ಅಣ್ಣನಿಗಾದ ಸಂಕಟ...

ಸೈಕಲ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಅಚ್ಚು-ವೆಚ್ಚು. ಚಿಕ್ಕ ವಯಸ್ಸಿನಲ್ಲಿ ಎಲ್ಲಾ ಮಕ್ಕಳೂ ಸೈಕಲ್ ಬೇಕೆಂದು ಹಠ ಹಿಡಿಯುವುದು ಸಹಜ. ಅದರಲ್ಲೂ ನನ್ನ ಅಣ್ಣನಿಗೂ ಸೈಕಲ್ ಅಂದರೆ ಪಂಚ ಪ್ರಾಣ. ಅಮ್ಮ ಬಳಿ ಸೈಕಲ್ ತೆಗೆದುಕೊಡಲು ಹೇಳಲು ಒಂದು ಕಡೆ ಭಯ. ಇಷ್ಟೆಲ್ಲಾ ಕಷ್ಟದ ನಡುವೆಯು ಸೈಕಲ್ ತಗೊಬೇಕು ಅನ್ನೊ ಕನಸು ಅವನಾ ದೊಡ್ಡ ಕನಸ್ಸೆಯಾಗಿತ್ತು.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಉಚಿತವಾಗಿ ಸೈಕಲ್‍ನ್ನು ಕೊಡುಗೆಯಾಗಿ ನೀಡುಬೇಕೆಂದು ಸರ್ಕಾರದಿಂದ ಘೋಷಣೆ ಜಾರಿಗೆ ಬಂದಿತ್ತು. ಅಂತಹ ಸಂದರ್ಭದಲ್ಲಿ ನನ್ನ ಅಣ್ಣ 8ನೇ ತರಗತಿಯಲ್ಲಿ ಕಲಿಯುತ್ತಿದ್ದ. ಆ ವಿಷಯ ತಿಳಿದು ಅಣ್ಣನಲ್ಲಿ ಆದ ಸಂತೋಷ ಹೇಳತೀರದು. ಮನೆ ಬಂದು ಅಮ್ಮನತ್ರ ಒಂದೇ ಉದಯರಾಗ ನಂಗೆ ಸೈಕಲ್ ಸಿಗುತ್ತೆ...ಸೈಕಲ್ ಬರುತ್ತೆ...ಇನ್ನೂ ನಾನು ಅದರಲ್ಲೇ ಶಾಲೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದ.



ಸೈಕಲ್ ವಿತರಿಸುವ ದಿನವೇ ಬಂದೇ ಬಿಟ್ಟಿತ್ತು...ವಿತರಿಸುವ ದಿನದಂದು ಅಮ್ಮನಾ ಕರಕೊಂಡು ಹೋಗುತ್ತಾನೆ ಶಾಲೆಗೆ...ನನಗೆ ಸೈಕಲ್ ಸಿಗುತ್ತೆ...ಇವತ್ತು ನಾನು ಅದರಲ್ಲೇ ಮನೆಗೆ ಬರುತ್ತೇನೆ. ಎಂದು ನಮ್ಮ ಜೊತೆ ಖುಷಿಯಾಗಿ ಹೇಳಿಕೊಳ್ಳುತ್ತಿದ್ದ. ನಂಜಿಸುತ್ತನೂ ಇದ್ದ. ನಿಮ್ಮನೂ ನಾನು ಅದರಲ್ಲೇ ಸುತ್ತಾಡಿಸುತ್ತೇನೆ ಅಂತೆಲ್ಲಾ ಹೇಳುತ್ತಿದ್ದ. ಅಂದು ಖುಷಿಯಾಗಿ ಶಾಲೆಗೆ ರೆಡಿಯಾಗಿ ಹೋಗಿದ್ದೆ ಹೋಗಿದ್ದು. ನಾನು ಅಕ್ಕ ತುಂಬಾ ಖುಷಿಯಾಗಿದ್ದೆವು ಇವತ್ತು ಸೈಕಲ್ ಬರುತ್ತೆ, ಅ ಸಂಜೆಗಾಗಿ ಕಾಯುತ್ತ ಕೂತೆವು.
ಎಲ್ಲಾ ಸೈಕಲ್‍ಗಳನ್ನು ಸಾಲಾಗಿ ನಿಲ್ಲಿಸಿರುವುದನ್ನು ನೋಡುವುದೆ ಒಂದು ಅಂದ. ಸೂರ್ಯನ ಕಿರಣಗಳು ಸೈಕಲ್ ಮೇಲೆ ಬಿದ್ದಾಗ ಹೊಳೆಯುವ ಸೈಕಲ್‍ಗಳನ್ನು ಕಂಡು ಮುಗ್ದ ಮನಸ್ಸುಗಳಿಗೆ ಆಗುವ ಸಂತೋಷ ಹೇಳಲಾಗದು. ನನ್ನ ಅಣ್ಣ ಮನಸ್ಸಲ್ಲೂ ಏನೆಲ್ಲಾ ಯೋಚನೆಗಳು ಇರಬಹುದು. ಆ ಒಂದು ಸೈಕಲ್‍ಗಾಗಿ ದಿನವಿಡೀ ಎಷ್ಟೊಂದು ಕನಸು ಇಟ್ಟಿರಬಹುದು. 


ಆ ಪುಟ್ಟ ಹೃದಯದಲಿ ದೊಡ್ಡ ಆತಂಕವೇ ಎದುರಾಯಿತು ಅದೇ ಸೈಕಲ್ ವಿತರಿಸುವ ಸಂದರ್ಭದಲ್ಲಿ ನನ್ನ ಅಣ್ಣನಿಗೆ ಸೈಕಲ್ ಸಿಗಲೇ ಇಲ್ಲ. ಯಾಕೆಂದರೆ ಬಿ.ಪಿ.ಎಲ್ ಕಾರ್ಡ್‍ಗೆ ಮಾತ್ರ ಸೈಕಲ್ ಸಿಗುತ್ತಿತ್ತು. ನಮ್ಮ ಮನೆಯ ಕಾರ್ಡ್ ಎ.ಪಿ.ಯಲ್ ಆಗಿದ್ದರಿಂದ ಸೈಕಲ್ ಅಣ್ಣನ ಕೈ ತಪ್ಪಿ ಹೋಗಿತ್ತು. ಈ ವಿಷಯ ಅಣ್ಣನಿಗೆ ತಿಳಿಯಲೇ ಇಲ್ಲ. ಸಪ್ಪೆ ಮುಖದಲ್ಲೇ ಮನೆಗೆ ಹಿಂದೆತಿರುಗುತ್ತಾನೆ. ಅ ಪುಟ್ಟ ಮನಸ್ಸಿನಲ್ಲಿ ದೊಡ್ಡ ಬಯಕೆ ಕೈ ತಪ್ಪಿ ಹೋದಾಗ ಎಷ್ಟೊಂದು ನೋವುಂಟಾಗಿರಬಹುದು...ಮನೆ ಬರುವಾಗ ತುಂಬಾ ಬೇಜಾರದಲ್ಲಿದ್ದ. ಅದೆ ಕೊನೆ ಮತ್ತೆ ಎಂದು ಸೈಕಲ್ ವಿಷಯ ತೆಗೆಯಲೇ ಇಲ್ಲ. 
ನಮ್ಮ ಮನೆಗೆ ಮತ್ತೆ ಸೈಕಲ್ ಆಗಮನ ಆಗಿದ್ದೆ ನನ್ನಿಂದ. ನಾನು ಅದೃಷ್ಟಕ್ಕೆ ಸರ್ಕಾರ ಶಾಲೆಯಲ್ಲೇ ವಿದ್ಯಾಭ್ಯಾಸ ಮುಂದುವರೆಸಿದೆ. ಅ ವರ್ಷದಿಂದ ಎಲ್ಲಾ ಬಡ ಹೆಣ್ಣುಮಕ್ಕಳಿಗೂ ಉಚಿತವಾಗಿ ಸೈಕಲ್ ವಿತರಿಸಬೇಕು ಎಂದು ಘೋಷಣೆ ಹೊರಡಿಸಿತ್ತು. ಅದೇ ನನ್ನ ಪಾಲಿಗೆ ಅದೃಷ್ಟ ಎನ್ನಬಹುದು. ನನಗಿಂತ ನನ್ನ ಅಣ್ಣಾನಿಗೆ ತುಂಬಾ ಖುಷಿಯಾಗಿರಬಹುದು. ಆ ಸೈಕಲ್‍ಗಾಗಿ ನನ್ನ ಅಣ್ಣ ಎಷ್ಟೊಂದು ಆಸೆ ಪಡುತ್ತಿದ್ದನ್ನು ನಾ ಕಾಣೆ.



ನಾನು ಸೈಕಲ್ ಜೊತೆ ಮನೆಗೆ ಆಗಮನ ಆದಾಗ ಮನೆಯಲ್ಲಿ ಎಲ್ಲರಿಗೂ ಸಂತೋಷ, ಅಣ್ಣನಿಗೊತ್ತು ಹೇಳ ತೀರದು ಅದರೆ ಸೈಕಲ್ ಮೇಲೆ ಇದ್ದ ಪ್ರೀತಿ ಅಷ್ಟ-ಕಷ್ಟೇ. ಅವನ ಮುಖದಲ್ಲಿ ಮತ್ತೆ ಸೈಕಲ್ ಆಸೆ ಹುಟ್ಟಿಸಿದ್ದು, ಅದನ್ನು ಕಂಡು ಕಿರುನಗೆ ಬಿರಿದ್ದು. ಅಂದು ಆದ ಸಂತೋಷ ಅಷ್ಟು-ಇಷ್ಟುಲ್ಲ.
ಸೈಕಲ್ ನಿಲ್ಲಿಸಿದ ಜಾಗದಲ್ಲೇ ಕಂಡು ನಾ ಖುಷಿಪಡುತ್ತಿದ್ದೆ. ಒಂದೊಂದು ಹಂತದಲ್ಲಿ ಸೈಕಲ್ ಬಿಡಲು ಕಲಿತೆ. ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಅಷ್ಟೊಂದು ಜೋಪಾನ ಮಾಡುತ್ತಿದ್ದೆ. ಹಬ್ಬ ದಿನಗಳು ಬಂದಾಗ ಅದಕ್ಕೂ ಪೂಜೆ ಮಾಡುತ್ತಿದೆವು ಹೀಗೆ ವರ್ಷಗಲೇ ಕಳೆದು ಹೋದ ಮೇಲೆ ಈ ಸೈಕಲ್ ನೆನಪುಗಳು ಮತ್ತೆ ಮತ್ತೆ ಕಾಡಲು ಶುರುವಾಗುತ್ತವೆ. ಹೈಸ್ಕೂಲ್ ಕಂಡಾಗ ಸೈಕಲ್ ನೆನಪುಗಳು. ನೆನಪುಗಳನ್ನು ಕೆದುಕುತ್ತ ಹೋದಂತೆ ಅದೆಷ್ಟೂ ನೆನಪುಗಳು ನಮ್ಮನ್ನ ಮತ್ತೆ ಅದೇ ಸ್ಥಾನದಲ್ಲಿರಿಸುವಂತೆ ಮಾಡುತ್ತೆ. ಇನ್ನೂ ಬರೀ ನೆನಪಿನಲ್ಲೇ ಸಾಗಬೇಕು.
                   
                                                       #ಚಿತ್ತಾರ
 

Comments