ದೇವರನಾಡಿನತ್ತ ನನ್ನ ಪಯಾಣ

                                     ದೇವರನಾಡಿನತ್ತ ನನ್ನ ಪಯಾಣ

ನೈಸರ್ಗಿಕ ಸೌಂದರ್ಯಕ್ಕೆ ಅಣಿಯಾಗಿರುವ ಕೇರಳ ತಾಣಕ್ಕೆ ಒಮ್ಮೆಯಾದರು ಭೇಟಿ ನೀಡಬೇಕು. ಅಲ್ಲಿಯ ಗಮರ್ಣೀಯ ಸ್ಥಳಗಳನ್ನು  ಸ್ವಾದಿಸಬೇಕು ಅನ್ನೂವುದು ನನ್ನ ಮಹದಾಸೆಯಾಗಿತ್ತು.
ಅದೇ ಕಾಲೇಜು, ಅದೇ ಕಾಸ್ಲ್, ಅದೇ ವಾತಾವರಣಕ್ಕೆ ಕೊಗ್ಗಿ ಹೋಗಿದ್ದ ನನ್ನ ಮನಸ್ಸುಗಳು ಕೇರಳದ ಕಡೆ ಮತ್ತಷ್ಟೂ ಮನಸೆಳೆಯುವಂತೆ ಮಾಡಿತ್ತು. ಬಾವಿ ಒಳಗಿನ ಕಪ್ಪೆಗಳಾಗಿ ಇದ್ದಂತಹ ನಾನು ಇತರೇ ರಾಜ್ಯಗಳ, ಭಾಷೆ, ಸಂಸ್ಕøತಿ ಬಗೆಗೆ ತಿಳಿಯಬೇಕೆಂಬದು ಮಹತ್ತರ ಕನಸ್ಸಾಗಿತ್ತು. ಇಂತಹದೊಂದು ಅದ್ಬುತ ಅವಕಾಶ ಒದಗಿದ್ದು ನನ್ನ ಗೆಳತಿಯ ಮದುವೆ. ಅವಳು ಮೂಲತಃ ಕೇರಳದವಳು. ಕರ್ನಾಟಕಕ್ಕೆ ಬಂದು ಕನ್ನಡ ಕಲಿತ ಮಲಿಯಾಳಿ ಕುಟ್ಟಿ ಆಕೆ. ಇವಳ ಮದುವೆಯ ಕರೆಯೋಲೆಯು ಬಂದಿದ್ದ ಸಲುವಾಗಿ ಫ್ರೆಂಡ್ಸ್ ಜೊತೆ ಸೇರಿ ಮದುವೆಗೆ ಹೊರಟು ನಿಂತೆವು.





ಅಂದು ಮಧ್ಯ ರಾತ್ರಿ ನನ್ನ ಗೆಳತಿಯರ ಜೊತೆ ಮಂಗಳೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ತ್ರಿಶೂರ್ ಕಡೆ ಹೋಗುವ ಬಸ್ ಹತ್ತಿಕೂತೆವು. ವಿಪರೀತ ಚಳಿಯ ನಡುವೆಯು ನೈಟ್ ಜರ್ನಿ ವಾವಾ! ಎಷ್ಟೊಂದು ನಜೂಕು. ತಂಪಾಗೆ ಬೀಸೊ ಗಾಳಿ, ಮೈಮನ ಚುಮುಕವಂತ ಚಳಿ ನಡುವೆಯೊ ಮುಂಜಾನೆ 6 ಗಂಟೆಯ ಸಮಯಕ್ಕೆ ಸರಿಯಾಗಿ ತ್ರಿಶೂರ್ ತಲುಪಿದೆವು. ಕೇರಳ ಹಾಗೇ ಇರುತ್ತೆ ಇಗೇ ಇರುತ್ತೆ ಅಂತ ನನ್ನ ಮನಸ್ಸು ಪ್ರಚಲಿಸುತ್ತ ಇದ್ದಾಗ ನಿಜ ಸ್ವರೂಪವನ್ನು ಕೊನೆಗೂ ಕಂಡೇ ತೀರಿದೆ. ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿದ್ದ ಕೇರಳ ಇದ್ದು ದೊಡ್ಡ-ದೊಡ್ಡ ಬಿಲ್ಡಿಂಗ್-ಕಟ್ಟಡಗಳ ನಡುವೆ ಕಂಗೊಳಿಸುತ್ತಿವೆ. ಕೇರಳ ಅನ್ನೊ ಹೆಸರುವಾಸಿ ಆಗಿದ್ದೆ ನೈಸರ್ಗಿಕ ಸೌಂದರ್ಯಕ್ಕೆ. ಅದರೆ ಇಂದು ಯಾವುದನ್ನು ಕಾಣಸಿಗುತ್ತಿಲ್ಲ.

ಹಣೆಯ ಮೇಲೆ ಅಡ್ಡ ನಾಮ, ವೈಟ್ ಲಂಗಿ ಕಟ್ಟಿ ಪಕ್ಕ ಸೈ ಎನಿಸಿಕೊಂಡಿರುವ ಕೇರಳ ಚೇಟಗಳು. ಅದೇ ವೈಟ್ ಸಾರಿ ಉಟ್ಟು, ಹಣೆ ಮೇಲೆ ಅಡ್ಡ ನಾಮ ಇಟ್ಟು. ಮುಡಿತುಂಬ ಮಲ್ಲಿಗೆ ಹೂವು ಮುಡಿದು ತನ್ನ ಸಂಸ್ಕøತಿಗೆ ಕೈಗನ್ನಡಿಯಾಗಿರುವ ಪಕ್ಕ ಕೇರಳ ಕುಟ್ಟಿಗಳು. ಇವರೇ ಎಲ್ಲಿ ನೋಡಿದಲ್ಲಿ ಇವರದೆ ದರ್ಭಾರು. ಒಂದು ವಿಷಯ್ಯಾನ ನಾನು ಗಮನಿಸಿದೆ ಅದೇ ಇಲ್ಲಿನ ಯಾವ ಹುಡುಗಿ ಕೂಡ ಹೈಫ್ಯಾಗಿ, ಜೀನ್ಸ್ ಫಾಟ್ ಹಾಕೊಂಡು ತಿರುಗಡುದನ್ನು ನಾ ಕಾಣಿಲ್ಲ, ಬರೀ ವೈಟ್ ಸಾರಿ, ಪಂಚೆ ಬಿಟ್ಟು ಬೇರೆ ಯಾವ ಉಡುಗೆಗಳನ್ನು ಧರಿಸಲ್ಲ ಕಾಣುತ್ತೆ. ಕೇರಳ ಜನತೆ ತನ್ನ ಸಂಸ್ಕøತಿಯನ್ನು ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ನೀಡುತ್ತಾರೆ ಎಂದು ತಿಳಿಯ ಬಲ್ಲದು. ಮುಂದೆ ನಡೆಂದಂತೆ ರಾಶಿ- ರಾಶಿ ಮೀನಿನಾ ಮಾರ್ಕೆಟ್ಗಳು, ನನ್ನ ಮನಸ್ಸನ್ನ ಮತ್ತಷ್ಟೂ ಸೆಳೆದಿದ್ದ ಸುಂದರವಾದ ಮರದ ಶೈಲಿ ಕೆತ್ತನೆಯಂತ ಮನೆಗಳ ಆಕೃತಿಗಳು.ವಾವ್! ಇಲ್ಲೇ ಇದ್ದು ಬಿಡುವ ಅನಿಸತೊಡಗಿತ್ತು.

ಕೊನೆಗೂ ನನ್ನ ಗೆಳತಿಯ ಮನೆಗೆ ಹೋದೆವು ಭಾಷೆ ತಿಳಿಯದಿದ್ದರೂ ನಗು ಮುಖದಲ್ಲೇ ನಮ್ಮನ್ನೇಲ್ಲ ಅವರ ಸಂಪ್ರದಾಯದಂತೆ  ಬರಮಾಡಿಕೊಂಡರು. ಭಾಷೆ ಅರಿಯದಿದ್ದರು ಮನಷ್ಯತ್ವ ನಮ್ಮಲ್ಲಿ ಅಡಗಿದಾಗ ಎಲ್ಲವೂ ನಮ್ಮನ್ನು ಅರ್ಥೈಯಿಸುವಂತೆ ಮಾಡುತ್ತದೆಯಂತೆ ಇಲ್ಲಿ ಅದೇ ನಡೆಯಿತ್ತು...ಬಗೆ ಬಗೆಯ ಕೇರಳ ಶೈಲಿಯ ತಿನಿಸುಗಳು ನಮಗಾಗಿ ಕಾಯುತ್ತಿದವು. ಅವರೊಡಗಿನ ಸಂಭಾಷಣೆ ಯಾವ ರೀತಿ ಇತ್ತೆದ್ದರೆ ನಾವು ನಮ್ಮ ಕನ್ನಡ ಭಾಷೆಯಲ್ಲಿ ಮಾತಾನಾಡುವುದರೆ ಅವರು ಮಲಿಯಾಳಿ ಭಾಷೆಯಲಿ ಪ್ರತಿಕ್ರಿಯೆ ನೀಡುತ್ತಿದ್ದರು. ನಮ್ಮ ರಾಜ್ಯ ಬೇರೆ ಇರಬಹುದು ,ನಮ್ಮ ನಡುವೆ ಭಾಷೆ, ಸಂಸ್ಕøತಿ ವಿಭಿನ್ನಿರಬಹುದು ಅದರೆ ಮನಸ್ಸು ಮಾತ್ರ ನಾವು ಭಾರತೀಯರು ಅನ್ನೋ ಭಾವ ನಮ್ಮ ಅವರ ನಡುವೆ ಪ್ರಜ್ವಲಿಸುತ್ತಿದ್ದವು.

ಗೆಳತಿಯ ಮದುವೆಯ ಸಂಭ್ರಮ ಸಡಗರದಲ್ಲಿ ಒಂದೊಂದು ಸಂಸ್ಕøತಿ ಸಂಪ್ರದಾಯಗಳು ಎಲ್ಲವೂ ವಿಭಿನ್ನ. ಅಷ್ಟೇಲ್ಲ ಒಡನಾಟದ ನಡುವೆಯು ನಮ್ಮನ್ನು ಗೌರವಿಸುದೇನು, ತಮ್ಮ ಮನೆಯವರ ತರ ಟ್ರೀಟ್ ಮಾಡುವಾಗ ಮನಸ್ಸಿಗೆ ಒಂಥರಾ ಖುಷಿ ನೀಡುತ್ತಿತ್ತು. ಮದುವೆ ಸಂಭ್ರಮ ಮುಗಿದ ಮೇಲೆ ನಾವೆಲ್ಲ ಸೇರಿ ಅತಿರಪ್ಪಲ್ಲಿ ಫಾಲ್ಸ್ ಕಡೆ ಸಾಗಿದೆವು.

ಅತಿರಪ್ಪಲ್ಲಿ ಜಲಪಾತದ ಮೈನೋಟ:
ಅತಿರಪ್ಪಲ್ಲಿ ಜಲಪಾತವು ಕೇರಳದ ಅತೀ ದೊಡ್ಡ ಜಲಪಾತ. ಇದು ತ್ರಿಶೂರ್ ಜಿಲ್ಲೆಯ ಚಲಕುಡಿ ತಾಲ್ಲೂಕಿನಲ್ಲಿದೆ. 80 ಅಡಿ ಎತ್ತರದಿಂದ ದುಮ್ಮುಕ್ಕಿ ಬೀಳೊ ನೀರಿಗೆ “ಭಾತರದ ನಯಾಗರಾ” ಎಂದು ಅಡ್ಡ ಹೆಸರು ಇಡಲಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಅತಿರಪ್ಪಿಲಿ ಜಲಪಾತವು ನೋಡುಗರ ಮೈಮನ ಸೆಳೆಯುವಂತೆ ಮಾಡುತ್ತೆ. ಈ ಸುಂದರ ಉದ್ಯಾನವನದೊಳಗೆ ಹೆಜ್ಚೆ ಇಟ್ಟಂತೆ, ಪ್ರಶಾಂತವಾದ ವಾತಾವರಣದಲ್ಲಿ ಕಂಗೊಳಿಸುವ ವಿವಿಧ ಮರಗಳ ನರ್ತನ, ಹಕ್ಕಿಗಳ ಚಿಲಿಪಿಲಿ ಎಲ್ಲಡೆ ನೋಡಿದರು ಸ್ವಚ್ಚತೆಯ ಕರೆ ನೋಟ ಮುಂದೆ ಸಾಗಿದಂತೆ ಈ ಜಲಪಾತದ ಬೊರುಗರೆಯುವ ಶಬ್ದ. ಇಷ್ಟೇಲ್ಲದೆ ಈ ಜಲಪಾತವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಪ್ರವಾಸಿಗರ ಆಗಮನ.




ಸುತ್ತ-ಮುತ್ತಲು ಹಚ್ಚ ಹಸಿರಿನ ಕಾಂತಿ ನಡುವೆ ಹಾಲಿನ ನೂರೆಯಂತೆ ದುಮುಕ್ಕಿ ಬೀಳುವ ನೀರಿನ ನೋಟವನ್ನು ಕಣ್ತುಂಬಿಕೊಳ್ಳುಬೇಕು. ಅತಿರಪ್ಪಿಲ್ಲಿ ಜಲಪಾತವು ಭಾರತದ ಟಾಪ್ ಫಿಲ್ಮ್ ಶೂಟಿಂಗ್ ಸ್ಥಳಗಳಲ್ಲಿ ಒಂದಾಗಿದೆ. ಈ ಸುಂದರ ಸ್ಥಳಕ್ಕೆ ಖ್ಯಾತಿಯನ್ನು ತಂದುಕೊಟ್ಟ ಹಿಟ್ ಚಲನಚಿತ್ರಗಳ ದೊಡ್ಡ ಪಟ್ಟಿ ಇದೆ. ಬಾಹುಬಲಿ ಚಿತ್ರೀಕರಣವನ್ನು ಈ ಅತಿರಪ್ಪಿಲ್ಲಿ ಜಲಪಾತದಲ್ಲೇ ಚಿತ್ರೀಕರಿಸಲಾಗಿದೆ. ಇಷ್ಟೇಲ್ಲದೆ ಹಲವಾರು ಫ್ರೀ ಮೆಡ್ಡಿಂಗ್ ಶೂಟಿಂಗ್‍ಗಳನ್ನು ಕೂಡ ಇಲ್ಲಿ ಮಾಡಲಾಗುತ್ತೆ. ಈ ಸುಂದರ ಜಲಪಾತವನ್ನು ನೋಡುತ್ತ ನಿಂತರೆ ಸಮಯ ಕಳೆದುಹೋದದ್ದೆ ಗೊತ್ತಗಲ್ಲ..ಅಲ್ಲಿಂದ ಹಿಂದು ಹೋಗಲು ಮನಸ್ಸೆ ಬರಲ್ಲ. ನಾವು ಅಲ್ಲಿಂದ ಸಂಜೆ ಕಳೆದ ಮೇಲೆ ಮರಳಿಬಂದೆವು. ಮನಸ್ಸೆಲ್ಲ ಎಲ್ಲೋ ಕಳೆದು ಹೋದಂತಹ ಸಂಕಟ ಯಾಕೆಂದರೆ ನಾವು ಕೇರಳಕ್ಕೆ ಬಂದು ಅವಾಗಲೇ ಒಂದು ವಾರ ಕಳೆದೆ ಹೋಯಿತಲ್ಲ..ಕೊನೆಗೂ ನಮ್ಮೂರ ಕಡೆ ಮುಖ ಮಾಡುವ ಸಂದರ್ಭ ಬಂದೆ ಬಿಟ್ಟಿತ್ತು. ಅಂದು ಸಂಜೆ ಕೇರಳದಿಂದ ಮಂಗಳೂರು ಕಡೆ ಹಿಂದು ತಿರುಗಲು ಬಸ್ ಆಗಲೇ ನಮ್ಮ ಮುಂದೆ ಬಂದು ನಿತ್ತಿತ್ತು..ಒಂದೆಡೆ ಬಸ್ ಹತ್ತಲೋ ಬೇಡುವೋ ಅನ್ನೊ ಬೇಜಾರು, ಕೊನೆಗೂ ಬಸ್ ಹತ್ತಿ ಕೊತೆವು. ಮಂಗಳೂರು ಬಂದು ತಲುಪಿದಾಗ ಬೆಳಿಗ್ಗೆ 6 ಗಂಟೆ. ಕೇರಳ ರಾಜ್ಯದಿಂದ ಹೊರ ಬರಲು ತುಂಬಾ ಸಮಯವೇ ಕಳೆಯಬೇಕಾಯಿತು. ಎಷ್ಟು ಆದ್ರೂ ನಮ್ಮ ರಾಜ್ಯವೇ ನಮಗೆ ಶಾಶ್ವತ ಅಲ್ವಾ.
         
                                                                      # ಚಿತ್ತಾರ

Comments

Post a Comment