ಅಮ್ಮ ನಿನ್ನ ಎದೆಯಾಳದಲಿ...
ಅಮ್ಮ ಎನ್ನುವ ಪದವೇ ಒಂದು ಅದ್ಭುತ, ಜಗತ್ತಿನ ಪ್ರತಿಯೊಂದು ಮಗು ಜಗದ ತೊಟ್ಟಿಲಿಗೆ ಬಂದೊಡನೆ ಹೇಳುವ ಮಾತು ಅಮ್ಮ. ತನ್ನ ನೋವುನೆಲ್ಲ ಮರೆತು ಮಗುವಿನ ಮುಗ್ಧ ಮುಖದಲ್ಲಿ ಸಂತಸವನ್ನು ಕಾಣುವ ಮನಸ್ಸು ಅಮ್ಮನದು. ಒಂಬತ್ತು ತಿಂಗಳು ಹೊತ್ತು ಹೆತ್ತ ನಂತರ ಮಡಿಲಲ್ಲಿ ಮಲಗಿರುವ ಮಗು ಕಂಡೊಡನೇ ಆ ಒಂಬತ್ತು ತಿಂಗಳಯಾತನೆಯನ್ನು ಮರೆಯುವ ಮನಸ್ಸು ಅಮ್ಮನದು. ಕೆಲವೊಮ್ಮೆ ತಾನು ಹಸಿವಿನಿಂದಿದ್ದರೂ ಮಗುವಿನ ಹಸಿವು ನೀಗಿಸುವಂತ ಮಹಾತಾಯಿ. ಮಗು ತೆವಳುತ್ತಾ, ಅಂಬೆ ಗಾಲಿಡುತ್ತ ತನ್ನತ್ತ ಬರುತ್ತಿದ್ದರೆ ತಾಯಿಗೆ ಅದು ಸ್ವರ್ಗವೇ ಸರಿ. ಮಗುವಿನ ಆರೈಕೆಯಲ್ಲಿ ಅದೆಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುವ ತಾಯಿ ದೇವರಿಗಿಂತ ಮಿಗಿಲು.
ನನ್ನ ಒಲವಿನ ಜೀವ ನೀನೆ...ನನ್ನದೆಯ ಉಸಿರು ನೀನೆ... ನಾ ಎಡವಿ ಬಿದ್ದಾಗ ಕೈ ಹಿಡಿದು ನಡೆಸಿದವಳು ನೀನೆ... ಈ ಸುಂದರ ಪಯಣದಲಿ ನೀನೇ ನನ್ನ ದಾರಿ ದೀಪ. ಕೊನಗೊ ಹರಸಾಹಸ ಪಟ್ಟೂ ನನ್ನ ಜೀವ ಉಳಿಸಿ ಮರು ಜೀವ ಕೊಟ್ಟ ಕರುಣಾಮಿ ನೀನೇ ಅಮ್ಮ...
ಅಪ್ಪ ಇಲ್ಲದ ಆ ಕರಾಳ ನೆನಪುಗಳು ಅಮ್ಮನ ಆಸರೆಯಲ್ಲೇ ಬಂದಿಯಾಗಿಸಿತ್ತು. ಕಣ್ಣಂಚಿನ ಕಣ್ಣೀರು ಎಷ್ಟೇ ಮರೆಯಾದರೂ ನಿನ್ನ ಮನಸ್ಸಲ್ಲಿ ಅದೇಷ್ಟೂ ನೋವು ಗಟ್ಟಿಯಾಗಿ ಕೂತಿರಬಹುದು. ಗಂಡ ಕಳೆದುಕೊಂಡ ನೋವು,ಯಾತನೆ ಇವೆಲ್ಲವೂ ಒಬ್ಬ ಹೆಣ್ಣಿಗೆ ಮಾತ್ರ ಅರ್ಥವಾಗುತ್ತೆ. ಪರಸ್ಪರರಾ ಚುಚ್ಚು ಮಾತು, ಅನುಮಾನಗಳನ್ನು ಸಹ ಸಹಿಸಿಕೊಂಡೆಯಲ್ಲ.
ನನ್ನ ಪುಟ್ಟ ಕೈಯಿಡಿದು ಅ,ಆ,ಇ...ತಿದ್ದಲು ಕಲಿಸಿಕೊಟ್ಟೆ. ಎಡವಿ ಬಿದ್ದಾಗ ಧೈರ್ಯ ಮಾಡಿ ಮೇಲೆ ಎಬ್ಬಿಸಿದ ಆ ದಿನಗಳು ಎಂದಿಗೂ ಮರೆಯಾಗಲು ಸಾಧ್ಯವಿಲ್ಲ. ಜೀವನದ ಪಾಠದ ಜೊತೆ, ಶಿಸ್ತು, ಬಡತನದ ಅರಿವು ತಿಳಿಸಿಕೊಟ್ಟೆ. ನನ್ನ ಪ್ರತಿಯೊಂದು ಹೆಚ್ಚೆ ಗುರುತಲೂ ನೀನೆ ಸ್ಫೂರ್ತಿ. ತಾನು ಎಷ್ಟೇ ಕಷ್ಟ ಅನುಭವಿಸಿದರೂ ತನ್ನ ಮಕ್ಕಳ ಬಾಳಲಿ ನಂದಾ ದೀಪಳಾದೆ.
ಪ್ರತಿ ಬಾರಿ ಆಟ ಆಡೋಕೆ ಹೋಗಿ ಗಾಯ ಮಾಡ್ಕೊಂಡು ಬಂದಾಗೆಲ್ಲ ಸರಿ ಬೈಯುವ ಬದಲು…ಆ ಗಾಯಕ್ಕೆ ಜೌಷಧಿ ಹಚ್ಚುವ ಸಮಯದಲಿ ಕಣ್ಣಲ್ಲಿ ಜಿನುಗುತ್ತಿದ್ದ ಆ ಕಣ್ಣೀರು ಪ್ರತಿಕ್ರಯಿಸಿದ್ದು ‘ಬಿದ್ದದ್ದು ನೀನಾದರೂ ನೋವಾಗಿರುವುದು ನನಗೆ ಎಂದು’ ಹೀಗೆ ಅದೇಷ್ಟೊ ನೆನಪುಗಳು ಮರೆಯಾಗಿವೆ. ಮಕ್ಕಳನ್ನು ಚೆನ್ನಾಗಿ ಓದಿಸಿ, ಬೆಳೆಸಿ ವಿದ್ಯಾವಂತರನ್ನಾಗಿ ಮಾಡಲು ಆ ಒಂದು ಜೀವ ಹಗಲು/ರಾತ್ರಿಯನ್ನಾದೆ ಎಷ್ಟೊಂದು ಕಷ್ಟಪಟ್ಟಿರಬಹುದು.
ಇವತ್ತು ನಾವೆಲ್ಲ ಬೆಳೆದಿದ್ದೇವೆ, ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿನೇ ಬೆಳೆದಿದ್ದೇವೆ, ಅಮ್ಮ ಜೊತೆ ಕೂತ್ಕೊಂಡು ಮಾತನಾಡೋಕು ಟೈಮ್ ಇಲ್ಲ...ಟೈಮ್ ಇದ್ರೂ ಏನಾಂತ ಮಾತಾನಾಡೋದು ಹೇಳಿ..ಅವಳಿಗೆ ಏನೂ ಗೊತ್ತಿದೆ ಅಂತ ಅವಳ ಜೊತೆ ಮಾತನಾಡಬೇಕು...ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಉದ್ಭವ ಆದರೂ ಕೊನೆಗೂ ಉತ್ತರ ಹುಡುಕುವಲ್ಲಿ ಸೋತು ಬಿಡುತ್ತೀವಿ...ಒಂದು ವಸ್ತು ಕಳೆದು ಕೊಂಡಾಗ ಮಾತ್ರ ಅದರ ಪ್ರಾಮುಖ್ಯತೆ ತಿಳಿಯುತ್ತೆ..ಇಂದು ನಾವೆಲ್ಲಾ ಮಾಡೊ ದೊಡ್ಡ ತಪ್ಪು ಇದೆ ತಾನೆ...
#ಚಿತ್ತಾರ
Heart rending ...
ReplyDelete