ಮಾಸ್ಟರ್ ಲೈಫ್ ಡೈಮಂಡ್ ಲೈಫ್ಗೇ ಸಮ......

                                     ಮಾಸ್ಟರ್ ಲೈಫ್ ಡೈಮಂಡ್ ಲೈಫ್ಗೇ ಸಮ......

ಡಿಗ್ರಿ ಲೈಫ್‍ನಲ್ಲಿ ಮಾಡಿದ್ದ ಚೇಷ್ಠೆಗಳು ಅಷ್ಟು-ಇಷ್ಟುಲ್ಲ. ಡಿಗ್ರಿ ಲೈಫೇ ಅನ್ನುವುದು ಗೋಲ್ಡನ್ ಲೈಫ್ ಆದರೂ ಅದನ್ನು ಎಂದಿಗೂ ಮರೆ ಕೂಡದು. ವಿದ್ಯಾರ್ಥಿಗಳ ಜೀವನವೆಂಬುದು ನಿಂತ ನೀರಲ್ಲ ಅದು ಎಂದಿಗೂ ಹರಿಯುವ ನದಿ. ಹೀಗೇ ಹಲವಾರು ನದಿಗಳನ್ನು ದಾಟಿ ಸಮುದ್ರ ಸೇರುವ ಗುರಿ ಸ್ಟೂಡೆಂಟ್ ಲೈಫ್‍ನಲ್ಲಿ ಪ್ರಮುಖವಾಗಿರುತ್ತೆ. ಎಲ್.ಕೆ.ಜಿಯಿಂದ ಶುರುವಾದ ನಮ್ಮ ಪಯಣ ಮಾಸ್ಟರ್ ಡಿಗ್ರಿ, ಪಿ.ಹೆಚ್.ಡಿ ವರೆಗೂ ಮುಂದುವರೆಯುತ್ತಲೆ ಸಾಗುತ್ತೆ. ಈ ಸುಂದರ ಬದುಕಿನ ಏಳು-ಬೀಳುಗಳಲ್ಲಿ ಸೋಲು-ಗೆಲುವು ಕಟ್ಟಿಟ್ಟ ಬುತ್ತಿ. ಮುಂದೆ ಪದವಿ ಶಿಕ್ಷಣ ಪೂರ್ಣಗೊಳಿಸಿದಂತೆ ಮುಂದೇನು ಎಂಬ ಪ್ರಶ್ನೆ? ನಮ್ಮ ಸುತ್ತ ಸುತ್ತುವರಿಯುತ್ತೆ. ಹೇಗೋ ಒಂದು ಕಡೆ ಒದ್ದಾಡಿಯಾದರೂ ಮಾಸ್ಟರ್ ಡಿಗ್ರಿ ಕಡೆ ಕಾಲಿಡುತ್ತಿವಿ. ಹೊಸ ವಾತಾವರಣ, ಹೊಸ ಕಾಲೇಜು, ಹೊಸ ಫ್ರೆಂಡ್ಸ್ ಹಾಗೇ ಲೆಕ್ಚರ್ಸ್ ಎಲ್ಲವೂ ಅಪರಿಚಿತ. ಒಂದೆಡೆ ಡಿಗ್ರಿ ಫ್ರೇಂಡ್ಸ್ ಬಿಟ್ಟು ಬೇರೆ ಕಾಲೇಜಿನ ಕಡೆ ಮುಖ ಮಾಡಿದಾಗ ಹಳೆಯ ನೆನಪುಗಳು ಮರೆಯಾಲು ಯಾರಿಗೂ ಸಾಧ್ಯವಿಲ್ಲ.




ಹೀಗೆ ದಿನಗಳು ಕಳೆದಂತೆ ಹಳೆ ನೆನಪುಗಳ ಜೊತೆ ಹೊಸ ನೆನಪುಗಳು ಚಿಗುರೊಡೆಯಲು ಪ್ರಾರಂಭವಾಗುತ್ತೆ. ಹಾಲೋ, ಹಾಯ್, ಬಾಯ್‍ಯಿಂದ ಗುಡ್ ನೈಟ್, ಗುಡ್ ಮಾರ್ನಿಂಗ್‍ವರೆಗೂ ಹೊಸ ಗೆಳೆಯರ ಬಂಧವು ಮತ್ತಷ್ಟು ಗಟ್ಟಿಗೊಳಿಸುತ್ತೆ. ಇಲ್ಲಿ ನಮಗೆ ನಾವೇ ಲೆಕ್ಚರ್ಸ್, ಗೈಡ್ ಕೂಡ ನಾವೇ, ಪ್ರತಿಯೊಂದು ಹಂತದಲ್ಲೂ ನಮ್ಮನ್ನು ತಿದ್ದುವ ಜೊತೆ ಜೀವನದ ಪಾಠವನ್ನು ಕಲಿತ ಸಾಗುತ್ತವೆ. ಕೊನೆಗೂ ಮಾಸ್ಟರ್ ಲೈಫ್‍ನ್ನು 2 ವರ್ಷದಲ್ಲಿ ಹೇಗೆ ಕಳೆದು ಹೋಯಿತು ಅನ್ನುವುದು ತಿಳಿಯುವುದಿಲ್ಲ. ಮಾಸ್ಟರ್ ಲೈಫ್ ಕೂಡ ವಿದ್ಯಾರ್ಥಿಗಳ ಅಂತಿಮ ಬ್ಯಾಚುಲರ್ ಲೈಫ್ ಅಂತಾನು ಹೇಳಬಹುದು.

ಮಾಸ್ಟರ್ ಲೈಫ್ ನಾವು ಅಂದು ಕೊಂಡಾಗೆ ಯಾವುದೂ ಇಲ್ಲಿ ಇಲ್ಲ. ಡಿಗ್ರಿ ಲೈಫ್ ನಮಗೆ ಗೋಲ್ಡನ್ ಲೈಫ್ ಕೊಟ್ಟಿರಬಹುದು ಆದರೆ ಮಾಸ್ಟರ್ ಲೈಫ್ ನಮಗೆ ಒಳ್ಳೆ ಜೀವನದ ಪಾಠ ಜೊತೆ ಭವಿಷ್ಯದಲ್ಲಿ ಆಗು-ಹೊಗುಗಳನ್ನು ಎದುರಿಸುವ ಶಕ್ತಿ ಕಲ್ಪಿಸಿ ಕೊಟ್ಟಿದೆ. ಒಂದು ರೀತಿಯಲ್ಲಿ ಹೇಳಬೇಕಾದರೆ ಪಿ.ಜಿ ಲೈಫ್ ಅನ್ನುವುದು ಡೈಮಂಡ್ ಲೈಫ್ಗೂ ಸಮಾನ.





ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದಲ್ಲಿ ಎಷ್ಟೇ ಫ್ರೇಂಡ್ ಶಿಫ್ ಬೆಳೆಸಿದರೂ ಸಲಾದು, ಯಾಕೆಂದರೆ ಕೊನೆಗೂ ನಾವೇ ಒಬ್ಬರಾಗಿ ಬಿಡುತ್ತೇವೆ. ನಾವು ಕಂಡ ಕನಸನ್ನು ನನಸಾಗಿಸಲು ನಮಗೆ ಸಿಕ್ಕ ಉತ್ತಮ ವೇದಿಕೆ ಇದು. ಇಲ್ಲಿ ಯಾರು ನಮ್ಮವರಲ್ಲ ನಮಗಾಗಿ ಯಾರು ಇಲ್ಲ. ನಮ್ಮ ಹಾದಿಯಲಿ ನಾವೇ ನಡಿಬೇಕು. ಇಲ್ಲಿಂದಲೇ ನಮ್ಮ ಭವಿಷ್ಯದ ಮೊದಲ ಹಂತ ಪ್ರಾರಂಭವಾಗುತ್ತೆ. ಪ್ರತಿಯೊಂದು ಮೆಟ್ಟಿಲನ್ನು ದಾಟಿಯೇ ಮುಂದೆ ಸಾಗಬೇಕು. ಒಂಥಾರ ವಿದ್ಯಾರ್ಥಿ ಜೀವನ ಬಸ್ ಸ್ಟಾಪ್ ಇದ್ದಾಗೇ...ನಮ್ಮ ಸ್ಟಾಫ್ ಬಂದಾಗ ನಾವು ಇಳಿಯಲೇ ಬೇಕು ಅಥವಾ ಹತ್ತಲೇ ಬೇಕು.

ಹೀಗೆ ಎಲ್.ಕೆ.ಜಿ ಯಿಂದ ಶುರುವಾದ ನಮ್ಮ ಪಯಣ ಕೊನೆಗೂ ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳು ಘಳಿಗೆ ಬಂದೇ ಬಿಟ್ಟಿತ್ತು. ಸುಂದರ ಕಟ್ಟಡಗಳ ನಡುವೆ ಚಿಗುರೊಡೆದ ನಮ್ಮ ಸುಂದರ ಬದುಕಿನ ಹಾದಿಯಲಿ ಬೆಸ್ಟ್ ಫ್ರೇಂಡ್ಸ್, ಕ್ರಶ್, ಅಣ್ಣಂದಿರು-ಅಕ್ಕಂದಿರು...ಹೀಗೇ ಹಲವಾರು ಸಂಬಂಧಗಳ ನಡುವೆ ಸಣ್ಣ-ಪುಟ್ಟ ತುಂಟಾಟ, ಮುನಿಸುಗಳ ನಡುವೆ ಎರಡು ವರ್ಷ ಕಳೆದು ಹೋಯಿತು ಇನ್ನು ಬರೀ ಬ್ಯಾಚುಲರ್ ಲೈಫ್‍ನ ನೆನಪುಗಳು ಮಾತ್ರ. ಮಾಸ್ಟರ್ ಲೈಫ್ ಹಾಗೂ ಡಿಗ್ರಿ ಲೈಫ್‍ನ್ನು ಒಟ್ಟಿಗೆ ಹೋಲಿಸಿದಾಗ ನಮಗೆ ಉತ್ತಮ ರಿಸಲ್ಟ್ ಸಿಗುವುದೇ ಮಾಸ್ಟರ್ ಲೈಫ್ನಲ್ಲಿ ಮಾತ್ರ.
                     
                                                                         # ಚಿತ್ತಾರ

Comments