ಕನಸ್ಸೆಂಬ ಕುದುರೆ ಏರಿದಾಗ...
ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕನಸು-ನನಸು ಒಂದು ಬೆಸ್ಟ್ ಫ್ರೇಂಡ್ ಅಂತಾನೆ ಹೇಳಬಹುದು. ಕನಸು-ನನಸು ಆಗುವುದಕ್ಕೂ ಎಷ್ಟು ವರ್ಷ ಕಾಯಬೇಕು. ಅದೇ ಕನಸು ಕಾಣುವುದಕ್ಕೂ ಒಂದು ನಿಮಿಷ ಸಾಕು. ಇದೇ ಅಲ್ವಾ! ಕನಸಿಗೂ-ನನಸಿಗೂ ಇರೋ ವ್ಯತ್ಯಾಸ. ಕನಸಿನ ಬೆನ್ನೇರಿ ಬೇಟೆ ಹೋದಾಗ ಅಲ್ಲಿ ಅಪರಿಚಿತರ ಆಗಮನ ಜೊತೆ ಭಯನೋ ಸೃಷ್ಟಿಯಾಗುತ್ತೆ. ಅತೀ ಆಳವಾಗಿ ಕನಸನ್ನು ಬೆನ್ನೇಟ್ಟಿ ಹೋದಾಗ ಭಯ, ಆತಂಕದ ಸೆರೆಯಲಿ ಬಂಧಿಯಾಗುತ್ತೇವೆ. ಮುಂಜಾನೆಯ ಕನಸ್ಸು ನಿಜವಾಗುತ್ತೆ ಅಂತರೆ ಹಿರಿಯರು, ಅದರಲ್ಲೂ ಕೆಟ್ಟದ್ದು, ಒಳ್ಳೆಯದ್ದು ಎಂಬ ಬೇಧ-ಭಾವವು ತುಂಬಿಕೊಂಡಿದೆ.
ಆ ದಿನ ರಾತ್ರಿ ವಿಪರೀತ ಕೆಲಸದ ಒತ್ತಡದಿಂದ ಮನೆಗೆ ಬೇಗ ಬಂದು ಕೂತ ಜಾಗದಲ್ಲೇ ನಿದ್ದೆಗೆ ಜಾರಿ ಹೋದೆ. ತೀರವಾದ ಕನಸೊಂದು ನನ್ನನೂ ಕೊಂಡುಹೊಗಿದ್ದು ಅದೇ ನಮ್ಮೂರ ಹಳೇ ಬಸ್‍ಸ್ಟಾಂಡ್ ಬಳಿ. ಕನಸಲ್ಲಿ ಮಾತು ಇಲ್ಲ ಕಥೆಯಿಲ್ಲ ಬರೀ ಮೌನವೇ ಸಂಭಾಷಣೆ. ಇಲ್ಲಿ ಕೊನೆ ಅನ್ನುವುದೇ ಇಲ್ಲ. ನಮಗೆ ಯಾವಾಗ ಎಚ್ಚರ ಆಗುತ್ತೊ ಅದೇ ಕನಸಿಗೂ ಕೊನೆ ಹಂತ. ಹೀಗೆ ನಾನು ಕನಸನ್ನು ಬೆನ್ನೇಟ್ಟಿ ಹೋದ ಸಂದರ್ಭದಲ್ಲಿ ಯಾರೋ ನನ್ನನಾ ಕರೆದಾಗೆ ಕೆಳಿಸಿತ್ತು ಮತ್ತೆ ಅದೇ ಕೂಗೊ ಧ್ವನಿ. ಹಿಂದೆ ತಿರುಗಿ ನೋಡಿದಾಗ ಯಾರೂ ಇಲ್ಲ, ಮತ್ತೆ ಅದೇ ಕೂಗೊ ಧ್ವನಿ...ಮತ್ತೊಮ್ಮೆ ಹಿಂದಿರುಗಿ ನೋಡಿದಾಗ ಯಾರೋ ಬಬ್ಬ ಅಪರಿಚಿತ...ನನಗೊ ಅವನ ಪರಿಚಯನೊ ಇಲ್ಲ..ಅವನಿಗೆ ನನ್ನ ಪರಿಚಯ ಇರುವಾಗೆ ನನ್ನ ಜೊತೆ ಮಾತಾನಡುತ್ತ, ನಗುತ್ತ ಇದ್ದ. ನೋಡೋಕೆ ನನ್ನಕ್ಕಿಂತ ಎತ್ತರವಾಗಿ ಕಾಣುತ್ತಿದ್ದ. ಹೀಗೆ ವಿಶಾಲ ಹಾದಿಯಲಿ ನಾವಿಬ್ಬರು ಮಾತಾನಾಡುತ್ತ ಮುಂದೆ ಸಾಗಿದೆವು. ಏನೋ ಮಾತಾನಾಡಿದೆವು ಅನ್ನೊವುದು ನನಗೆ ಪರಿವೆ ಇಲ್ಲವಾಯಿತು. ಅ ಕನಸಲ್ಲಿ ನಾವಿಬ್ಬರೂ ಕೈ ಹಿಡಿದುಕೊಂಡು ನಡೆಯ ತೊಡಗಿದೆವು, ದಾರಿ ಉದ್ದಕ್ಕೂ ಮೌನವೇ ಮಾತಾಯಿತು. ನಡೆದೆವು ಕಾಲು ನೋಯುವವರೆಗೂ ಅವನ ಜೊತೆ ನಡೆದೆ ಎಲ್ಲಿಯೂ ನಿಂತು ಕೂತು ಮಾತನಾಡಲಿಲ್ಲ. ಯಾರ ಸದ್ದು ಕೇಳಿಸುತ್ತ ಇಲ್ಲ. ಅವ ಏನೋ ನನ್ನ ಬಳಿ ಹೇಳುತ್ತ ಇರುವುದನ್ನ ನಾ ಎಷ್ಟೇ ಗಮನಿಸದರೂ ವ್ಯರ್ಥವಾಗಿ ಹೋಯಿತು ಕೊನೆಗೂ ಕೇಳುಸುವಂತಿಲ್ಲ ಅವನ ಧ್ವನಿ. ಒಂದೆಡೆ ಮುಖದಲ್ಲಿ ಕಾಣೋ ಭಯದಿಂದ ಮೈ ಎಲ್ಲ ಬೆವರಿಳಿಯುತ್ತಿತ್ತು. ಅದರ ನಡುವೆಯು ಅವನ ಕಿರು ನಗೆ...
ಇಂತಹ ವಿಚಿತ್ರ ಕನಸ್ಸುಗಳ ನಡುವೆಯು ಭಯದ ಮುನ್ಸೂಚನೆ, ಖುಷಿಯ ತಲ್ಲಣ, ಏನೇನೋ ಸನ್ನಿವೇಶಗಳು ಮರುಕಳಿಸುತ್ತೆ. ಕಣ್ಣಿಟ್ಟು ನೋಡುವಲ್ಲಿ ಅವನೇ ಮಾಯಾ ಜಿಂಕೆಯಂತೆ ಮಾಯಾವಾಗಿ ಬಿಟ್ಟ. ಅದೇ ಏನಾದರೂ ಖುಷಿ ವಿಚಾರ ಇದ್ದಲ್ಲಿ ಈಡೀ ದಿನ ಖಷಿಯಲ್ಲೇ ಮುಳುಗೋತ್ತೆವೆ, ಅದೇ ಬೇಜಾರು ಸಂಗತಿ ಇದ್ದಾಗ ಅಂದಿನ ದಿನವೇ ಮೂಡ್ ಆಫ್ ಆಗಿರುವುದಕ್ಕೆ ಕಾರಣವೇ ಇಲ್ಲ.
ನಾನು ಮುಂಜಾನೆ ಎದ್ದ ಕೂಡಲೇ ಅದೇ ಕನಸೊಂದು ನನ್ನನು ಮತ್ತಷ್ಟೂ ಕಾಡುವಂತೆ ಮಾಡಿತ್ತು. ಯಾರು ಆ ಹುಡುಗ? ಯಾಕೆ ನನ್ನ ಕನಸಲ್ಲಿ ಕಾಡುತ್ತಿದ್ದನೆ ಮತ್ತಷ್ಟೂ ಯೋಚಿಸುವಷ್ಟರಲ್ಲಿ ಗಡಿಯಾರ ಸದ್ದು ಮಾಡಲು ಶುರುವಾಗುತ್ತದೆ.
ನಿದ್ದೆ ಮಾಡಿ ಕಾಣುವುದರ ಕನಸ್ಸು, ನಿದ್ದೆ ಮಾಡಿ ಕೆಡಿಸುವ ಹಾಗೇ ಆಗಬೇಕು ನನಸ್ಸು.
#ಚಿತ್ತಾರ
Comments
Post a Comment