ಕಾಯಿನ್ ಬೂತ್ ‘ಲವ್ ಸ್ಟೋರಿ’


                 ಕಾಯಿನ್ ಬೂತ್ ‘ಲವ್ ಸ್ಟೋರಿ’


ಕರ್ಣನಿಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ. ಅಂತಿಮ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ, ಅಪ್ಪನ ಜೊತೆ ಬೆಂಗಳೂರಿಗೆ ಹೊರಡುಲು ಸಿದ್ಧನಾಗುತ್ತಾನೆ. ಕರ್ಣನ ಅಪ್ಪ ಬೆಂಗಳೂರಿನಲ್ಲಿ ಸಣ್ಣ ಹೋಟೆಲಿನ ವ್ಯವಹಾರವನ್ನು ನೋಡಿಕೊಳ್ಳುತ್ತ ಇದ್ದರು, ಹೀಗಾಗೀ ಕರ್ಣನು ಮುಂದಿನ ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕಿ, ಅಪ್ಪ ಜೊತೆಗೆ ಹೋಟೆಲಿನಲ್ಲಿ ಕೆಲಸ ಮಾಡಲು ಮುಂದಾಗುತ್ತಾನೆ. ಮಗನ ಮೇಲಿನ ಪ್ರೀತಿಯಿಂದಾಗಿ ಕರ್ಣನಿಗೆ ಒಂದು ಮೊಬೈಲ್ ಫೋನನ್ನು ತೆಗೆದುಕೊಂಡುತ್ತಾರೆ. ಅಂದು ಭಾನುವಾರ ರಾತ್ರಿ ಕರ್ಣ ಟಾರೀಸ್ ಮೇಲೆ ಮಲಗಲು ಹೋಗುತ್ತಾನೆ. ಅವನ ಮೊಬೈಲ್ಗೆ ಒಂದು ನಂಬರ್‍ನಿಂದ ಕರೆ ಬರುತ್ತೆ, ಕರ್ಣನು ಆ ಕಾಲ್‍ನ್ನು ರಿಸೀವ್ ಮಾಡಿ...ಹಾಲೋ ಯಾರು ನೀವು....ಆ ಕಡೆಯ ಧ್ವನಿಯು ಹುಡಿಗಿಯ ಧ್ವನಿಯಂತೆ ಹಾಲೋ ಚಿಕ್ಕಪ್ಪ ನಾನು...ಕರ್ಣನಿಗೆ ಸಂಶಯ ಉಂಟಾಗಿತ್ತು...ಅರೇ ನೀವು ಯಾರು ಅಂತ ನನಗೆ ಗೊತ್ತು ಆಗಿಲ್ಲ...ಇದು ರಾಂಗ್ ನಂಬರ್ ಇರಬೇಕು...ಆಕೆ ಪುನಃ ಕೇಳಿದರು ಒಂದು ನಿಮಿಷ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ಇದು ಕಾಯಿನ್ ಬೂತ್‍ನಿಂದ ಕಾಲ್ ಮಾಡುತ್ತಿರುವುದು. ನನ್ನ ಒಂದು ರೂಪಾಯಿ ವ್ಯರ್ಥವಾಗಿ ಹೋಗುತ್ತೆ. ನಿಮ್ಮ ತುಂಬಾ ಚಂದ ಮಾತ್ತಾಡುತ್ತೀರಾ ಅರೇ ನೀವು ಕುಂದಾಪುರದವರಾ.. ಆಕೆಯ ಹೆಸರು ಕೇಳಿದಕ್ಕೆ ಏನೂ ಪ್ರತಿಕ್ರಯಿಸಿಲ್ಲ. ನಿಮ್ಮ ಹೆಸರು ಏನೂ ಅಂತ  ಕರ್ಣನಿಗೂ ಕೇಳುತ್ತಾಳೆ. ಕರ್ಣನು ಪ್ರತಿಕ್ರಯಿಸುವುದಿಲ್ಲ. ಮುಂದೆ ಏನೂ ವಿಷಯ ಹೇಳು ಬೇಕು ಅನ್ನೂವಷ್ಟರಲ್ಲಿ ಕಾಲ್ ಕಾಟ್ ಆಗಿರುತ್ತೆ.  ಮೊಬೈಲ್‍ನ್ನು  ಪಕ್ಕಕ್ಕೆ ಇಟ್ಟು ಆಕೆಯ ಧ್ವನಿಯನ್ನು ಮರುಕಳಿಸುತ್ತ. ಬೆಳದಿಂಗಳ ಬಾನಲ್ಲಿ ಚಂದ್ರನ ಬಿಂಬ ಕಂಡು ಯಾರು ಈಕೆ ಬೆಳದಿಂಗಳ ಬಾಲೆ, ಧ್ವನಿ ಎಷ್ಟೊಂದು ಚಂದ ಇದೆ ಮಾರ್ರೆ. ಇನ್ನು ಆಕೆ ಕಾಣ್ಬೋಕೆ ಇನ್ನೂ ಎಷ್ಟು ಚಂದ ಇರಬಹುದು. ಪುನಃ ಆ ನಂಬರ್‍ಗೆ ಮತ್ತೊಮ್ಮೆ ಕಾಲ್ ಮಾಡುತ್ತಾನೆ. ಆ ನಂಬರ್ ಕಾಯಿನ್ ಬೂತ್ ಎಂದು ಪ್ರಕ್ರಯಿಸುತ್ತೆ. ಕೊನೆಗೂ ಈಕೆ ನಮ್ಮೂರು ಕುಂದಾಪುರದವಳಂತಾಯಿತು.



ಅಂದು ಕರ್ಣ ಡೆಸ್ಸ್ ತೆಗೆದುಕೊಳ್ಳುಲು ಅಂಗಡಿಗೆ ಹೋಗಿರುತ್ತಾನೆ,  ಕರ್ಣನಿಗೆ ಆರೆಂಜ್ ಕಲರ್ ಅಂದ್ರೆ ತುಂಬಾ ಅಚ್ಚು-ವೆಚ್ಚು. ಅದೇ ಕಲರ್ ಡ್ರೆಸ್ ತಕ್ಕೊಂಡು ಬರುತ್ತಿರುವಾಗ ಮೊಬೈಲ್ ಗುರುಗೊಟ್ಟಲು ಶುರು  ಮಾಡುತ್ತೆ ಮತ್ತೆ ಅದೇ ನಂಬರ್, ಕಾಲ್ ರಿಸೀವ್ ಮಾಡಿ ಹಲೋ..ನಾನು ಅವತ್ತು ನಿಮ್ಮಗೆ ಕಾಲ್ ಮಾಡಿದವಳು..ನೀವು ರಾಂಗ್ ನಂಬರ್ ಹೇಳದವಳು.. ಕರ್ಣ ಈ ಕಡೆಯಿಂದ ಹೊ ನೀವು ಮತ್ತೆ ಕಾಲ್ ಮಾಡಿದ್ರ.. ಹೀಗೆ ಇವರಿಬ್ಬರು ಮಾತಾನಾಡುತ್ತ ತಮ್ಮ ತಮ್ಮ ಪರಿಚಯವನ್ನು ಹೇಳಿಕೊಳ್ಳುತ್ತಾರೆ. ಇಲ್ಲಿ ಇವರಿಬ್ಬರು ತಮ್ಮ ಹೆಸರು ಹೇಳಿಕೊಳ್ಳುವುದಿಲ್ಲ. ನಾ ಇವಾಗ ಡ್ರೆಸ್ ಶಾಪ್ ಅಲ್ಲಿದೇನೆ. ಅದಕ್ಕೆ ಆಕೆ ಹೇಳಿದಳು ಹೋ ನೀವು ಆರೆಂಜ್ ಕಲರ್ ಡ್ರೆಸ್ ತಕ್ಕೊಂಡು ಇರಬೇಕು ಅನಿಸುತ್ತೆ ನಿಜ ಅಲ್ವಾ! ನಂಗೋ ಆರೆಂಜ್ ಕಲರ್ ಅಂದ್ರೆ ತುಂಬಾ ಇಷ್ಟ. ಆಕೆ ಹೇಳಿದ ಮತ್ತೆ ಯಾವ ಪದಗಳೇ ಹೊರಡಲಿಲ್ಲ. ಆಕೆಯ ಒಂದೊಂದು ಪದಗಳು ಸಹ ಕರ್ಣನ ಮನಸ್ಸನೇ ಬದಲಾಯಿಸಿ ಬಿಟ್ಟಿತ್ತು. ಪ್ರೀತಿ ಅಂದ್ರೆನೆ ಹಾಗೇ ಅಪರಿಚಿತ ವ್ಯಕ್ತಿಗಳನ್ನು ಒಂದು ಮಾಡುವ ಶಕ್ತಿ ಇರುವುದೆ ಇಂತಹ ಪ್ರೀತಿಗಳಿಗೆ ಮಾತ್ರ. ರಾಂಗ್ ನಂಬರ್‍ನಿಂದ ಬಂದ ಕರೆ ಅವರಿಬ್ಬರ ಮನಸ್ಸನೇ ಬದಲಾಯಿಸೆ ತಿರಿತು.  
ಒಂದು ವರ್ಷ 4 ತಿಂಗಳುಗಳ ಕಾಲ ತನಕ ಇವರಿಬ್ಬರ ನಡುವಿನ ಪ್ರೀತಿ ಒಂದು ರೂಪಾಯಿ ಕಾಯಿನ್ ಬೂತ್ ಗಟ್ಟಿಯಾಗಿಸಿತ್ತು. ಒಂದೇ ಒಂದು ಪೋನ್ ಕಾಲ್‍ಗೆ ಕರ್ಣ ಮನಸ್ಸಿಗೆ ಮತ್ತಷ್ಟು ಹತ್ತಿರವಾದಳು, ಗುರುತು ಪರಿಚಯೊಂತು ಇಲ್ಲವೇ ಇಲ್ಲ. ಅವಳ ಕಾಲ್‍ಗಾಗಿ ದಿನೇ ವಿಡೀ ಕಾದು ಕೂರುತ್ತಿದ್ದ. ಇಷ್ಟು ವರ್ಷ ಆದರೂ ಇವರಿಬ್ಬರು ತಮ್ಮ ಹೆಸರನ್ನು ಹೇಳಿಕೊಂಡಿಲ್ಲ.

ಅಂದು ಬೆಂಗಳೂರಿನಲ್ಲಿ ಜೋರಾದ ಮಳೆ. ಈ ಜೋರಾದ ಮಳೆಯಲಿ ಕರ್ಣ ಮನಸ್ಸು ಅದೇ ಕಾಲ್‍ಗಾಗಿ ಕಾಯುತ್ತಿತ್ತು. ಮೊದಲ ಮಳೆ, ಮೊದಲ ಪ್ರೀತಿ ಇವರೆಡಕ್ಕೂ ಅದೇನೂ ಸಂಬಂಧ ಇದೆಯೋ ಗೊತ್ತಿಲ್ಲ. ಹೋಟೆಲ್‍ನಲ್ಲಿ ಕೂತುಕೊಂಡು ಮಳೆ ಮೇಲೆ ಕವನ ಬರೆಯಲು ಶುರು ಮಾಡುತ್ತಾನೆ. ಅದೇಷ್ಟೂ ವರ್ಷ ಆಯಿತೋ ಗೊತ್ತಿಲ್ಲ ಕರ್ಣ ಪೆನ್ನು ಹಿಡಿಯಾದೆ ಬಿಳಿ ಹಾಲೇ ಹಿಡಿದು ಗಿಚಲು ಶುರು ಮಾಡುತ್ತಾನೆ. ಅಷ್ಟೊತ್ತಿಗಾಗಲೇ ಅವಳ ಕಾಲ್ ಬರುತ್ತೆ ಕರ್ಣ ಹೇಳುತ್ತಾನೆ ನೋಡಿ ನೀವು ಯಾರು ಅಂತಾನೆ ನನಗೆ ಗೊತ್ತಿಲ್ಲ. ನೀವು ಒಂದೇ ಕಾಯಿನ್‍ನಲ್ಲಿ ಮಾತನಾಡುವುದನ್ನ ಬಿಟ್ಟುತ್ತೀರಾ ಇವತ್ತದ್ರರೂ ನಿಮ್ಮ ಜೊತೆ ತುಂಬಾ ಮಾತನಾಡಬೇಕು. ಅದಕ್ಕೆ ಅವಳು ಹೇಳುತ್ತಾಳೆ ನಾನು ಇವತ್ತು ಒಂದು ಕಾಯಿನ್‍ನಿಂದ್ದ ಮಾತಾನಾಡುತ್ತ ಇಲ್ಲ, 5 ಕಾಯಿಂನ್ನ ನಿಂದ್ದ ಮಾತಾನಾಡುತ್ತ ಇದ್ದೀನಿ. ಕರ್ಣನಿಗೆ ಎಲ್ಲಿಲ್ಲದ ಸಂತೋಷ. ನೋಡಿ ನೀವು ಮಾತನಾಡುತ್ತಿರುವುದು ನನಗೆ ಸರಿಯಾಗಿ ಕೇಳುತ್ತ ಇಲ್ಲ. ಇಲ್ಲಿ ಜೋರಾಗಿ ಮಳೆ ಸುರಿತ್ತ ಇದೆ...ಏನೋ ಕಳಿಸ್ತ ಇಲ್ಲ...ಸ್ವಲ್ಪ ಸಮಯ ಬಿಟ್ಟು ನಂತರ ನಿಮಗೆ ಕಾಲ್ ಮಾಡುತ್ತೀನಿ ಹೇಳಿ ಕರ್ಣ ಖುಷಿಯಾಗಿ ಮಳೆಯಲ್ಲೇ ನೆನೆಕೊಂಡು ಮನೆಗೆ ಹೋಗುತ್ತಾನೆ. ಮುಖ ತುಂಬ ನಗು ಅ ನಗು ತುಂಬಾ ಮುಗುಳುನಗೆಯಲ್ಲೂ ಮನೆ ಸೇರುವಷ್ಟರಲ್ಲಿ ಅವಳಿಗೆ ಕಾಲ್ ಮಾಡಬೇಕು ಅಂತಾ ಫೋನ್ ಎತ್ತುಕೊಂಡಾಗ ಮಳೆ ನೀರಿನಿಂದಾಗಿ ಮೊಬೈಲ್ ಫುಲ್ ಕೆಟ್ಟು ಹೋಗುತ್ತೆ. ಇದ್ದರಿಂದಾಗಿ ತುಂಬಾ ನೊಂದುಕೊಳ್ಳುತ್ತಾನೆ. ಎಷ್ಟೇ ಪ್ರಯತ್ನ ಪಟ್ಟರೂ ಮೊಬೈಲ್ ಹಾಳಾಗಿ ಹೋಗಿರುತ್ತೆ....ಕರ್ಣ ತುಂಬಾ ಬೇಜಾರಾಗುತ್ತಾನೆ. ಎಷ್ಟೇ ಪ್ರಯತ್ನ ಪಟ್ಟರೂ ವ್ಯರ್ಥ. ಅ ಫೋನ್ ಸೀಮ್ ಕೂಡ ಕೆಟ್ಟು ಹೋಗಿರುತ್ತೆ. ಹೊಸ ಪೋನ್  ನಂಬರ್ ಬಂದ್ರೂ. ಆಕೆಯ ನೆನಪುಗಳು ಮರೆಯಾಗುವುದಿಲ್ಲ. ಕರ್ಣ ಊರು ಕಡೆ ಹೋಗಿ ಅ ಕಾಯಿನ್ ಬೂತ್ ವಿಚಾರಿಸಿದ್ರೂ ಕೂಡ ಅವಳ ಸುಳುವೆ ಇಲ್ಲದಾಯಿತು. ಅವಳ ಯಾರೆಂದು ಕೊನೆಗೂ ತಿಳಿದುಕೊಳ್ಳುವಲ್ಲಿ ವಿಫಲನಾದ ಕರ್ಣ.




ಅವಳ ಧ್ವನಿ ಕೇಳಿದ ಆ ಕ್ಷಣದಿಂದ ಅವಳಿಗಾಗಿ ಕವಿತೆ, ಕವನ, ಕಥೆ ಗಿಚಲು ಶುರೂ ಮಾಡಿದ. ಅವಳನ್ನು ಕಣ್ಣಾರೆ ನೋಡಿಲ್ಲ ಮಾತನಾಡಿಸಲಿಲ್ಲ ಕೊನೆಗೂ ಕರ್ಣನಾ ಮನಸ್ಸಲ್ಲಿ ಪ್ರೀತಿ ಚಿಗುರೊಡಿಯಿತು. ಮೊದಲ ಪ್ರೀತಿಯ ಸುಮಧುರ ಭಾವನೆಗಳಿಗೆ ಅವ ಇಟ್ಟ ಹೆಸರೆ ಓ ನನ್ನ ಬೆಳದಿಂಗಳ ಬಾಲೆ...

”ಯಾವ ಸುಳಿವೂ ಕೊಡದೆ, ಸುಳಿಯಲ್ಲಿ ತೇಲಿ ಹೋದೆ, ಮುಂಗಾರು ಮಳೆಗೆ ಹೋಗುತ್ತಿರಲಿಲ್ಲ ನಿನ್ನ ನೆನಪಿನ ಸೆಳೆತ, ಕೊಚ್ಚಿ ಹೋಯಿತು ಮುಂಗಾರು ಮಳೆಗೆ ಆ ಪ್ರೀತಿಯ ಪರ್ವತ!! ಹೇಳು ಬಿಡು ಗೆಳತಿ ನನಗೆ ನೀ ಯಾರೆಂದು”

                                              # ಚಿತ್ತಾರ




Comments

Post a Comment