ಇದನ್ನು ಕಂಡ ಸೀತಮ್ಮ ಗಾಬರಿಯಿಂದ ಕಿರುಚಾಡುತ್ತಾರೆ. ಇದನ್ನ ಕೇಳಿ ಎಲ್ಲೋ ಕೆಲಸ ಮಾಡುತ್ತಿದ್ದ ರಾಮಣ್ಣ ಓಡಿ ಬಂದು ನೋಡಿದರೆ ಸೀತಮ್ಮನ ಆತಂಕಕ್ಕೆ ಕಾರಣ ತಿಳಿಯುತ್ತದೆ. ಇಬ್ಬರು ಜೋರಾಗಿ ಅಳುತ್ತಾರೆ. ಇದನ್ನು ಕೇಳಿ ಅಕ್ಕಪಕ್ಕದವರು ಬಂದು ನೋಡಿದರೆ ಮಹೇಶ ಇಲ್ಲ. ರಾಮಣ್ಣ ಮತ್ತು ಸೀತಮ್ಮ ಆಕಾಶವೇ ಕಳಚಿ ಬಿದ್ದಂತೆ ಅಳುತ್ತಾ ಇರುವುದನ್ನು ಕಂಡು ಮಹೇಶನ ಮನೆ ಬಿಟ್ಟು ಹೋದ ವಿಷಯ ತಿಳಿಯುತ್ತದೆ. ಅವರೆಲ್ಲರೂ ರಾಮಣ್ಣ ಮತ್ತು ಸೀತಮ್ಮನನ್ನು ಸಮಾಧಾನಪಡಿಸುತ್ತಾರೆ. ಆಗಲೇ ಮಹೇಶ ಮನೆ ಬಿಟ್ಟು ಹೋದ ವಿಷಯ ಇಡೀ ಊರಿಗೆ ತಿಳುಯುತ್ತದೆ. ಎಲ್ಲರೂ ಊರಿನ ಮೂಲೆ ಮೂಲೆಯಲ್ಲಿ ಹಡುಡುಕಾಡುತ್ತಾರೆ. ಅಲ್ಲದೇ ಹತ್ತಿರದ ಊರಿಗೆ ಹೋಗಿ ಹುಡುಕಾಟ ನಡೆಸುತ್ತಾರೆ. ಎಲ್ಲ ಹುಡುಕಿದರೆರು ಮಹೇಶನ ಪತ್ತೆ ಇಲ್ಲ. ಹೀಗೆ ಇರಬೇಕಾದರೆ ಸೂರ್ಯ ಎಂದಿನಂತೆ ಮೆಲ್ಲಗೆ ನಿದ್ರೆಗೆ ಜಾರುತ್ತಾನೆ ಇನ್ನೂ ಹುಡುಕುತ್ತಿದ್ದ ಜನರು ಕತ್ತಲು ಆಯಿತೆಂದು ಅವರವರ ಮನೆಗೆ ಹೋಗುತ್ತಾರೆ. ಕೆಲವರು ನಾಳೆನೂ ಅಥವಾ ನಾಡಿದ್ದು ಬರಬಹುದೆಂದು ಹೇಳಿ ಸಮಾಧಾನಪಡಿಸಿಕೊಳ್ಳಿ.
ಹೀಗೆ 6 ತಿಂಗಳುಗಳೇ ಕಳೆದರೂ ಮಹೇಶನ ಸುಳಿವೇ ಇಲ್ಲ. ಇದೇ ಕೊರಗಿನಿಂದ ತಾಯಿ ಸೀತಮ್ಮ ಇಹ ಲೋಕವನ್ನೇ ತ್ಯಜಿಸುತ್ತಾರೆ. ಒಂದು ಕಡೆ ಮಗ ಮನೆ ಬಿಟ್ಟು ಹೋದ ಇನ್ನೊಂದು ಕಡೆ ಹೆಂಡತಿ ಸೀತಮ್ಮನ ಸಾವು ಇವೆರಡರ ಮಧ್ಯೆ ಸಿಕ್ಕಿಹಾಕಿಕೊಂಡ ರಾಮಣ್ಣನಿಗೆ ಏನು ಮಾಡುವುದೆಂದು ತಿಳಿಯುವುದಿಲ್ಲ. ಹೀಗೆ ಮನೆಯ ಘಟನೆ ಕೆಲಸಕ್ಕೆ ಹೋಗಿಯಾದರು ಮರೆಯೋಣ ಎಂದು ಯೋಚಿಸಿ ಕೆಲಸಕ್ಕೆ ಹೊರಡುತ್ತಾನೆ.
ಇತ್ತ ರಾಮಣ್ಣ ಕೆಲಸ ಮಾಡುತ್ತರಬೇಕಾದರೆ ಹಿಂದಿನಿಂದ ಯಾರೋ ಅಪ್ಪ ಎಂದು ಕರೆದ ಶಬ್ದ ಕೇಳಿಬರುತ್ತದೆ. ಹಾಗೇ ಹಿಂದುರುಗಿ ನೋಡಿದರೆ ಯಾರೋ ಒಬ್ಬ ಯುವಕ. ಸೂಟು, ಬೂಟು ಹಾಕಿ ನಿಂತುಕೊಂಡಿದ್ದ ಕಂಡ ರಾಮಣ್ಣ ಆತನನ್ನು ಮೇಲಿಂದ ಕೆಳಗಿನವರೆಗೆ ನೋಡಿದರೂ ರಾಮಣ್ಣನಿಗೆ ಆತ ಯಾರೆಂದು ತಿಳಿಯುವುದಿಲ್ಲ. ಆಗ ಆತನೇ ತಾನು ಮಹೇಶ ಎಂದು ಹೇಳಿದಾಗ ರಾಮಣ್ಣನಿಗೆ ಎಲ್ಲಿಲ್ಲದ ಖುಷಿ. ಆದರೆ ಇನ್ನೊಂದು ಕಡೆ ಆಶ್ಚರ್ಯ ಯಾಕೆಂದರೆ ಮಹೇಶನ ಅವತಾರವೇ ಹಾಗಿತ್ತು. ಅಲ್ಲಿಂದ ರಾಮಣ್ಣ ಮಹೇಶನನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿ ಮಹೇಶನ ಕೆಲಸದ ಬಗ್ಗೆ ವಿಚಾರಿಸುತ್ತಾನೆ. ಆಗ ಮಹೇಶನು ತಾನು ಮುಂಬೈಯಲ್ಲಿ ಒಳ್ಳೆಯ ಕೆಲಸದಲ್ಲಿದ್ದು ರಜೆಯಲ್ಲಿ ಬಂದಿರುವುದಾಗಿ ಹೇಳಿ ರಾಮಣ್ಣನ ಬಾಯಿ ಮುಚ್ಚಿಸುತ್ತಾನೆ.
ಇತ್ತ ಮಹೇಶ ಮನೆಗೆ ಬಂದು ತಿಂಗಳು ಕಳೆದೇ ಹೋಯಿತು. ಹೀಗೆ ಮನೆಯಲ್ಲೆ ಇದ್ದು ಬೇಸರವಾಗಿ ತಿರುಗಾಡಿ ಬರುವುದಾಗಿ ಅಪ್ಪನಲ್ಲಿ ಹೇಳಿ ಹೊರಡುತ್ತಾನೆ. ರಾಮಣ್ಣ ಆಯಿತು ಎಂದು ತಲೆಯಾಡಿಸುತ್ತಾನೆ. ಸುಮಾರು ಆರೇಳು ತಿಂಗಳಿಂದ ಯಾರಲ್ಲಿ ಬೆರೆತು ಮಾತನಾಡದ ರಾಮಣ್ಣ ಅಕ್ಕಪಕ್ಕದ ಸ್ನೇಹಿತರನ್ನು ಹರಟೆ ಹೊಡೆಯಲು ಕರೆಯುತ್ತಾನೆ. ವಸಂತ ಕಾಲದಲ್ಲಿ ಬಾಡಿದ ಗಿಡ-ಮರಗಳು ಚಿಗುರುವಂತೆ ರಾಮಣ್ಣನ ಬೆಳವಣಿಗೆಯನ್ನು ಕಂಡ ಅವರು ಹರಟೆ ಹೊಡೆಯಲು ಖುಷಿಯಿಂದಲೇ ಬರುತ್ತಾರೆ. ಹೀಗೆ ತುಂಬಾ ಖುಷಿ ಸಂತೋಷದಿಂದ ಹರಟೆ ಹೊಡೆಯುತ್ತಿರಬೇಕಾದರೆ ದೂರದಿಂದ ಪೋಲಿಸರು ಯಾರನ್ನೊ ಓಡಿಸಿಕೊಂಡು ಬರುವುದು ಕಾಣುತ್ತದೆ. ಯಾರು ಎಂದು ನೋಡುವಷ್ಟರಲ್ಲಿ ಓಡಿ ಬಂದ ವ್ಯಕ್ತಿ ರಾಮಣ್ಣನ ಕಾಲಿಗೆ ಬೀಳುತ್ತಾನೆ. ಯಾರೆಂದು ನೋಡಿದರೆ ತನ್ನ ಮಗÀ ಮಹೇಶನನ್ನು ಪೋಲಿಸರು ಓಡಿಸಿಕೊಂಡು ಬಂದಿರುವುದು ಕಂಡು ಎಲ್ಲರಿಗೂ ಆಶ್ಚರ್ಯ ಏನೆಂದು ಕೇಳಿದರೆ ಆತನನ್ನೊ ವಿಚಾರಿಸಿ ಎಂದು ಹೇಳುತ್ತಾರೆ. ಮಹೇಶನನ್ನು ಕೇಳಿದರೆ ತಾನು ಆವತ್ತು ಹಣ ಗಳಿಸುವ ಆಸೆಯಿಂದ ರಾತ್ರೋ ರಾತ್ರಿ ಮನೆ ಊರು ಬಿಟ್ಟು ಮುಂಬೈಗೆ ಹೋದಾಗ ಯಾರೋ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಆತ ತನಗೆ ಕೈ ತುಂಬಾ ಹಣ ಕೊಡುತ್ತೇನೆ ಹೇಳಿದ ನಾನು ಹೇಳಿದ Pಕೆಲಸವನ್ನೆಲ್ಲಾ ಮಾಡಬೇಕೆಂದು ಹೇಳುತ್ತಾನೆ. ಆಗ ನಾನು ಆ ಹಣದ ಆಸೆಗೋಸ್ಕರ ಆತನ ಮಾತಿನಂತೆ ದೇಶ ನಾಶಗೊಳಿಸುವಂತಹ ದೇಶದ್ರೋಹದ ಕೆಲಸವನ್ನು ಮಾಡಿದೆನು ಎಂದು ಕಣ್ಣೀರುಡುತ್ತಾನೆ.
ಇದನ್ನು ಕೇಳಿದ ರಾಮಣ್ಣನಿಗೆ ಸಿಡಿಲು ಬಡಿದಂತಾಗುತ್ತದೆ ರಾಮಣ್ಣ ಒಂದು ಕ್ಷಣ ಯೋಚಿಸುತ್ತಾನೆ. ಈ ಮಗನಿಗೋಸ್ಕರ ತಾನು ಕಷ್ಟಪಟ್ಟು ದುಡಿದೆ ಈತನ ಹೆತ್ತತಾಯಿ ಈತನ ಕೊರಗಿನಿಂದ ಪ್ರಾಣವನ್ನೇ ಕಳೆದುಕೊಂಡಳು ಈತ ಹಣದ ಆಸೆಗೋಸ್ಕರ ದೇಶವನ್ನೇ ನಾಶ ಮಾಡಲು ಹೊರಟಿದ್ದಾನೆ. ಈತನು ಇನ್ನೂ ನನ್ನ ಮಗನೇ ಅಲ್ಲ ಎಂದು ಪೋಲಿಸರ ಬಳಿ ಇದ್ದ ಪಿಸ್ತೂಲನ್ನು ಎಳೆದು ಮಹೇಶನ ಎದೆಗೆ ಗುರಿಯಿಟ್ಟು ಹೊಡೆಯುತ್ತಾನೆ, ಮಹೇಶ ಅಲ್ಲೇ ನೆಲಕ್ಕುರಳಿ ಸತ್ತೇ ಹೋಗುತ್ತಾನೆ. ಅಲ್ಲದೇ ಇಷ್ಟೆಲ್ಲದಕ್ಕೂ ಪರೋಕ್ಷವಾಗಿ ತಾನೇ ಕಾರಣ ಎಂದು ಪ್ರಾಯಶ್ಚಿತಗೋಸ್ಕರ ಅದೇ ಪಿಸ್ತೂಲಿನಿಂದ ತನ್ನನೇ ಸುಟ್ಟುಕೊಳ್ಳುತ್ತಾನೆ. ರಾಮಣ್ಣನು ಅಲ್ಲೆ ಸುತ್ತು ಬೀಳುತ್ತಾನೆ ಈ ದಾರುಣ ಘಟನೆಗೆ ಅಲ್ಲಿದ್ದ ಜನಗಳೇ ಸಾಕ್ಷಿಯಾದರು.
ಅದಕ್ಕಾಗಿ ಕಷ್ಟಪಟ್ಟು ಬೆಳೆಸಿದ ತಂದೆ ತಾಯಿಯ ದೀರ್ಘಾವಧಿ ಸಂಬಂಧವನ್ನು ಬಿಟ್ಟು ಅಲ್ಲ ಹೊತ್ತಿನ ಶ್ರೀಮಂತಿಕೆಗಾಗಿ ಹಣಕ್ಕೆ ಆಸೆ ಪಟ್ಟು ದೇಶದ್ರೋಹ ಕೆಲಸ ಮಾಡಿ ಕೊನೆಗೆ ಸಾವನ್ನು ತಮ್ಮ ಮೈ ಮೇಲೆ ಎರಚಿಕೊಳ್ಳಬಾರದು. ಅದಕ್ಕಾಗಿ ದೀರ್ಘಾಯಸ್ಸು ಸಂಬಂಧವನ್ನು ಬಿಟ್ಟು ಅಲ್ಪಾಯುಸ್ಸು ಹಣಕ್ಕೆ ಆಸೆ ಪಡಬಾರದೆಂಬುದು ನಮ್ಮ ಆಶಯ ಯಾವತ್ತೂ ಕ್ಷಣಿಕ ಆಸೆಗೆ ಬಲಿಯಾಗಬಾರದು.
# ಚಿತ್ತಾರ
Meaningful write up
ReplyDeleteTq
ReplyDeleteSuper ..💰💰💰🤑🤑
ReplyDeleteSuper ..💰💰💰🤑🤑
ReplyDeleteTqqq
ReplyDelete