ನಗುತ್ತ ಹತ್ತಿದೆವು ಊಗಿಬಂಡಿ ...ಅಳುತ್ತ ಇಳಿದೆವು ಇಲಿಬಂಡಿ...

                                             

ದಿನೇ ಬೆಳಗಾದರೆ ಅದೇ ತುಂಬಿ ಹೋದ ಬಸ್ ಹತ್ತಿಕೊಂಡು ಎರ್ರಾ ಬಿರ್ರಿಯಾಗಿ ಸಾಗುತ್ತೇವೆ. ಬಸ್ ಸಂಚಾರಿಸುವ ಸಮಯದಲ್ಲಿ ಒಮ್ಮೆ ನನಗೆ ನೆನಪದ್ದು ರೈಲು ಬಂಡಿಯಲ್ಲಿ ಪ್ರಯಾಣಿಸಿದ ವಿರಳ ನೆನಪುಗಳು. ಇಷ್ಟು ವರ್ಷ ಅದರೂ ರೈಲ್‍ನಲ್ಲಿ ಪ್ರಯಾಣಿಸಲಿಲ್ಲ. ರೈಲ್‍ಲ್ಲಿ ಪ್ರಯಾಣಿಸುವ ಅನುಭವವನ್ನು ಬೆಳೆಸಬೇಕು ಅನ್ನೂವುದು ನನ್ನ ಪುಟ್ಟ ಕನಸ್ಸಾಗಿತ್ತು. ಇಂತಹ ಕೋರಿಕೆ ನಡುವೆಯು ನನಗೆ ಗುಜರಾತ್‍ನ ರಾಜ್‍ಕೋಟ್ನಲ್ಲಿ ನಡೆಯುವ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‍ನಲ್ಲಿ  ಭಾಗವಹಿಸಲು ನಮ್ಮ ಕಾಲೇಜಿನಿಂದ ಉತ್ತಮ ಅವಕಾಶ ಲಭಿಸಿತು. ಈ ಕ್ಯಾಂಪ್‍ನಲ್ಲಿ ಒಟ್ಟು ನಮ್ಮ ಕಾಲೇಜಿನಿಂದ ಸುಮಾರು 120 ವಿದ್ಯಾರ್ಥಿಗಳಲ್ಲಿ ನಾನು ಒಬ್ಬಳಾದೆ.

ಕ್ಯಾಂಪ್‍ಗೆ ಬೇಕಾಗುವ ಅಗತ್ಯ ವಸ್ತುಗಳನ್ನೆಲ್ಲ ಜೋಡಿಸಿ ಇಟ್ಟುಕೊಂಡೆ. ನಾವು ತೆರಳುವ ದಿನವು ಬಂದೇ ಬಿಟ್ಟಿತ್ತು. ಬೆಳಗ್ಗಿನ ಜಾವ ಅಂದರೆ ಸುಮಾರ 3 ಗಂಟೆ ಸರಿಯಾಗಿ ಆ ಚುಮು-ಚುಮು ಚಳಿಯಲ್ಲೂ ಮಂಗಳೂರು ರೈಲೂ ನಿಲ್ದಾಣ ಬಳಿ ತಲುಪಿದೆವು. ಅಂದೇ ನಾ ಕಂಡ ಮೊದಲ ರೈಲು ಟ್ರಾರ್ಕ್...ನಿಂತ ರೈಲನ್ನು ಕಂಡು ಒಮ್ಮೆ ಹತ್ತಿ ಕೂರಬೇಕನಿಸಿತ್ತು.





ಫ್ರೇಂಡ್ಸ್ ಜೊತೆ ಮಾತು ಹರಟೆ ಹೊಡೆಯುತ್ತಲೆ ನಾವು ಹೋಗುಬೇಕಾದ ರೈಲು ನಮ್ಮ ಮುಂದೆ ಬಂದು ನಿಂತೆ ಬಿಟ್ಟಿತ್ತು...ಹತ್ತ ಬೇಕಾದರೆ ಖುಷಿಯಿಂದ್ದ ನಮ್ಮ ಬಂಡಿಯನ್ನು ಹತ್ತಿ ಕೊತ್ತೆವು. ಮೊದಲು ರೈಲು ಹತ್ತ ಬೇಕಾದರೆ ತುಂಬಾ ಭಯವಾಗ ತೊಡಗಿತು. ಎಲ್ಲಿ ಕಾಲು ಎಡವಿ ರೈಲು ಪಟ್ಟೆಗೆ ಬೀಳುತ್ತೇನೊ ಎಂದು. ಅವಾಗಲೇ 5 ಗಂಟೆಯಾಗಿತ್ತು ಅದರಲ್ಲೂ ಅ ರೈಲುಲ್ಲಿ ಎಲ್ಲಿ ನಿಂದ್ದೆ ಬರುತ್ತೆ ಹೇಳಿ ವಿಪರೀತ ಶಬ್ದಕ್ಕೆ. ಎತ್ತ ಕಣ್ಣು ಹಾಯಿಸಿದಲ್ಲಿ ಜನರ ಜಂಗುಳಿ ಬೆಳಗಾದರೆ ಜನರ ಮುಖ ಕಾಣಲು ಶುರುವಾಗುತ್ತೆ, ಇಷ್ಟು ಮಂದಿ ಎಲ್ಲಿಂದ ಬಂದ್ರೂ ಮರ್ರೆ...ಸ್ವಲ್ಪ ಹೊತ್ತಲ್ಲಿ ನೋಡಿದ ಜನರು ಅರ್ಧ ಗಂಟೆ ಕಳೆದ ಮೇಲೆ ನೋಡಿದಾಗ ಮಂಗಮಾಯಾಗಿ ಬಿಡುತ್ತಾರೆ. ಇಲ್ಲಿ ಯಾರ ಗುರುತು ಪರಿಚಯನೊ ಇರಲ್ಲ. ಭಾಷೆಯಂತೂ ಮೊದಲೇ ಗೊತ್ತಿಲ್ಲ ನಾವು ಕನ್ನಡದಲ್ಲಿ ಮಾತನಾಡುವಾಗ ಕಣ್ಣು ಬಾಯಿ ಬಿಟ್ಟು ನೋಡೊ ಅದೇ ಜನರು...ಅವರು ಮಾತನಾಡುವಾಗ ನಾವು ಕದ್ದು ಕಿವಿಕೊಟ್ಟು ಕೇಳಿದರೂ ವ್ಯರ್ಥವಾಗಿರುತ್ತೆ.

ನಮ್ಮದೇ ಬೋಗಿಯಲ್ಲಿ ಕೂತು ಸಾಕಾದರೂ ಪಕ್ಕದ ಬೋಗಿಯಲ್ಲಿರೋ ಫ್ರೇಂಡ್ಸ್ ಜೊತೆ ಮಾತು ಹರಟೆ ಹೊಡೆದು ಹಿಂದು ತಿರುಗಿ ಬರುವಷ್ಟರಲ್ಲಿ ನಮ್ಮ ಜಾಗದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಮಂಕು ತಿಮ್ಮನಾಗೇ ಕೂತಿರುತ್ತಾನೆ. ಅವನ್ನು ಎದ್ದು ಎಬ್ಬಿಸುವ ಶಕ್ತಿ ನನ್ನಲ್ಲಿರಲಿಲ್ಲ, ಯಾಕೆಂದರೆ ನಮ್ಮ ಭಾಷೆ ಮೊದಲೇ ಅರ್ಥವಾಗದು. ಹಾಗೇ ಸುಮ್ಮನೆ ಬಂದು ಒಂದು ಕಡೆ ಕೂತು ಬಿಟ್ಟೇ. ರಾತ್ರಿ ಆಗುವವರೆಗೂ ಅ ವ್ಯಕ್ತಿ ಕೂತ ಸ್ಥಳದಿಂದ ಏಳುವುದೆ ಇಲ್ಲ. ಅವ ಏದ್ದು ಏಳುವರೆಗೂ ಮನಸ್ಸಿನಲ್ಲಿ ಎಷ್ಟೊಂದು ಶಾಪ ಇಟ್ಟ ನೆನಪು.
ಬೆಳಗಾದರೆ ಗಂಟೆಗೊಮ್ಮೆ ಟೀ, ಕಾಫಿ, ತಿಂಡಿ, ಊಟ ಎಂದು ಬೊಬ್ಬೆ ಹಿಡಿದು ಬರೋ ರೈಲಿನ ಅಡುಗೆ ಸಿಬ್ಬಂದಿಗಳ ಜೊತೆ ಎರ್ರಾಬಿರ್ರಿ ಬರೋ ಎಲ್ಲಾ ಭಾಷೆನಾ ಮಿಕ್ಸ್ ಮಾತಾನಾಡಿಯಾದರೂ  ತಿಂಡಿ ತಕ್ಕೊಳ್ಳುತ್ತೀವಿ.ಅವರಿಗೇ ಪೈಪೋಟಿ ನೀಡಲೇಂದು ಸ್ಟೇಷನ್‍ಗಳಲ್ಲಿ ಟ್ರೇನ್ ಏರುವ ಚಿಕ್ಕ ಪುಟ್ಟ ವ್ಯಾಪಾರಾಸ್ಥರನ್ನು ನಾ ಕೂಡ ಕಂಡೆ.
ಈ ನರಕದಿಂದ ಯಾವಾಗ 2 ದಿನ ಕಳೆದು ಹೋಗುತ್ತೆ ಅನಿಸತೊಡಗಿತ್ತು. ವಿಚಿತ್ರ ಮನುಷ್ಯರನ್ನು ನೋಡಿಯಾದರೂ ಒಂದುವರೆ ದಿನ ರೈಲಿನಲ್ಲಿ ಕಳೆದೆ  ತೀರಿತು. ದೂರದ ಬೆಟ್ಟು ಕಣ್ಣಿಗೆ ನೊಣ್ಣಗೆ ಅಂತಾರೆ ಹಾಗೇ ಆಯಿತು ನನ್ನ ಪರಿಸ್ಥಿತಿ. ದೂರದಿಂದ ವೇಗವಾಗಿ ಓಡೋ ರೈಲು ಕಂಡರೆ ವಾವ್ ಅನ್ನಬಹುದು, ಅದೇ ರೈಲಿನಲ್ಲಿ 2 ದಿನ ಕಳೆದ ಮಾತ್ರ ಗೊತ್ತಗುತ್ತೆ ಅದರ ಪರಿಸ್ಥಿತಿ ಏನೆಂದು. ರಾತ್ರಿ ಕಳೆದರೆ ಎಲ್ಲಿ ಕಳ್ಳರೂ ಬರುತ್ತಾರೆ ಅನ್ನೊ ಒಂದು ಕಡೆ ಭಯ ಜೋರಾಗೆ ಶುರುವಾಯಿತು. ಗೋವಾ ದಾಟಿದ ನಂತರ ಸಿಗೊ ಸುರಂಗ ಮಾರ್ಗನ ಗಮನಿಸಿದ್ರೆ ಅಯ್ಯೋ ದೇವ್ರೆ...ಎಂಥ ಸಂಕಷ್ಟಕ್ಕೆ ಸಿಲುಕಿಸಿದೆ ಒಮ್ಮೆ ಬೆಳಿಗ್ಗೆ ಆಗುವಷ್ಟು ಸಾಕಾಗಿ ಹೋಗಿತ್ತು. ಅದರ ನಡುವೆಯ ಮೈ ರೋಮಾಂಚನಗೊಳಿಸುವ ಕಲರ್ ಫುಲ್ ಲೈಟಿಂಗ್‍ಗಳಿಂದ ಸಿಂಗಾರರಿಸಿಗೊಂಡ ಮಹಾನಗರವನ್ನು ಒಮ್ಮೆ ಕಾಣಬೇಕು ಮನಸ್ಸೆಲ್ಲ ವಾವ್ ಅನಿಸತೊಡಗುತ್ತೆ.

ಮುಂಜಾನೆ 7 ಗಂಟೆ ಸರಿಯಾಗಿ ಗುಜರಾತ್ ತಲುಪಿದೆವು. ಅಲ್ಲಿಂದ ಸಂಜೆ 5 ಗಂಟೆ ಸರಿಯಾಗಿ ರಾಜ್‍ಕೋಟ್ ಕಡೆ ತಲುಪಲು ಇನ್ನೊಂದು ಟ್ರೇನ್ ಹತ್ತಬೇಕು..ನನ್ನನು ಕರೆಹೋಗಲು ಅಣ್ಣ ಬಂದಿದ್ದರು ಅಲ್ಲಿಂದ ನಾವು 3 ಜನ ಅಣ್ಣನ ಮನೆಗೆ ಹೋದೆವು. ಇದು 2 ದಿನದ ರೈಲು ಸಂಚಾರದ ಅನುಭವ ಮತ್ತೆ ಸಂಜೆ ಅದೇ ರೈಲು ಏರಬೇಕಿತ್ತು...ಗಂಟು ಮುಖ ಮಾಡಿಕೊಂಡು ಮತ್ತೆ ಅದೇ ರೈಲು ಏರಿದೆವು. ಇಲ್ಲಿ ನಮಗೆ ಇನ್ನೊಂದು ಸಂತೋಷ ಕಾಡಿತ್ತು ಅದೇ ನಾವೆಲ್ಲ ಕ್ಲಾಸ್, ಮೇಡಮ್ ಜೊತೆ ಜನರಲ್ ಬೋಗಿಯಲ್ಲಿ ನಗುತ್ತ ಮಾತನಾಡುತ್ತ ಆಟಡುತ್ತ ರಾಜ್ ಕೋಟ್ ಬಂದು ತಲುಪಿದ್ದೆ ಗೊತ್ತಗಲೇ ಇಲ್ಲ. ಎಂದೂ ಕಾಣ ಅರಿಯಾದ ವಿಪರೀತ ಚಳಿಯ ನಡುವೆಯು 12 ಸರಿಯಾಗಿ ರಾಜ್‍ಕೋಟ್ ಬಂದು ತಲುಪಿದೆವು. ಹೀಗೆ ಅದೆಷ್ಟೂ ನೆನಪು, ಅನುಭವಗಳು ನನ್ನ ಮನದಲಿ ತುಂಬಿ ತುಳುಕುತ್ತ ಇವೆ. ಎಲ್ಲವನ್ನೂ ಅನುಭವಿಸಿದ ಮಾತ್ರಕ್ಕೆ ಜೀವನಕ್ಕೊಂದು ಅರ್ಧ ಸಿಗುವ ವೇಳೆಯಲಿ ಸಾರ್ಥಕವಾಗುತ್ತೆ.

                                                                                #ಚಿತ್ತಾರ

Comments