Posts
Showing posts from April, 2020
ಅಮ್ಮ ನಿನ್ನ ಎದೆಯಾಳದಲಿ...
- Get link
- X
- Other Apps

ಅ ಮ್ಮ ಎನ್ನುವ ಪದವೇ ಒಂದು ಅದ್ಭುತ, ಜಗತ್ತಿನ ಪ್ರತಿಯೊಂದು ಮಗು ಜಗದ ತೊಟ್ಟಿಲಿಗೆ ಬಂದೊಡನೆ ಹೇಳುವ ಮಾತು ಅಮ್ಮ. ತನ್ನ ನೋವುನೆಲ್ಲ ಮರೆತು ಮಗುವಿನ ಮುಗ್ಧ ಮುಖದಲ್ಲಿ ಸಂತಸವನ್ನು ಕಾಣುವ ಮನಸ್ಸು ಅಮ್ಮನದು. ಒಂಬತ್ತು ತಿಂಗಳು ಹೊತ್ತು ಹೆತ್ತ ನಂತರ ಮಡಿಲಲ್ಲಿ ಮಲಗಿರುವ ಮಗು ಕಂಡೊಡನೇ ಆ ಒಂಬತ್ತು ತಿಂಗಳಯಾತನೆಯನ್ನು ಮರೆಯುವ ಮನಸ್ಸು ಅಮ್ಮನದು. ಕೆಲವೊಮ್ಮೆ ತಾನು ಹಸಿವಿನಿಂದಿದ್ದರೂ ಮಗುವಿನ ಹಸಿವು ನೀಗಿಸುವಂತ ಮಹಾತಾಯಿ. ಮಗು ತೆವಳುತ್ತಾ, ಅಂಬೆ ಗಾಲಿಡುತ್ತ ತನ್ನತ್ತ ಬರುತ್ತಿದ್ದರೆ ತಾಯಿಗೆ ಅದು ಸ್ವರ್ಗವೇ ಸರಿ. ಮಗುವಿನ ಆರೈಕೆಯಲ್ಲಿ ಅದೆಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುವ ತಾಯಿ ದೇವರಿಗಿಂತ ಮಿಗಿಲು . ನನ್ನ ಒಲವಿನ ಜೀವ ನೀನೆ...ನನ್ನದೆಯ ಉಸಿರು ನೀನೆ... ನಾ ಎಡವಿ ಬಿದ್ದಾಗ ಕೈ ಹಿಡಿದು ನಡೆಸಿದವಳು ನೀನೆ... ಈ ಸುಂದರ ಪಯಣದಲಿ ನೀನೇ ನನ್ನ ದಾರಿ ದೀಪ. ಕೊನಗೊ ಹರಸಾಹಸ ಪಟ್ಟೂ ನನ್ನ ಜೀವ ಉಳಿಸಿ ಮರು ಜೀವ ಕೊಟ್ಟ ಕರುಣಾಮಿ ನೀನೇ ಅಮ್ಮ... ಅಪ್ಪ ಇಲ್ಲದ ಆ ಕರಾಳ ನೆನಪುಗಳು ಅಮ್ಮನ ಆಸರೆಯಲ್ಲೇ ಬಂದಿಯಾಗಿಸಿತ್ತು. ಕಣ್ಣಂಚಿನ ಕಣ್ಣೀರು ಎಷ್ಟೇ ಮರೆಯಾದರೂ ನಿನ್ನ ಮನಸ್ಸಲ್ಲಿ ಅದೇಷ್ಟೂ ನೋವು ಗಟ್ಟಿಯಾಗಿ ಕೂತಿರಬಹುದು. ಗಂಡ ಕಳೆದುಕೊಂಡ ನೋವು,ಯ...
ಕಾಯಿನ್ ಬೂತ್ ‘ಲವ್ ಸ್ಟೋರಿ’
- Get link
- X
- Other Apps

ಕಾಯಿನ್ ಬೂತ್ ‘ಲವ್ ಸ್ಟೋರಿ’ ಕರ್ಣನಿಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ. ಅಂತಿಮ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ, ಅಪ್ಪನ ಜೊತೆ ಬೆಂಗಳೂರಿಗೆ ಹೊರಡುಲು ಸಿದ್ಧನಾಗುತ್ತಾನೆ. ಕರ್ಣನ ಅಪ್ಪ ಬೆಂಗಳೂರಿನಲ್ಲಿ ಸಣ್ಣ ಹೋಟೆಲಿನ ವ್ಯವಹಾರವನ್ನು ನೋಡಿಕೊಳ್ಳುತ್ತ ಇದ್ದರು, ಹೀಗಾಗೀ ಕರ್ಣನು ಮುಂದಿನ ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕಿ, ಅಪ್ಪ ಜೊತೆಗೆ ಹೋಟೆಲಿನಲ್ಲಿ ಕೆಲಸ ಮಾಡಲು ಮುಂದಾಗುತ್ತಾನೆ. ಮಗನ ಮೇಲಿನ ಪ್ರೀತಿಯಿಂದಾಗಿ ಕರ್ಣನಿಗೆ ಒಂದು ಮೊಬೈಲ್ ಫೋನನ್ನು ತೆಗೆದುಕೊಂಡುತ್ತಾರೆ. ಅಂದು ಭಾನುವಾರ ರಾತ್ರಿ ಕರ್ಣ ಟಾರೀಸ್ ಮೇಲೆ ಮಲಗಲು ಹೋಗುತ್ತಾನೆ. ಅವನ ಮೊಬೈಲ್ಗೆ ಒಂದು ನಂಬರ್‍ನಿಂದ ಕರೆ ಬರುತ್ತೆ, ಕರ್ಣನು ಆ ಕಾಲ್‍ನ್ನು ರಿಸೀವ್ ಮಾಡಿ...ಹಾಲೋ ಯಾರು ನೀವು....ಆ ಕಡೆಯ ಧ್ವನಿಯು ಹುಡಿಗಿಯ ಧ್ವನಿಯಂತೆ ಹಾಲೋ ಚಿಕ್ಕಪ್ಪ ನಾನು...ಕರ್ಣನಿಗೆ ಸಂಶಯ ಉಂಟಾಗಿತ್ತು...ಅರೇ ನೀವು ಯಾರು ಅಂತ ನನಗೆ ಗೊತ್ತು ಆಗಿಲ್ಲ...ಇದು ರಾಂಗ್ ನಂಬರ್ ಇರಬೇಕು...ಆಕೆ ಪುನಃ ಕೇಳಿದರು ಒಂದು ನಿಮಿಷ ನನ್ನ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ಇದು ಕಾಯಿನ್ ಬೂತ್‍ನಿಂದ ಕಾಲ್ ಮಾಡುತ್ತಿರುವುದು. ನನ್ನ ಒಂದು ರೂಪಾಯಿ ವ್ಯರ್ಥವಾಗಿ ಹೋಗುತ್ತೆ. ನಿಮ್ಮ ತುಂಬಾ ಚಂದ ಮಾತ್ತಾಡುತ್ತೀರಾ ಅರೇ ನೀವು ಕುಂದಾಪುರದವರಾ.. ಆಕೆಯ ಹೆಸರು ಕೇಳಿದಕ್ಕೆ ಏನೂ ಪ್ರತಿಕ್ರಯಿಸಿಲ್...
ದೇವರನಾಡಿನತ್ತ ನನ್ನ ಪಯಾಣ
- Get link
- X
- Other Apps

ದೇವರನಾಡಿನತ್ತ ನನ್ನ ಪಯಾಣ ನೈಸರ್ಗಿಕ ಸೌಂದರ್ಯಕ್ಕೆ ಅಣಿಯಾಗಿರುವ ಕೇರಳ ತಾಣಕ್ಕೆ ಒಮ್ಮೆಯಾದರು ಭೇಟಿ ನೀಡಬೇಕು. ಅಲ್ಲಿಯ ಗಮರ್ಣೀಯ ಸ್ಥಳಗಳನ್ನು ಸ್ವಾದಿಸಬೇಕು ಅನ್ನೂವುದು ನನ್ನ ಮಹದಾಸೆಯಾಗಿತ್ತು. ಅದೇ ಕಾಲೇಜು, ಅದೇ ಕಾಸ್ಲ್, ಅದೇ ವಾತಾವರಣಕ್ಕೆ ಕೊಗ್ಗಿ ಹೋಗಿದ್ದ ನನ್ನ ಮನಸ್ಸುಗಳು ಕೇರಳದ ಕಡೆ ಮತ್ತಷ್ಟೂ ಮನಸೆಳೆಯುವಂತೆ ಮಾಡಿತ್ತು. ಬಾವಿ ಒಳಗಿನ ಕಪ್ಪೆಗಳಾಗಿ ಇದ್ದಂತಹ ನಾನು ಇತರೇ ರಾಜ್ಯಗಳ, ಭಾಷೆ, ಸಂಸ್ಕøತಿ ಬಗೆಗೆ ತಿಳಿಯಬೇಕೆಂಬದು ಮಹತ್ತರ ಕನಸ್ಸಾಗಿತ್ತು. ಇಂತಹದೊಂದು ಅದ್ಬುತ ಅವಕಾಶ ಒದಗಿದ್ದು ನನ್ನ ಗೆಳತಿಯ ಮದುವೆ. ಅವಳು ಮೂಲತಃ ಕೇರಳದವಳು. ಕರ್ನಾಟಕಕ್ಕೆ ಬಂದು ಕನ್ನಡ ಕಲಿತ ಮಲಿಯಾಳಿ ಕುಟ್ಟಿ ಆಕೆ. ಇವಳ ಮದುವೆಯ ಕರೆಯೋಲೆಯು ಬಂದಿದ್ದ ಸಲುವಾಗಿ ಫ್ರೆಂಡ್ಸ್ ಜೊತೆ ಸೇರಿ ಮದುವೆಗೆ ಹೊರಟು ನಿಂತೆವು. ಅಂದು ಮಧ್ಯ ರಾತ್ರಿ ನನ್ನ ಗೆಳತಿಯರ ಜೊತೆ ಮಂಗಳೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ತ್ರಿಶೂರ್ ಕಡೆ ಹೋಗುವ ಬಸ್ ಹತ್ತಿಕೂತೆವು. ವಿಪರೀತ ಚಳಿಯ ನಡುವೆಯು ನೈಟ್ ಜರ್ನಿ ವಾವಾ! ಎಷ್ಟೊಂದು ನಜೂಕು. ತಂಪಾಗೆ ಬೀಸೊ ಗಾಳಿ, ಮೈಮನ ಚುಮುಕವಂತ ಚಳಿ ನಡುವೆಯೊ ಮುಂಜಾನೆ 6 ಗಂಟೆಯ ಸಮಯಕ್ಕೆ ಸರಿಯಾಗಿ ತ್ರಿಶೂರ್ ತಲುಪಿದೆವು. ಕೇರಳ ಹಾಗೇ...
ಮೊದಲ ವರ್ಷ ಬೆರಗು... ಎರಡನೇ ವರ್ಷ ಬೆಚ್ಚಗೆ... ಅಂತಿಮ ವರ್ಷ ವಿದಾಯದ ಬೇಸರ
- Get link
- X
- Other Apps

ಮೊದಲ ವರ್ಷ ಬೆರಗು, ಎರಡನೇ ವರ್ಷ ಬೆಚ್ಚಗೆ... ಅಂತಿಮ ವರ್ಷ ವಿದಾಯದ ಬೇಸರ ಲೈಟ್ ಆಗಿ ಮಳೆಗಾಲ ಶುರುವಾಗುವಾಗ ಮನಸ್ಸಲ್ಲೆಲ್ಲ ಏನೋ ಒಂಥರಾ ಖುಷಿ. ಫಸ್ಟ್ ಡೇ ಕಾಲೇಜಿಗೆ ಕಾಲು ಇಡುತ್ತೇವೆ. ಫಸ್ಟ್ ಡೇ ತರಗತಿಗೆ ಹಾಜರಾಗುತ್ತೇವೆ. ನಮ್ಮ ಒಬ್ಬರನ್ನು ಬಿಟ್ಟು ಅಲ್ಲಿರುವ ಎಲ್ಲರೂ ಏಲಿಯನ್ಸ್ ಅಂತ ಅನಿಸುತ್ತದೆ. ಒಂದು ಅಂತೂ ಸತ್ಯ. ಫಸ್ಟ್ ಡೇ ಕಾಲೇಜಲ್ಲಿ ಒಬ್ಬ ಬೆಸ್ಟ್ ಫ್ರೇಂಡ್, ಒಬ್ಬ ಬೆಸ್ಟ್ ಕ್ರಷ್, ಯಾವತ್ತೂ ಮರೆಯಲಾಗದಿರೊ ಬೆಸ್ಟ್ ಲೆಕ್ಚರ್ಸ್ ಸಿಗುತ್ತಾರೆ. ಹಾಗೇ ಮುಂದೆ ದೊಡ್ಡ ಗ್ಯಾಂಗ್ ಕೂಡ ರಚನೆಯಾಗಿಯೇ ಆಗುತ್ತದೆ. ದಿನಗಳೇನೂ ಮುಂದೆ ಹೋಗುತ್ತ ಇರುತ್ತದೆ. ಕಣ್ಣು ಬಿಡುವಷ್ಟರಲ್ಲಿ ಫಸ್ಟ್ ಇಂಟರ್ನಲ್ ಬಂದೇ ಬಿಡುತ್ತದೆ. ಅಬ್ಬಾಬ್ಬಾ ಇಂಟರ್ನಲ್ ಅಂದರೆ ಏನು ಅಂತಾನೆ ಗೊತ್ತಿರಲ್ಲ, ಅದನ್ನು ಹೇಗೋ ಕಷ್ಟಪಟ್ಟು ಫಾಸ್ ಆಗುತ್ತೀವಿ... ಫಸ್ಟ್ ಇಯರ್ ಅಲ್ಲಿ ಚೈಲ್ಡಗಳಾಗಿ ಇರುವ ನಾವು ಎರಡನೇ ವರ್ಷಕ್ಕೆ ಕಾಲಿಡುವಾಗ ಕಾಲೇಜಿನ ಅನೇಕ ವಿಚಾರಗಳನ್ನು ತಿಳಿದಿರುತ್ತೇವೆ. ಫ್ರೇಂಡ್ಸ್‍ಗೆ ನೋಟ್ಸ್ ಬರೆದು ...
ಮಾಸ್ಟರ್ ಲೈಫ್ ಡೈಮಂಡ್ ಲೈಫ್ಗೇ ಸಮ......
- Get link
- X
- Other Apps

ಮಾಸ್ಟರ್ ಲೈಫ್ ಡೈಮಂಡ್ ಲೈಫ್ಗೇ ಸಮ...... ಡಿಗ್ರಿ ಲೈಫ್‍ನಲ್ಲಿ ಮಾಡಿದ್ದ ಚೇಷ್ಠೆಗಳು ಅಷ್ಟು-ಇಷ್ಟುಲ್ಲ. ಡಿಗ್ರಿ ಲೈಫೇ ಅನ್ನುವುದು ಗೋಲ್ಡನ್ ಲೈಫ್ ಆದರೂ ಅದನ್ನು ಎಂದಿಗೂ ಮರೆ ಕೂಡದು. ವಿದ್ಯಾರ್ಥಿಗಳ ಜೀವನವೆಂಬುದು ನಿಂತ ನೀರಲ್ಲ ಅದು ಎಂದಿಗೂ ಹರಿಯುವ ನದಿ. ಹೀಗೇ ಹಲವಾರು ನದಿಗಳನ್ನು ದಾಟಿ ಸಮುದ್ರ ಸೇರುವ ಗುರಿ ಸ್ಟೂಡೆಂಟ್ ಲೈಫ್‍ನಲ್ಲಿ ಪ್ರಮುಖವಾಗಿರುತ್ತೆ. ಎಲ್.ಕೆ.ಜಿಯಿಂದ ಶುರುವಾದ ನಮ್ಮ ಪಯಣ ಮಾಸ್ಟರ್ ಡಿಗ್ರಿ, ಪಿ.ಹೆಚ್.ಡಿ ವರೆಗೂ ಮುಂದುವರೆಯುತ್ತಲೆ ಸಾಗುತ್ತೆ. ಈ ಸುಂದರ ಬದುಕಿನ ಏಳು-ಬೀಳುಗಳಲ್ಲಿ ಸೋಲು-ಗೆಲುವು ಕಟ್ಟಿಟ್ಟ ಬುತ್ತಿ. ಮುಂದೆ ಪದವಿ ಶಿಕ್ಷಣ ಪೂರ್ಣಗೊಳಿಸಿದಂತೆ ಮುಂದೇನು ಎಂಬ ಪ್ರಶ್ನೆ? ನಮ್ಮ ಸುತ್ತ ಸುತ್ತುವರಿಯುತ್ತೆ. ಹೇಗೋ ಒಂದು ಕಡೆ ಒದ್ದಾಡಿಯಾದರೂ ಮಾಸ್ಟರ್ ಡಿಗ್ರಿ ಕಡೆ ಕಾಲಿಡುತ್ತಿವಿ. ಹೊಸ ವಾತಾವರಣ, ಹೊಸ ಕಾಲೇಜು, ಹೊಸ ಫ್ರೆಂಡ್ಸ್ ಹಾಗೇ ಲೆಕ್ಚರ್ಸ್ ಎಲ್ಲವೂ ಅಪರಿಚಿತ. ಒಂದೆಡೆ ಡಿಗ್ರಿ ಫ್ರೇಂಡ್ಸ್ ಬಿಟ್ಟು ಬೇರೆ ಕಾಲೇಜಿನ ಕಡೆ ಮುಖ ಮಾಡಿದಾಗ ಹಳೆಯ ನೆನಪುಗಳು ಮರೆಯಾಲು ಯಾರಿಗೂ ಸಾಧ್ಯವಿಲ್ಲ. ಹೀಗೆ ದಿನಗಳು ಕಳೆದಂತೆ ಹಳೆ ನೆನಪುಗಳ ಜೊತೆ ಹೊಸ ನೆನಪುಗಳು ಚಿಗುರೊಡೆಯಲು ಪ್ರಾರಂಭವಾಗುತ್ತೆ. ಹಾಲೋ, ಹಾಯ್, ಬಾಯ್‍ಯಿಂ...
ನಗುತ್ತ ಹತ್ತಿದೆವು ಊಗಿಬಂಡಿ ...ಅಳುತ್ತ ಇಳಿದೆವು ಇಲಿಬಂಡಿ...
- Get link
- X
- Other Apps

ದಿನೇ ಬೆಳಗಾದರೆ ಅದೇ ತುಂಬಿ ಹೋದ ಬಸ್ ಹತ್ತಿಕೊಂಡು ಎರ್ರಾ ಬಿರ್ರಿಯಾಗಿ ಸಾಗುತ್ತೇವೆ. ಬಸ್ ಸಂಚಾರಿಸುವ ಸಮಯದಲ್ಲಿ ಒಮ್ಮೆ ನನಗೆ ನೆನಪದ್ದು ರೈಲು ಬಂಡಿಯಲ್ಲಿ ಪ್ರಯಾಣಿಸಿದ ವಿರಳ ನೆನಪುಗಳು. ಇಷ್ಟು ವರ್ಷ ಅದರೂ ರೈಲ್‍ನಲ್ಲಿ ಪ್ರಯಾಣಿಸಲಿಲ್ಲ. ರೈಲ್‍ಲ್ಲಿ ಪ್ರಯಾಣಿಸುವ ಅನುಭವವನ್ನು ಬೆಳೆಸಬೇಕು ಅನ್ನೂವುದು ನನ್ನ ಪುಟ್ಟ ಕನಸ್ಸಾಗಿತ್ತು. ಇಂತಹ ಕೋರಿಕೆ ನಡುವೆಯು ನನಗೆ ಗುಜರಾತ್‍ನ ರಾಜ್‍ಕೋಟ್ನಲ್ಲಿ ನಡೆಯುವ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‍ನಲ್ಲಿ ಭಾಗವಹಿಸಲು ನಮ್ಮ ಕಾಲೇಜಿನಿಂದ ಉತ್ತಮ ಅವಕಾಶ ಲಭಿಸಿತು. ಈ ಕ್ಯಾಂಪ್‍ನಲ್ಲಿ ಒಟ್ಟು ನಮ್ಮ ಕಾಲೇಜಿನಿಂದ ಸುಮಾರು 120 ವಿದ್ಯಾರ್ಥಿಗಳಲ್ಲಿ ನಾನು ಒಬ್ಬಳಾದೆ. ಕ್ಯಾಂಪ್‍ಗೆ ಬೇಕಾಗುವ ಅಗತ್ಯ ವಸ್ತುಗಳನ್ನೆಲ್ಲ ಜೋಡಿಸಿ ಇಟ್ಟುಕೊಂಡೆ. ನಾವು ತೆರಳುವ ದಿನವು ಬಂದೇ ಬಿಟ್ಟಿತ್ತು. ಬೆಳಗ್ಗಿನ ಜಾವ ಅಂದರೆ ಸುಮಾರ 3 ಗಂಟೆ ಸರಿಯಾಗಿ ಆ ಚುಮು-ಚುಮು ಚಳಿಯಲ್ಲೂ ಮಂಗಳೂರು ರೈಲೂ ನಿಲ್ದಾಣ ಬಳಿ ತಲುಪಿದೆವು. ಅಂದೇ ನಾ ಕಂಡ ಮೊದಲ ರೈಲು ಟ್ರಾರ್ಕ್...ನಿಂತ ರೈಲನ್ನು ಕಂಡು ಒಮ್ಮೆ ಹತ್ತಿ ಕೂರಬೇಕನಿಸಿತ್ತು. ಫ್ರೇಂಡ್ಸ್ ಜೊತೆ ಮಾತು ಹರಟೆ ಹೊಡೆಯುತ್ತಲೆ ನಾವು ಹೋಗುಬೇಕಾದ ರೈಲು...
ಹಣದಾಸೆ
- Get link
- X
- Other Apps

ಹಣದಾಸೆ ಸಂಪಿಗೆಪುರ ಎಂಬ ಸಣ್ಣ ಊರು. ಆ ಊರಿನಲ್ಲಿ ರಾಮಣ್ಣ ಎಂಬ ಕೂಲಿ ಕೆಲಸದವನು. ರಾಮಣ್ಣ ಒಬ್ಬನೇ ಕೂಲಿ ಕೆಲಸ ಮಾಡಿ ದುಡಿದು ದುಡ್ಡಿನಿಂದ ಆತನ ಹೆಂಡತಿ ಸೀತಮ್ಮ ಮತ್ತು ಒಬ್ಬನೇ ಮಗ ಮಹೇಶ ಜೀವನ ಸಾಗಿಸುತ್ತಿದ್ದರು. ಹೇಗೋ ಮಹೇಶ ಈ ಬಡತನದಲ್ಲಿಯೇ ಡಿಗ್ರಿಯವರೆಗೆ ವಿದ್ಯಾಭ್ಯಾಸ ಮುಗಿಸಿದನು. ಆದರೆ ಮಹೇಶನಿಗೆ ಹೆಚ್ಚು ಕಲಿಯುವ ಆಸೆ ಇದ್ದರೂ ಹೋಗಲು ದುಡ್ಡು ಇರಲಿಲ್ಲ. ಬಡತನವು ಕಿತ್ತು ತಿನ್ನುತ್ತಿತ್ತು. ಇಂತಹ ಬಡತನದಲ್ಲಿ ಬೆಳೆದ ಮಹೇಶನಿಗೆ ತಾನು ಹಣಗಳಿಸಬೇಕು. ಶ್ರೀಮಂತನಾಗಬೇಕು ಎಂಬ ಆಸೆ ಕೂಡ ಇತ್ತು. ಆದ್ದರಿಂದ ಮಹೇಶನಿಗೆ ಒಳ್ಳೆಯ ಸಂಬಳ ಬರುವ ಕೆಲಸ ಅನಿವಾರ್ಯವಾಗಿತ್ತು. ಅದಕ್ಕಾಗಿ ಕೆಲಸ ಹುಡುಕಾಡಿದನು. ಹಲವು ಕಡೆ ಇಂಟರ್‍ವ್ಯೂಗಳನ್ನು ಕೊಟ್ಟನು. ಮಹೇಶ ಇಷ್ಟ ಪಡುವಂತಹ ಕೆಲಸ ಸಿಗಲೇ ಇಲ್ಲ. ಸಿಕ್ಕಿದರೂ ಅದರ ಸಂಬಳ ಕಡಿಮೆ. ಅದಕ್ಕಾಗಿ ಮಹೇಶ ಒಳ್ಳೆಯ ಸಂಬಳ ಬರುವ ಕೆಲಸ ಹುಡುಕುವ ಪ್ರಯತ್ನ ಮುಂದುವರಿಸುತ್ತಾನೆ.ಎಲ್ಲಿಯೂ ಕೆಲಸ ಸಿಗದ್ದು ಒಂದು ಕಡೆ, ಇನ್ನೊಂದು ಕಡೆ ಊರಿನ ಜನರು ಕೊಂಕು ಮಾತುಗಳಿಂದ ಮಹೇಶನ ತಲೆಯೇ ಕೆಟ್ಟು ಹೋಗಿತ್ತು. ಮಹೇಶನಿಗೆ ಏನು ಮ...