ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕನಸು-ನನಸು ಒಂದು ಬೆಸ್ಟ್ ಫ್ರೇಂಡ್ ಅಂತಾನೆ ಹೇಳಬಹುದು. ಕನಸು-ನನಸು ಆಗುವುದಕ್ಕೂ ಎಷ್ಟು ವರ್ಷ ಕಾಯಬೇಕು. ಅದೇ ಕನಸು ಕಾಣುವುದಕ್ಕೂ ಒಂದು ನಿಮಿಷ ಸಾಕು. ಇದೇ ಅಲ್ವಾ! ಕನಸಿಗೂ-ನನಸಿಗೂ ಇರೋ ವ್ಯತ್ಯಾಸ. ಕನಸಿನ ಬೆನ್ನೇರಿ ಬೇಟೆ ಹೋದಾಗ ಅಲ್ಲಿ ಅಪರಿಚಿತರ ಆಗಮನ ಜೊತೆ ಭಯನೋ ಸೃಷ್ಟಿಯಾಗುತ್ತೆ. ಅತೀ ಆಳವಾಗಿ ಕನಸನ್ನು ಬೆನ್ನೇಟ್ಟಿ ಹೋದಾಗ ಭಯ, ಆತಂಕದ ಸೆರೆಯಲಿ ಬಂಧಿಯಾಗುತ್ತೇವೆ. ಮುಂಜಾನೆಯ ಕನಸ್ಸು ನಿಜವಾಗುತ್ತೆ ಅಂತರೆ ಹಿರಿಯರು, ಅದರಲ್ಲೂ ಕೆಟ್ಟದ್ದು, ಒಳ್ಳೆಯದ್ದು ಎಂಬ ಬೇಧ-ಭಾವವು ತುಂಬಿಕೊಂಡಿದೆ. ಆ ದಿನ ರಾತ್ರಿ ವಿಪರೀತ ಕೆಲಸದ ಒತ್ತಡದಿಂದ ಮನೆಗೆ ಬೇಗ ಬಂದು ಕೂತ ಜಾಗದಲ್ಲೇ ನಿದ್ದೆಗೆ ಜಾರಿ ಹೋದೆ. ತೀರವಾದ ಕನಸೊಂದು ನನ್ನನೂ ಕೊಂಡುಹೊಗಿದ್ದು ಅದೇ ನಮ್ಮೂರ ಹಳೇ ಬಸ್‍ಸ್ಟಾಂಡ್ ಬಳಿ. ಕನಸಲ್ಲಿ ಮಾತು ಇಲ್ಲ ಕಥೆಯಿಲ್ಲ ಬರೀ ಮೌನವೇ ಸಂಭಾಷಣೆ. ಇಲ್ಲಿ ಕೊನೆ ಅನ್ನುವುದೇ ಇಲ್ಲ. ನಮಗೆ ಯಾವಾಗ ಎಚ್ಚರ ಆಗುತ್ತೊ ಅದೇ ಕನಸಿಗೂ ಕೊನೆ ಹಂತ. ಹೀಗೆ ನಾನು ಕನಸನ್ನು ಬೆನ್ನೇಟ್ಟಿ ಹೋದ ಸಂದರ್ಭದಲ್ಲಿ ಯಾರೋ ನನ್ನನಾ ಕರೆದಾಗೆ ಕೆಳಿಸಿತ್ತು ಮತ್ತೆ ಅದೇ ಕೂಗೊ ಧ್ವನಿ. ಹಿಂದೆ ತಿರುಗಿ ನೋಡಿದಾಗ ಯಾರೂ ಇಲ್ಲ, ಮತ್ತೆ ಅದೇ ಕೂಗೊ ಧ್ವನಿ...ಮತ್ತೊಮ್ಮೆ ಹಿಂದಿರುಗಿ ನೋಡಿದಾಗ ಯಾರೋ ಬಬ್ಬ ಅಪರಿಚಿತ...ನನಗೊ ಅವನ ಪರಿಚಯನೊ ಇಲ್ಲ..ಅವನಿಗೆ ನನ್ನ ಪರಿಚಯ ಇರುವಾಗೆ ನನ್ನ ಜೊತೆ ಮಾತಾನಡುತ್ತ, ನಗುತ್ತ ಇದ...