ನಾ ‘ಮೌನಿ’


ಅದೊಂದು ದಿನ ನಾನು ಸೈಕಲ್ ಏರಿಕೊಂಡು ಸುಂದರವಾದ ಗಾರ್ಡನ್ ಬಳಿ ಸವಾರಿ ಮಾಡುಕೊಂಡು ಬರುತ್ತಿರಬೇಕಾದರೆ, ಯಾರೊ ಅಪರಿಚಿತ ಹುಡುಗ ನನ್ನನೂ ಹಿಂಬಾಳಿಸಿಕೊಂಡು ಬರುತ್ತಿದ್ದನೂ ಪ್ರತಿ ದಿನ ನೋಡುತ್ತಿದ್ದೆ. ನಿಂತೂ ಮಾತಾನಾಡಿಸೊ ಶಕ್ತಿ ನನ್ನಲ್ಲಿ ಇರಲಿಲ್ಲ. ಯಾವುದನ್ನು ಲೆಕ್ಕಿಸದ ನಾನು ಪಾರ್ಕ್ ಬಳಿ ಇರೋ ಬೇಚ್ ಮೇಲೆ ನನ್ನ ಪಾಡಿಗೆ ಬಂದು ಕೂತೇ. ನಿಸರ್ಗದ ಚಿತ್ರ ಗೀಚುವುದೆಂದರೆ ನನ್ನ ನೆಚ್ಚಿನ ಹವ್ಯಾಸ. ತನ್ನ ಪಾಡಿಗೆ ತಾನು ಬಿಳಿ ಹಾಲೆಯೊಂದರಲ್ಲಿ ಪ್ರಕೃತಿಯ ಸ್ವರೂಪವನ್ನು ಚಿತ್ರಿಸಿಸಲ್ಪಡುವ ವೇಳೆಯಲಿ, ನನ್ನನೂ ಹಿಂಬಾಲಿಸಿಕೊಂಡು ಬರುತ್ತಿದ್ದ ಅದೇ ಹುಡುಗ ತಾನು ಕೂತ ಜಾಗದಲ್ಲೇ ಕೂತುಬಿಟ್ಟ. 
ಈ ಸುಂದರ ಪ್ರಕೃತಿಯ ನಡುವೆ ನಮ್ಮಿಬ್ಬರ ಸಂಭಾಷಣೆಯು ನಿಶಬ್ದಕ್ಕೆ ಕಾರಣವಾಯಿತು. ಹಕ್ಕಿಗಳ ಚಿರಾಟದ ನಡುವೆಯು ತನ್ನ ಪಾಡಿಗೆ ಹಾಯಾಗಿದ್ದ ಸಮಯದಲಿ, ಆ ಹುಡುಗ ತನ್ನ ಬಳಿ ಏನೋ ಮಾತನಾಡಲು ತುಂಬಾ ಕನವರಿಸುತ್ತಿದ್ದ. ಮಾತು ಹೇಗೆ ಶುರು ಮಾಡಲಿ ಅನ್ನುವುದೊರಳಗೆ ಅವನ ಕಣ್ಣಿಗೊಂದು ಪುಟ್ಟ ಚೀಟಿ ಕಾಣಿಸಿತು. ಇಲ್ಲಿ ನಮ್ಮಿಬ್ಬರ ನಡುವಿನ ಸಂಭಾಷಣೆ ಶುರುವಾಗಿದ್ದೆ ತುಂಡು ಹಾಳೆಯೊಂದರಲಿ. ‘ಹಾಯ್’ ಎಂದು ಗೀಚಿ ನಿಧಾನವಾಗಿ ನನ್ನ ಬಳಿ ಸವರಿದ...ತಾನು ಆ ಚೀಟಿ ವ್ಯವಹಾರದ ಕಡೆ ತಲೆಕೊಡದ ತನ್ನ ಪಾಡಿಗೆ ಚಿತ್ರ ಬಿಡಿಸುತ್ತಿದ್ದೆ. ಅವನ ಮೊದಲ ಪ್ರಯತ್ನ ವಿಫಲ ಅದೀತು ಅನಿಸಿರಬೇಕು. ಪುನಃ ಅದೇ ಚೀಟಿಯೊಳಗೆ ಡೈರಿ ಮಿಲ್ಕ್ ಇಟ್ಟು ನನ್ನ ಪಕ್ಕಕ್ಕೆ ಸರಿದ. ಎಷ್ಟು ಅಂತ ಹೇಳಿ ಅ ಜೀವನ ನೋಯಿಸುವುದು ಆ ಚೀಟಿ ಜೊತೆ ಚಾಕೊಲೇಟ್ ಎತ್ತಿ ‘ಹಾಲೋ’ ಎಂದು ಪ್ರತಿಕ್ರಯಿಸಿದೆ. 


ಈ ಚಾಕೊಲೇಟ್ ಅನ್ನೊದು ಲವರ್ಸ್‍ಗಳ ನಡುವೆ ಒಂದು ಸಂಕೇತ ಇದ್ದಂತೆ, ಚಾಕೊಲೇಟ್ ಕೊಟ್ಟು ಪ್ರೀತಿನ ಬಲೆ ಬಿಳಿಸುವಲ್ಲಿ ಹುಡುಗರೇ ಸೈಯಪ್ಪ. ಅಷ್ಟಕ್ಕೆ ಮುಗಿಯುತ್ತೆ ಅಂದುಕೊಂಡಿದ್ದ ನಾನು ಪುನಃ ಅದೇ ಚೀಟಿಯಲ್ಲಿ ‘ನಿಮ್ಮ ಹೆಸರು ಏನು” ಎಂದು ಬರೆದು ನನ್ನ ಬಳಿ ಕೊಟ್ಟ, ಅವನ ಪ್ರಶ್ನೆಗೆ ತನ್ನ ಬಳಿ ಉತ್ತರವೆ ಮೌನವಾಯಿತು. ಮತ್ತೊಂದು ಚಾಕೊಲೇಟ್ ಇಟ್ಟು ಸರಿಸಿದ ನನ್ನ ಬಳಿ... ಮುಗುಳುನಗೆಯಿಂದ ‘ನಾ ಮೌನಿ’ ಎಂದು ಬರೆದು ಕಳಿಸಿದೆ. ಈ ಮುದ್ದು ಪ್ರೀತಿಗಳ ನಡುವೆ ಇಂತಹ ಚಾಕೊಲೇಟ್‍ಗಳು ಎಂಟ್ರಿ ಕೊಟ್ರೆ ಎಂತಹ ಕೋಪ ಕೂಡ ನೀರಾಗೆ ಹೋಗುತ್ತೆ ಅಲ್ವಾ!!... ತನ್ನ ಬಳಿ ಇನ್ನೂ ಏನಾದರೂ ಕೇಳಿಬಿಡುತಾನೊ ಅನ್ನೂವಷ್ಟರಲ್ಲಿ ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ.
ದಿನಗಳು ಸಾಗಿದ್ದಂತೆ ಅದೇ ಜಾಗದಲ್ಲಿ ನಮ್ಮಿಬ್ಬರ ಭೇಟಿ ಸಹಜವಾಯಿತು. ನಾನು ಅವನ್ನ ಮಾತಾನಾಡಿಸುತ್ತ  ಇರಲಿಲ್ಲ ಅವನು ನನ್ನನೂ ಮಾತಾನಾಡಿಸುತ್ತ ಇರಲಿಲ್ಲ, ಆದರೂ ನಾಮಿಬ್ಬರೂ ಮಾತಾನಾಡುತ್ತ ಇದ್ದೇವು. ಅದೇ ಬರೀ ತುಂಡು ಹಾಲೆಯೊಂದರಲಿ. ಆ ಪುಟ್ಟ ಚೀಟಿಯ ಸಂಭಾಷಣೆಯಲಿ ನಾಮಿಬ್ಬರೂ ಪ್ರೀತಿಗೆ ಬಲಿಯಾದೆವು.


ದಿನೇ ಬೆಳಗಾದರೆ ಅದೇ ರೋಡಲಿ ನಾನು ಸೈಕಲ್ ಏರಿಕೊಂಡು ಬರುತ್ತಿದ್ದಾಗ. ನನ್ನನೂ ಕಂಡು ಮಂಜಿನಂತೆ ಕರಗುತ್ತಿದ್ದ. ಅವನ ಕಣ್ಣಿಗೆ ಬೀಳಬಾರದು ಅಂದುಕೊಂಡ ನಾನು....ಆದರೆ ಅವನು ಮಾತ್ರ ನನ್ನನೂ ಹಿಂಬಾಲಿಸುವುದನ್ನು ಮಾತ್ರ ಬಿಡುವಂತಿಲ್ಲ. ಮನಸ್ಸಲಿ ಬಚ್ಚಿಟ್ಟ ಪ್ರೀತಿನಾ ತನ್ನ ಬಳಿ ಹೇಳಲೂ ಸಂಕೋಚ ಅನಿಸಿರಬಹುದು.


ಅದೇ ಜಾಗದಲ್ಲಿ ನಾವಿಬ್ಬರೂ ಭೇಟಿಯಾಗಿದ್ದು ಕೊನೆ ಅನಿಸುತ್ತೆ. ಕೊನೆಗೂ ಅವನ ಮನಸಲ್ಲಿದ್ದ ಪ್ರೀತಿನ ಮುಚ್ಚು ಮರೆಯಿಲ್ಲದೆ ನನ್ನ ಬಳಿ ಹೇಳೇ ಬಿಟ್ಟ. ನಿನ್ನ ಹೆಸರು ಕೇಳಿದಕ್ಷಣದಿಂದ ನಾ ನಿನ್ನನಾ ತುಂಬಾ ಪ್ರೀತಿಸಿದ್ದೀನಿ ಮೌನಿ...ನಿನ್ನ ಜೊತೆ ಮಾತಾನಾಡಬೇಕು...ನನ್ನ ಪ್ರೀತಿನ ಒಪ್ಪುಕೊಳ್ಳುತ್ತಿಯಲ್ಲ ಮೌನಿ...ಮಾತನಾಡು ಮೌನಿ..ಮಾತನಾಡು..ನಿನ್ನ ಧ್ವನಿ ಕೇಳಬೇಕು...ಯಾಕೆ ಮಾತು ಬರಲ್ಲವ ನಿಂಗೆ..ಅಂತೆಲ್ಲ ಸಾವಿರಾರು ಪ್ರಶ್ನೆಗಳನ್ನು ನನ್ನ ಮುಂದೆ ಇಟ್ಟ. ನಾ ಹೇಗೆ ಮಾತನಾಡಲಿ...ನಾನು ಮೂಗಿ ಅಂತ ಅವನಿಗೆ ಹೇಗೆ ತಿಳಿಸಲಿ...ಈ ಪ್ರೀತಿನ ಒಪ್ಪುಕೊ ಶಕ್ತಿ ನನ್ನ ಅಲ್ಲಿ ಇದೆಯೊ ಅಥವಾ ಆ ಪ್ರೀತಿ ಪಡೆದುಕೊಳ್ಳುವಷ್ಟು ಅರ್ಹತೆ ನನ್ನಲ್ಲಿ ಇಲ್ಲ ಅನಿಸಿತ್ತು. ನನಗೆ ಮಾತುಬರಲ್ಲ ಎಂದು ಅ ಮುಗ್ದ ಮನಸ್ಸನ್ನ ಹೇಗೆ ನೋಯಿಸಲಿ, ಇದುವರೆಗೂ ನಾನು ಆಸೆ ಪಟ್ಟಿದ್ದು ಏನೂ ಹೇಳುಕೊಳ್ಳುಕ್ಕೆ ಹಾಗಿಲ್ಲ. ನೀನು ನನಗೆ ಎಲ್ಲದಕ್ಕಿಂತ ಇಷ್ಟಂತ ನಾನು ಹೇಗೆ ಹೇಳಲಿ ಎಂದು ಮನಸಲ್ಲೇ ಮಾತನಾಡ ತೊಡಗಿದೆ...ನನಗೊ ಆ ಪ್ರೀತಿನಾ ಒಪ್ಪುಕೊಳ್ಳಬೇಕಂತ ತುಂಬಾ ಮನಸ್ಸಿದೆ ಆದರೆ ನಾನು ಏನು ಮಾಡಲಿ...ಕೊನಗೊ ನಾ ಹೇಳಿ ಬಿಟ್ಟೇ ನನಗೆ ಮಾತು ಬರಲ್ಲ ಅಂತ. ನೀನು ಹೇಳಿದಾಗೆ ನನಗೆ ಮಾತು ಬರಲ್ಲ ಎಂದು ಕೈ ಸನ್ನೆ ಮುಖಾಂತರ ಅವನಿಗೆ ತಿಳಿಸಿದೆ.. ನನಗಾಗಿ ತಂದ ಗುಲಾಬಿ ಹೂ ಪಟ್ಟನೆ ಕೆಳ ಬಿಳುವಷ್ಟರಲ್ಲಿ ನಾನು ಅಲ್ಲಿಂದ ಜಾಗ ಖಾಲಿ ಮಾಡಿಬಿಟ್ಟೆ. ಮತ್ತೆ ಎಂದು ಹಿಂದೆ ತಿರುಗಿ ನೋಡಾದೆ ಮುಂದು ನಡೆದೆ.

ತನ್ನ ನಿಜಾಂಶ ತಿಳಿದ ಹುಡುಗನ ಮನಸ್ಸು ಎಷ್ಟೊಂದು ಗಾಸಿಗೊಂಡಿರಬಹುದು, ನಾನು ಎಂಥ ತಪ್ಪು ಮಾಡಿ ಬಿಟ್ಟೆ...ಪ್ರೀತಿ ಪಡೆಯೋಕೆ ಯೋಗ್ಯತೆ ಬೇಕು. ದಾರಿ ಉದ್ದಕ್ಕೂ ಅವನ ನೆನಪಲ್ಲೇ ಮುಂದೆ ನಡೆದೆ.
ಮನಸ್ಸುಗಳಿಗೆ ಮಾತನಾಡೊ ಶಕ್ತಿ ಕೊಟ್ಟಿದ್ದಾನೆ ಆ ದೇವರು, ಆದರೆ ನಂಗೆ ಮಾತನಾಡೋ ಶಕ್ತಿ ಯಾಕೆ ಕೊಟ್ಟಿಲ್ಲ ಎಂಥಾ ದುರದೃಷ್ಟದವಳು ನಾನು...ಹೀಗೆ ದಿನ ಕಳೆದಂತೆ ನಾಮಿಬ್ಬರೂ ದೂರ-ದೂರಾಗಿ ಮೌನಿಯಾದೆವು..

ನೆನಪುಗಳೆ ಕಳೆದು ಹೋದಂತ ಸಮಯದಲಿ ಕೊನೆಗೂ ನಾ ಪ್ರೀತಿಸಿದ ಆ ಒಂದು ಪುಟ್ಟ ಹೃದಯ ನನಗಾಗಿ ಮತ್ತೆ ಅದೇ ಜಾಗದಲಿ ಕಾಯುತ್ತಿತ್ತು. ನಾನು ಮೂಗಿ ಎಂದು ನೀನು ಎಲ್ಲಿ ದೂರ ಆದೆ ಎಂದು ಭಾವಿಸಿದ ಅ ಕ್ಷಣ ಮಾತ್ರದಲಿ ನೀನು ನನ್ನ ಕೈ ಹಿಡಿಯಲು ಮತ್ತೆ ಬಂದೆಯ ಗೆಳೆಯ...ನನಗಾಗಿ ನೀನು ಮೂಗುನಂತೆ ನಟಿಸಿ ನನ್ನ ಪ್ರೀತಿಯನ್ನು ಉಳಿಸಿಬಿಟ್ಟೆ...ನನ್ನನೂ ಈ ಜಗತ್ತಿನಲ್ಲಿ ಒಬ್ಬಳಂತೆ ನೋಡೆ ಬಿಟ್ಟೆ.. ನಿನಗೆ ಹೇಗೆ ಹೇಳಲಿ ನಾ ಕೃತಜ್ಞತೆಯನು. ನನಗೂ ನನ್ನ ಪ್ರೀತಿಗೆ ಮರು ಜೀವ ನೀಡಿದಕ್ಕೆ ಎಂದೆಂದಿಗೂ ಚಿರ ಬಾಗುವೆ ನಿನಗೆ...

                                                              # ಚಿತ್ತಾರ
         

Comments